ಒಬ್ಬ ಮುಸಲ್ಮಾನನು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಎದ್ದು ನಿಂತು ತನ್ನ ಹೃದಯ ಮತ್ತು ಮುಖವನ್ನು ಕೇಂದ್ರೀಕರಿಸಿ…

ಒಬ್ಬ ಮುಸಲ್ಮಾನನು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಎದ್ದು ನಿಂತು ತನ್ನ ಹೃದಯ ಮತ್ತು ಮುಖವನ್ನು ಕೇಂದ್ರೀಕರಿಸಿ ಏಕಾಗ್ರತೆಯಿಂದ ಎರಡು ರಕಅತ್‌ ನಮಾಝ್ ನಿರ್ವಹಿಸಿದರೆ, ಅವನಿಗೆ ಸ್ವರ್ಗವು ಕಡ್ಡಾಯವಾಗದೇ ಇರುವುದಿಲ್ಲ

ಉಕ್ಬ ಬಿನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಮುಸಲ್ಮಾನನು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಎದ್ದು ನಿಂತು ತನ್ನ ಹೃದಯ ಮತ್ತು ಮುಖವನ್ನು ಕೇಂದ್ರೀಕರಿಸಿ ಏಕಾಗ್ರತೆಯಿಂದ ಎರಡು ರಕಅತ್‌ ನಮಾಝ್ ನಿರ್ವಹಿಸಿದರೆ, ಅವನಿಗೆ ಸ್ವರ್ಗವು ಕಡ್ಡಾಯವಾಗದೇ ಇರುವುದಿಲ್ಲ." ನಾನು ಹೇಳಿದೆ: "ಇದು ಎಷ್ಟೊಂದು ಉತ್ತಮವಾಗಿದೆ!" ಆಗ ನನ್ನ ಮುಂದಿದ್ದ ಒಬ್ಬ ವ್ಯಕ್ತಿ ಹೇಳಿದರು: "ಅವರು ಅದಕ್ಕಿಂತ ಮೊದಲು ಹೇಳಿದ್ದು ಅದಕ್ಕಿಂತಲೂ ಉತ್ತಮವಾಗಿದೆ." ನಾನು ಅತ್ತ ನೋಡಿದಾಗ ಅದು ಉಮರ್ ಆಗಿದ್ದರು. ಅವರು ಹೇಳಿದರು: "ನೀನು ಈಗಷ್ಟೇ ಬಂದಿರುವುದೆಂದು ತೋರುತ್ತದೆ. ಅವರು (ಇದಕ್ಕಿಂತ ಮೊದಲು) ಹೇಳಿದ್ದೇನೆಂದರೆ: "ನಿಮ್ಮಲ್ಲೊಬ್ಬನು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ ನಂತರ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ದಾಸ ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ ಎಂದು ಹೇಳಿದರೆ, ಅವನಿಗೆ ಸ್ವರ್ಗದ ಎಂಟು ಬಾಗಿಲುಗಳನ್ನು ತೆರೆದುಕೊಡಲಾಗುತ್ತದೆ. ಅವನು ಇಚ್ಛಿಸುವ ಬಾಗಿಲಿನಿಂದ ಅವನಿಗೆ ಪ್ರವೇಶ ಮಾಡಬಹುದು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರೊಡನೆ ಮಾತನಾಡುತ್ತಾ ಎರಡು ಮಹಾ ಶ್ರೇಷ್ಠತೆಗಳ ಬಗ್ಗೆ ತಿಳಿಸುತ್ತಾರೆ. ಒಂದು: ಒಬ್ಬ ವ್ಯಕ್ತಿ ಉತ್ತಮ ರೀತಿಯಲ್ಲಿ ವುದೂ ಅನ್ನು ಅದರ ಎಲ್ಲಾ ನಿಯಮಗಳನ್ನು ಪಾಲಿಸುತ್ತಾ ಪೂರ್ಣವಾಗಿ ಮತ್ತು ಎಲ್ಲಾ ಅಂಗಗಳಿಗೂ ಅವುಗಳನ್ನು ತೊಳೆಯಬೇಕಾದ ರೀತಿಯಲ್ಲೇ ತೊಳೆದು ವುದೂ ನಿರ್ವಹಿಸಿ ನಂತರ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ದಾಸ ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ ಎಂದು ಹೇಳಿದರೆ, ಅವನಿಗೆ ಸ್ವರ್ಗದ ಎಂಟು ಬಾಗಿಲುಗಳನ್ನು ತೆರೆದುಕೊಡಲಾಗುತ್ತದೆ. ಅವನು ಇಚ್ಛಿಸುವ ಬಾಗಿಲಿನಿಂದ ಅವನು ಪ್ರವೇಶ ಮಾಡಬಹುದು. ಎರಡು: ಒಬ್ಬ ವ್ಯಕ್ತಿ ಪೂರ್ಣ ರೂಪದಲ್ಲಿ ವುದೂ ನಿರ್ವಹಿಸಿ, ನಂತರ ಎದ್ದು ನಿಂತು ನಿಷ್ಕಳಂಕವಾಗಿ, ಪೂರ್ಣ ವಿನಮ್ರತೆಯಿಂದ, ತನ್ನ ಮುಖ ಮತ್ತು ದೇಹದ ಎಲ್ಲಾ ಅಂಗಗಳನ್ನು ಅಲ್ಲಾಹನಿಗೆ ಶರಣಾಗಿಸಿ, ಎರಡು ರಕಅತ್‌ ನಮಾಝ್ ನಿರ್ವಹಿಸಿದರೆ, ಅವನಿಗೆ ಸ್ವರ್ಗವು ಕಡ್ಡಾಯವಾಗಿದೆ.

