Ablution

1- ಉಸ್ಮಾನ್ ಬಿನ್ ಅಫ್ಫಾನ್ ರವರ ವಿಮೋಚಿತ ಗುಲಾಮರಾದ ಹುಮ್ರಾನ್ ರಿಂದ ವರದಿ: ಒಮ್ಮೆ ಉಸ್ಮಾನ್ ಬಿನ್ ಅಫ್ಫಾನ್ ವುದೂ ನಿರ್ವಹಿಸಲು ನೀರು ತರಿಸುವುದನ್ನು ಅವರು ಕಂಡರು. ಅವರು (ಉಸ್ಮಾನ್) ಪಾತ್ರೆಯಿಂದ ತಮ್ಮ ಎರಡು ಕೈಗಳಿಗೆ ನೀರು ಸುರಿದು, ಅವುಗಳನ್ನು ಮೂರು ಬಾರಿ ತೊಳೆದರು. ನಂತರ ಬಲಗೈಯನ್ನು ನೀರಿಗೆ ತೂರಿಸಿದರು. ನಂತರ ಬಾಯಿ ಮುಕ್ಕಳಿಸಿ ಮೂಗಿಗೆ ನೀರೆಳೆದು ಹೊರಬಿಟ್ಟರು. ನಂತರ ಮೂರು ಬಾರಿ ಮುಖವನ್ನು ತೊಳೆದರು. ಮೊಣಕೈಗಳ ವರೆಗೆ ಎರಡು ಕೈಗಳನ್ನು ಮೂರು ಬಾರಿ ತೊಳೆದರು. ನಂತರ ತಲೆಯನ್ನು ಸವರಿದರು. ನಂತರ ಎರಡು ಕಾಲುಗಳನ್ನು ಮೂರು ಬಾರಿ ತೊಳೆದರು. ನಂತರ ಹೇಳಿದರು: "ನಾನಿಲ್ಲಿ ವುದೂ ನಿರ್ವಹಿಸಿದಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸುವುದನ್ನು ನಾನು ಕಂಡಿದ್ದೇನೆ." ಅವರು (ಪ್ರವಾದಿಯವರು) ಹೇಳಿದರು: "@ಯಾರು ನಾನಿಲ್ಲಿ ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ, ಇಹಲೋಕದ ಯಾವುದೇ ವಿಷಯದ ಬಗ್ಗೆ ಏನೂ ಯೋಚಿಸದೆ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ ಅವರ ಗತ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆ.*"

7- ಅಮ್ರ್ ಬಿನ್ ಅಬೂ ಹಸನ್ ಅಬ್ದುಲ್ಲಾ ಬಿನ್ ಝೈದ್‌ರೊಂದಿಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ (ಅಂಗಸ್ನಾನ) ಬಗ್ಗೆ ವಿಚಾರಿಸುವುದನ್ನು ನೋಡಿದೆ. ಆಗ ಅಬ್ದುಲ್ಲಾ ಬಿನ್ ಝೈದ್ ನೀರಿನ ಪಾತ್ರೆಯನ್ನು ತರಿಸಿ @ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ ತೋರಿಸಿದರು.* ಅವರು ಪಾತ್ರೆಯಿಂದ ತನ್ನ ಕೈಗಳಿಗೆ ನೀರನ್ನು ಸುರಿದು ಅವುಗಳನ್ನು ಮೂರು ಬಾರಿ ತೊಳೆದರು. ನಂತರ ತಮ್ಮ ಕೈಯನ್ನು ಪಾತ್ರೆಗೆ ತೂರಿಸಿ, ಬಾಯಿ ಮುಕ್ಕಳಿಸಿದರು, ನೀರನ್ನು ಮೂಗಿಗೆ ರಭಸದಿಂದ ಎಳೆದು ಹೊರಬಿಟ್ಟರು. ಅವರು ಇದನ್ನು ಮೂರು ಬಾರಿ ಮಾಡಿದರು. ನಂತರ ಕೈಯನ್ನು ಪಾತ್ರೆಗೆ ತೂರಿಸಿ ಮೂರು ಬಾರಿ ಮುಖವನ್ನು ತೊಳೆದರು. ನಂತರ ಎರಡು ಬಾರಿ ಕೈಗಳನ್ನು ಮೊಣಕೈಗಳ ತನಕ ತೊಳೆದರು. ನಂತರ ಕೈಯನ್ನು ನೀರಿಗೆ ತೂರಿಸಿ ತಲೆಯನ್ನು ಮುಂದಿನಿಂದ ಹಿಂದಕ್ಕೆ ಮತ್ತು ಹಿಂದಿನಿಂದ ಮುಂದಕ್ಕೆ ಒಂದು ಬಾರಿ ಸವರಿದರು. ನಂತರ ಹರಡುಗಂಟುಗಳ ತನಕ ಕಾಲುಗಳನ್ನು ತೊಳೆದರು.

8- "ನಿಮ್ಮಲ್ಲೊಬ್ಬನು ಮಲಗಿರುವಾಗ ಶೈತಾನನು ಅವನ ಕತ್ತಿನ ಹಿಂಭಾಗದಲ್ಲಿ ಮೂರು ಗಂಟುಗಳನ್ನು ಹಾಕಿ, ಅವುಗಳಲ್ಲಿ ಪ್ರತಿಯೊಂದು ಗಂಟಿಗೂ ಗುದ್ದುತ್ತಾ, "ರಾತ್ರಿ ಇನ್ನೂ ದೀರ್ಘವಾಗಿದೆ; ಮಲಗು" ಎನ್ನುತ್ತಿರುವನು.* ಅವನೇನಾದರೂ ಎದ್ದು ಅಲ್ಲಾಹನನ್ನು ಸ್ಮರಿಸಿದರೆ, ಒಂದು ಗಂಟು ಬಿಚ್ಚಿಹೋಗುತ್ತದೆ. ಅವನು ವುದೂ ನಿರ್ವಹಿಸಿದರೆ ಇನ್ನೊಂದು ಗಂಟು ಬಿಚ್ಚಿಹೋಗುತ್ತದೆ. ಅವನು ನಮಾಝ್ ಮಾಡಿದರೆ ಮೂರನೆಯ ಗಂಟು ಬಿಚ್ಚಿಹೋಗುತ್ತದೆ. ಆಗ ಅವನು ಉಲ್ಲಾಸದಿಂದ ಶುದ್ಧ ಮನಸ್ಸಿನೊಂದಿಗೆ ಬೆಳಗನ್ನು ಪ್ರವೇಶಿಸುತ್ತಾನೆ. ಇಲ್ಲದಿದ್ದರೆ ಅವನು ಕೆಟ್ಟ ಮನಸ್ಸಿನೊಂದಿಗೆ ಆಲಸ್ಯದಿಂದ ಬೆಳಗನ್ನು ಪ್ರವೇಶಿಸುತ್ತಾನೆ."