ನಿಶ್ಚಯವಾಗಿಯೂ ನೀವು ನಿಮಗಿಂತ ಮೊದಲಿನವರ ನಡವಳಿಕೆಗಳನ್ನು ಗೇಣು-ಗೇಣಾಗಿ ಮತ್ತು ಮೊಳ-ಮೊಳವಾಗಿ ಹಿಂಬಾಲಿಸಲಿದ್ದೀರಿ

ನಿಶ್ಚಯವಾಗಿಯೂ ನೀವು ನಿಮಗಿಂತ ಮೊದಲಿನವರ ನಡವಳಿಕೆಗಳನ್ನು ಗೇಣು-ಗೇಣಾಗಿ ಮತ್ತು ಮೊಳ-ಮೊಳವಾಗಿ ಹಿಂಬಾಲಿಸಲಿದ್ದೀರಿ

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ನೀವು ನಿಮಗಿಂತ ಮೊದಲಿನವರ ನಡವಳಿಕೆಗಳನ್ನು ಗೇಣು-ಗೇಣಾಗಿ ಮತ್ತು ಮೊಳ-ಮೊಳವಾಗಿ ಹಿಂಬಾಲಿಸಲಿದ್ದೀರಿ. ಎಲ್ಲಿಯವರೆಗೆಂದರೆ, ಅವರೊಂದು ಓತಿಯ ಬಿಲದೊಳಗೆ ನುಸುಳಿದರೆ ನೀವು ಕೂಡ ಅವರನ್ನು ಹಿಂಬಾಲಿಸುವಿರಿ." ನಾವು ಕೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ಯಹೂದಿಗಳು ಮತ್ತು ಕ್ರೈಸ್ತರೇ?" ಅವರು ಉತ್ತರಿಸಿದರು: “ಅವರಲ್ಲದೆ ಇನ್ನಾರು?"

[صحيح] [متفق عليه]

الشرح

ತಮ್ಮ ಕಾಲಾನಂತರ ತಮ್ಮ ಸಮುದಾಯದ ಕೆಲವರಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಿದ್ದಾರೆ. ಅದೇನೆಂದರೆ, ಅವರು ಯಹೂದಿಗಳು ಮತ್ತು ಕ್ರೈಸ್ತರ ವಿಶ್ವಾಸಗಳು, ಕರ್ಮಗಳು, ಆಚಾರಗಳು ಮತ್ತು ಸಂಪ್ರದಾಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಾಚೂತಪ್ಪದೆ ಗೇಣು-ಗೇಣಾಗಿ ಮತ್ತು ಮೊಳ-ಮೊಳವಾಗಿ ಹಿಂಬಾಲಿಸುವರು. ಎಲ್ಲಿಯವರೆಗೆಂದರೆ, ಅವರೊಂದು ಓತಿಯ ಬಿಲದೊಳಗೆ ನುಸುಳಿದರೆ ಇವರು ಕೂಡ ಅವರ ಹಿಂದೆ ಅದರೊಳಗೆ ನುಸುಳುವರು.

فوائد الحديث

ಇದು ಪ್ರವಾದಿತ್ವದ ಚಿಹ್ನೆಗಳಲ್ಲಿ ಒಂದಾಗಿದೆ. ಏಕೆಂದರೆ, ಇದು ಸಂಭವಿಸುವುದಕ್ಕೆ ಮೊದಲೇ ಅವರು ಇದನ್ನು ತಿಳಿಸಿದ್ದಾರೆ. ಇದು ಅವರು ತಿಳಿಸಿದಂತೆಯೇ ಸಂಭವಿಸಿದೆ.

ಮುಸಲ್ಮಾನರು ಸತ್ಯನಿಷೇಧಿಗಳನ್ನು ಅನುಕರಿಸುವುದನ್ನು ನಿಷೇಧಿಸಲಾಗಿದೆ. ಅದು ಅವರ ವಿಶ್ವಾಸಗಳು, ಆರಾಧನೆಗಳು, ಹಬ್ಬಗಳು, ಅಥವಾ ಅವರಿಗೆ ಮಾತ್ರ ಸೀಮಿತವಾದ ರೀತಿ-ರಿವಾಜುಗಳಲ್ಲಾದರೂ ಸಹ.

ಅಗ್ರಾಹ್ಯ ವಿಷಯಗಳನ್ನು ಗ್ರಾಹ್ಯ ಉದಾಹರಣೆಗಳ ಮೂಲಕ ವಿವರಿಸುವುದು ಇಸ್ಲಾಮಿನ ಒಂದು ಬೋಧನಾ ಶೈಲಿಯಾಗಿದೆ.

ದುಬ್ಬ್ (ಮರುಭೂಮಿಯ ಓತಿ): ಇದೊಂದು ಜೀವಿಯಾಗಿದ್ದು ಇದರ ಬಿಲವು ಅತ್ಯಂತ ಕತ್ತಲೆ ಮತ್ತು ದುರ್ವಾಸನೆಯನ್ನು ಹೊಂದಿರುತ್ತದೆ. ಇದು ಹೆಚ್ಚಾಗಿ ಮರುಭೂಮಿಗಳಲ್ಲಿ ಕಂಡುಬರುವ ಸರೀಸೃಪ ಜಾತಿಗೆ ಸೇರಿದ ಜೀವಿಯಾಗಿದೆ. ಇಲ್ಲಿ ಓತಿಯ ಬಿಲವನ್ನು ಪ್ರತ್ಯೇಕವಾಗಿ ಹೇಳಲು ಕಾರಣವೇನೆಂದರೆ, ಅದು ಅತ್ಯಂತ ಇಕ್ಕಟ್ಟಿನ ಮತ್ತು ಕೆಟ್ಟ ಸ್ಥಳವಾಗಿದೆ. ಅದೂ ಅಲ್ಲದೆ, ಒಂದು ವೇಳೆ ಅವರು (ಯಹೂದಿಗಳು ಮತ್ತು ಕ್ರೈಸ್ತರು) ಇಂತಹ ಇಕ್ಕಟ್ಟಿನ ಮತ್ತು ಕೆಟ್ಟ ಸ್ಥಳದೊಳಗೆ ನುಸುಳಿದರೆ, ಅವರ ಕುರುಹುಗಳನ್ನು ಹಿಂಬಾಲಿಸುವ ಮತ್ತು ಅವರ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳುವ ಈ ಜನರು ಕೂಡ ಅವರ ಹಿಂದೆಯೇ ಹೋಗಲಿದ್ದಾರೆ! ಸಹಾಯ ಬೇಡಲಾಗುವವನು ಅಲ್ಲಾಹು ಮಾತ್ರ.

التصنيفات

Forbidden Emulation