فوائد الحديث

ಅಲ್ಲಾಹನ ಮಹಾ ಔದಾರ್ಯವನ್ನು ತಿಳಿಸಲಾಗಿದೆ. ಏಕೆಂದರೆ ಅವನು ಚಿಕ್ಕ ಕರ್ಮಗಳಿಗೆ ದೊಡ್ಡ ಪ್ರತಿಫಲವನ್ನು ನೀಡುತ್ತಾನೆ.

ಉತ್ತಮವಾಗಿ ಮತ್ತು ಪೂರ್ಣವಾಗಿ ವುದೂ ನಿರ್ವಹಿಸುವುದು ಹಾಗೂ ಅದರ ನಂತರ ವಿನಮ್ರತೆಯಿಂದ ಎರಡು ರಕಅತ್‌ ನಮಾಝ್ ನಿರ್ವಹಿಸುವುದು ಧರ್ಮದಲ್ಲಿರುವ ನಿಯಮವಾಗಿದೆ ಹಾಗೂ ಅದಕ್ಕೆ ಮಹಾ ಪ್ರತಿಫಲವಿದೆಯೆಂದು ತಿಳಿಸಲಾಗಿದೆ.

ಉತ್ತಮವಾಗಿ ವುದೂ ನಿರ್ವಹಿಸುವುದು ಮತ್ತು ಅದರ ನಂತರ ಈ ಪ್ರಾರ್ಥನೆಯನ್ನು ಪಠಿಸುವುದು ಸ್ವರ್ಗ ಪ್ರವೇಶಕ್ಕೆ ಕಾರಣವಾಗುತ್ತದೆ.

ಸ್ನಾನ ಮಾಡಿದ ನಂತರವೂ ಈ ಪ್ರಾರ್ಥನೆಯನ್ನು ಪಠಿಸುವುದು ಅಪೇಕ್ಷಣೀಯವಾಗಿದೆ.

ಜ್ಞಾನವನ್ನು ಕಲಿಯುವ ಮತ್ತು ಪ್ರಚಾರ ಮಾಡುವ ಒಳಿತಿನ ವಿಷಯದಲ್ಲಿ ಸಹಾಬಿಗಳಿಗಿದ್ದ ಉತ್ಸಾಹ ಮತ್ತು ಅದಕ್ಕಾಗಿ ಅವರು ಪರಸ್ಪರ ಸಹಕರಿಸುತ್ತಿದ್ದುದನ್ನು ತಿಳಿಸಲಾಗಿದೆ. ಅವರ ಉಪಜೀವನದ ವಿಷಯದಲ್ಲೂ ಸಹ.

ವುದೂ ನಿರ್ವಹಿಸಿದ ನಂತರ ಪ್ರಾರ್ಥಿಸುವುದರಿಂದ ಹೃದಯವು ಶುದ್ಧವಾಗುತ್ತದೆ ಮತ್ತು ಶಿರ್ಕ್ ನಿಂದ ಮುಕ್ತವಾಗುತ್ತದೆ. ಅದೇ ರೀತಿ ವುದೂ ನಿರ್ವಹಿಸುವುದರಿಂದ ದೇಹವು ಶುದ್ಧವಾಗುತ್ತದೆ ಮತ್ತು ಮಾಲಿನ್ಯಗಳಿಂದ ಮುಕ್ತವಾಗುತ್ತದೆ.

التصنيفات

Recommended Acts and Manners of Ablution