ಹಿಮ್ಮಡಿಗಳಿಗೆ ನರಕಾಗ್ನಿಯಿಂದ ವಿನಾಶವಿದೆ. ಪೂರ್ಣವಾಗಿ ವುದೂ ನಿರ್ವಹಿಸಿರಿ

ಹಿಮ್ಮಡಿಗಳಿಗೆ ನರಕಾಗ್ನಿಯಿಂದ ವಿನಾಶವಿದೆ. ಪೂರ್ಣವಾಗಿ ವುದೂ ನಿರ್ವಹಿಸಿರಿ

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾವು ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾದಿಂದ ಮದೀನಕ್ಕೆ ಹಿಂದಿರುಗಿದೆವು. ಹೀಗೆ ನಾವು ದಾರಿ ಮಧ್ಯೆ ಒಂದು ನೀರಿನ ಸ್ಥಳ ತಲುಪಿದಾಗ, ಅಸರ್ ನಮಾಝ್‌ನ ಸಮಯದಲ್ಲಿ ನಮ್ಮಲ್ಲಿ ಒಂದು ಗುಂಪು ಜನರು ಆತುರದಿಂದ ಓಡಿ ಆತುರದಿಂದ ವುದೂ ನಿರ್ವಹಿಸಿದರು. ನಾವು ಅವರ ಬಳಿಗೆ ತಲುಪಿದಾಗ, ಅವರ ಹಿಮ್ಮಡಿಗಳು ನೀರು ತಾಗದಂತೆ ಕಾಣುತ್ತಿದ್ದವು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಿಮ್ಮಡಿಗಳಿಗೆ ನರಕಾಗ್ನಿಯಿಂದ ವಿನಾಶವಿದೆ. ಪೂರ್ಣವಾಗಿ ವುದೂ ನಿರ್ವಹಿಸಿರಿ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಂಗಡಿಗರೊಂದಿಗೆ ಮಕ್ಕಾದಿಂದ ಮದೀನಕ್ಕೆ ಪ್ರಯಾಣ ಬೆಳೆಸಿದರು. ದಾರಿಮಧ್ಯೆ ಅವರು ನೀರನ್ನು ಕಂಡರು. ಆಗ ಕೆಲವು ಸಹಾಬಿಗಳು ಅಸರ್ ನಮಾಝ್‌ಗೆ ವುದೂ ಮಾಡಲು ಆತುರದಿಂದ ಓಡಿದರು. ಅವರು ಎಷ್ಟರಮಟ್ಟಿಗೆ ಆತುರಪಟ್ಟರೆಂದರೆ, ಅವರ ಪಾದಗಳ ಹಿಂಭಾಗವು ನೋಡುಗರಿಗೆ ನೀರು ತಾಗದೆ ಒಣಗಿರುವಂತೆ ಕಾಣಿಸುತ್ತಿದ್ದವು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ವುದೂ ನಿರ್ವಹಿಸುವಾಗ ಪಾದದ ಹಿಂಭಾಗವನ್ನು ಸರಿಯಾಗಿ ತೊಳೆಯದವರಿಗೆ ನರಕದಲ್ಲಿ ಶಿಕ್ಷೆ ಮತ್ತು ವಿನಾಶವಿದೆ. ವುದೂವನ್ನು ಪೂರ್ಣವಾಗಿ ನಿರ್ವಹಿಸಲು ಪೂರ್ಣ ಗಮನ ನೀಡಿರಿ ಎಂದು ಅವರು ಆದೇಶಿಸಿದರು.

فوائد الحديث

ವುದೂ ನಿರ್ವಹಿಸುವಾಗ ಎರಡು ಪಾದಗಳನ್ನು ತೊಳೆಯುವುದು ಕಡ್ಡಾಯವಾಗಿದೆ. ಏಕೆಂದರೆ, ಅವುಗಳನ್ನು ಸವರುವುದು ಸಾಕಾಗುತ್ತಿದ್ದರೆ, ಹಿಮ್ಮಡಿಯನ್ನು ತೊಳೆಯದವರಿಗೆ ಅವರು ನರಕಾಗ್ನಿಯ ಬಗ್ಗೆ ಎಚ್ಚರಿಸುತ್ತಿರಲಿಲ್ಲ.

ತೊಳೆಯಬೇಕಾದ ಅಂಗಗಳನ್ನು ಪೂರ್ಣವಾಗಿ ನೀರು ಹರಿಸಿ ತೊಳೆಯುವುದು ಕಡ್ಡಾಯವಾಗಿದೆ. ಕಡ್ಡಾಯವಾಗಿ ಶುದ್ಧೀಕರಿಸಬೇಕಾದ ಅಂಗವನ್ನು—ಅದರ ಸಣ್ಣ ಭಾಗವನ್ನಾದರೂ ಸರಿ—ಯಾರು ಉದ್ದೇಶಪೂರ್ವಕವಾಗಿ ಅಥವಾ ಅಸಡ್ಡೆಯಿಂದ ನಿರ್ಲಕ್ಷಿಸುತ್ತಾರೋ, ಅವರ ನಮಾಝ್ ಸಿಂಧುವಾಗುವುದಿಲ್ಲ.

ಅರಿವಿಲ್ಲದವರಿಗೆ ಕಲಿಸುವುದರ ಮತ್ತು ಮಾರ್ಗದರ್ಶನ ಮಾಡುವುದರ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.

ಯಾರಾದರೂ ಕಡ್ಡಾಯ ಕಾರ್ಯಗಳನ್ನು ಮತ್ತು ಐಚ್ಛಿಕ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದು ಕಂಡರೆ ತಿಳಿದವರು ಅದನ್ನು ಸೂಕ್ತವಾದ ಶೈಲಿಯಲ್ಲಿ ಖಂಡಿಸಬೇಕು.

ಮುಹಮ್ಮದ್ ಬಿನ್ ಇಸ್‌ಹಾಕ್ ದೆಹ್ಲವಿ ಹೇಳಿದರು: ವುದೂವನ್ನು ಪೂರ್ಣವಾಗಿ ನಿರ್ವಹಿಸುವುದರಲ್ಲಿ ಮೂರು ವಿಧಗಳಿವೆ: ಕಡ್ಡಾಯ, ಅಂದರೆ ತೊಳೆಯಬೇಕಾದ ಸ್ಥಳಕ್ಕೆ ಪೂರ್ಣ ಗಮನ ನೀಡಿ ಒಂದು ಬಾರಿ ತೊಳೆಯುವುದು. ಐಚ್ಛಿಕ, ಅಂದರೆ ಮೂರು ಬಾರಿ ತೊಳೆಯುವುದು. ಅಪೇಕ್ಷಣೀಯ, ಅಂದರೆ ಮೂರು ಬಾರಿ ತೊಳೆಯುವುದನ್ನು ದೀರ್ಘವಾಗಿ ನಿರ್ವಹಿಸುವುದು.

التصنيفات

Method of Ablution