ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೊಡ್ಡ ಅಶುದ್ಧಿಯಿಂದಾಗಿ (ಜನಾಬತ್) ಸ್ನಾನ ಮಾಡುವಾಗ, ಮೊದಲು…

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೊಡ್ಡ ಅಶುದ್ಧಿಯಿಂದಾಗಿ (ಜನಾಬತ್) ಸ್ನಾನ ಮಾಡುವಾಗ, ಮೊದಲು ಕೈಗಳನ್ನು ತೊಳೆದು, ನಂತರ ನಮಾಝ್‌ಗಾಗಿ ವುದೂ (ಅಂಗಸ್ನಾನ) ಮಾಡುವಂತೆ ವುದೂ ಮಾಡುತ್ತಿದ್ದರು. ನಂತರ ಅವರು ಸ್ನಾನ ಮಾಡುತ್ತಿದ್ದರು

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೊಡ್ಡ ಅಶುದ್ಧಿಯಿಂದಾಗಿ (ಜನಾಬತ್) ಸ್ನಾನ ಮಾಡುವಾಗ, ಮೊದಲು ಕೈಗಳನ್ನು ತೊಳೆದು, ನಂತರ ನಮಾಝ್‌ಗಾಗಿ ವುದೂ (ಅಂಗಸ್ನಾನ) ಮಾಡುವಂತೆ ವುದೂ ಮಾಡುತ್ತಿದ್ದರು. ನಂತರ ಅವರು ಸ್ನಾನ ಮಾಡುತ್ತಿದ್ದರು. ನಂತರ ಅವರು ನೀರು ಕೂದಲಿನ ಬುಡದಲ್ಲಿರುವ ಚರ್ಮಕ್ಕೆ ತಲುಪಿದೆಯೆಂದು ಖಾತ್ರಿಯಾಗುವ ತನಕ ಕೈಬೆರಳುಗಳನ್ನು ಕೂದಲುಗಳ ಒಳಗೆ ತೂರಿಸಿ ತೊಳೆಯುತ್ತಿದ್ದರು. ನಂತರ ದೇಹದ ಮೇಲೆ ಮೂರು ಬಾರಿ ನೀರು ಸುರಿಯುತ್ತಿದ್ದರು. ನಂತರ ದೇಹದ ಉಳಿದ ಭಾಗಗಳನ್ನು ತೊಳೆಯುತ್ತಿದ್ದರು." ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: "ನಾನು ಮತ್ತು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬರ ನಂತರ ಒಬ್ಬರು ನೀರು ಸೇದುತ್ತಾ ಒಂದೇ ನೀರಿನ ಪಾತ್ರೆಯಿಂದ ಸ್ನಾನ ಮಾಡುತ್ತಿದ್ದೆವು."

[صحيح] [رواه البخاري]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೊಡ್ಡ ಅಶುದ್ಧಿಯಿಂದಾಗಿ ಸ್ನಾನ ಮಾಡಲು ಬಯಸಿದರೆ, ಮೊದಲು ಕೈಗಳನ್ನು ತೊಳೆಯುತ್ತಿದ್ದರು ನಂತರ ನಮಾಝಿಗೆ ವುದೂ ಮಾಡುವಂತೆ ವುದೂ ಮಾಡುತ್ತಿದ್ದರು. ನಂತರ ದೇಹದ ಮೇಲೆ ನೀರು ಸುರಿಯುತ್ತಿದ್ದರು. ನಂತರ ನೀರು ತಲೆಗೂದಲ ಬುಡಕ್ಕೆ ತಲುಪಿ ಚರ್ಮವು ಒದ್ದೆಯಾಗಿದೆಯೆಂದು ಖಾತ್ರಿಯಾಗುವ ತನಕ ಕೈಬೆರಳುಗಳನ್ನು ಕೂದಲಿಗೆ ತೂರಿಸಿ ತೊಳೆಯುತ್ತಿದ್ದರು. ನಂತರ ದೇಹದ ಉಳಿದ ಭಾಗವನ್ನು ತೊಳೆಯುತ್ತಿದ್ದರು. ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: "ನಾನು ಮತ್ತು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬರ ನಂತರ ಒಬ್ಬರು ನೀರು ಸೇದುತ್ತಾ ಒಂದೇ ನೀರಿನ ಪಾತ್ರೆಯಿಂದ ಸ್ನಾನ ಮಾಡುತ್ತಿದ್ದೆವು."

فوائد الحديث

ಸ್ನಾನದಲ್ಲಿ ಎರಡು ವಿಧಗಳಿವೆ: ಪರ್ಯಾಪ್ತ ಮತ್ತು ಸಂಪೂರ್ಣ. ಪರ್ಯಾಪ್ತ ಸ್ನಾನ ಎಂದರೆ ದೇಹವನ್ನು ಶುಚೀಕರಿಸುತ್ತೇನೆಂದು ನಿಯ್ಯತ್ (ಸಂಕಲ್ಪ) ಮಾಡಿ, ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀರೆಳೆದು ಹೊರಬಿಡುವುದು ಸೇರಿದಂತೆ ಸಂಪೂರ್ಣ ದೇಹವನ್ನು ತೊಳೆಯುವುದು. ಸಂಪೂರ್ಣ ಸ್ನಾನ ಎಂದರೆ ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ನಾನ ಮಾಡಿದಂತೆ ಸ್ನಾನ ಮಾಡುವುದು.

ದೊಡ್ಡ ಅಶುದ್ಧಿ (ಜನಾಬತ್) ಯಲ್ಲಿರುವವರು ಎಂದರೆ, ವೀರ್ಯ ಸ್ಖಲನವಾದವರು ಅಥವಾ ಸಂಭೋಗ ಮಾಡಿದವರು. ಅವರಿಗೆ ಸ್ಖಲನವಾಗದಿದ್ದರೂ ಸಹ.

ದಂಪತಿಗಳು ಒಬ್ಬರು ಇನ್ನೊಬ್ಬರ ಖಾಸಗಿ ಭಾಗವನ್ನು ನೋಡಲು ಮತ್ತು ಒಂದೇ ಪಾತ್ರೆಯಿಂದ ಸ್ನಾನ ಮಾಡಲು ಅನುಮತಿಯಿದೆ.

التصنيفات

Ritual Bath