ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮ್ಮುಖದಲ್ಲಿ ರಾತ್ರಿಯಿಡೀ ಮಲಗಿ ಬೆಳಿಗ್ಗೆಯವರೆಗೂ ಎದ್ದೇಳದ ಒಬ್ಬ…

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮ್ಮುಖದಲ್ಲಿ ರಾತ್ರಿಯಿಡೀ ಮಲಗಿ ಬೆಳಿಗ್ಗೆಯವರೆಗೂ ಎದ್ದೇಳದ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲಾಯಿತು. ಆಗ ಅವರು ಹೇಳಿದರು: “ಅವನು ಎಂತಹ ವ್ಯಕ್ತಿಯೆಂದರೆ, ಅವನ ಕಿವಿಗಳಲ್ಲಿ (ಅಥವಾ ಅವರು ಹೀಗೆ ಹೇಳಿದರು: ಅವನ ಕಿವಿಯಲ್ಲಿ) ಶೈತಾನನು ಮೂತ್ರ ವಿಸರ್ಜನೆ ಮಾಡಿದ್ದಾನೆ.”

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮ್ಮುಖದಲ್ಲಿ ರಾತ್ರಿಯಿಡೀ ಮಲಗಿ ಬೆಳಿಗ್ಗೆಯವರೆಗೂ ಎದ್ದೇಳದ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲಾಯಿತು. ಆಗ ಅವರು ಹೇಳಿದರು: “ಅವನು ಎಂತಹ ವ್ಯಕ್ತಿಯೆಂದರೆ, ಅವನ ಕಿವಿಗಳಲ್ಲಿ (ಅಥವಾ ಅವರು ಹೀಗೆ ಹೇಳಿದರು: ಅವನ ಕಿವಿಯಲ್ಲಿ) ಶೈತಾನನು ಮೂತ್ರ ವಿಸರ್ಜನೆ ಮಾಡಿದ್ದಾನೆ.”

[صحيح] [متفق عليه]

الشرح

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮ್ಮುಖದಲ್ಲಿ ರಾತ್ರಿಯಿಡೀ ಮಲಗಿ ಬೆಳಿಗ್ಗೆ ಸೂರ್ಯೋದಯದವರೆಗೂ ಎದ್ದೇಳದ ಮತ್ತು ಕಡ್ಡಾಯ ನಮಾಝ್ ನಿರ್ವಹಿಸದ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲಾಯಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನು ಎಂತಹ ವ್ಯಕ್ತಿಯೆಂದರೆ ಅವನ ಕಿವಿಯಲ್ಲಿ ಶೈತಾನನು ಮೂತ್ರ ವಿಸರ್ಜನೆ ಮಾಡಿದ್ದಾನೆ.

فوائد الحديث

ರಾತ್ರಿ ನಮಾಝನ್ನು (ಕಿಯಾಮುಲ್ಲೈಲ್) ತ್ಯಜಿಸುವುದನ್ನು ಅಸಹ್ಯಪಡಲಾಗಿದೆ ಮತ್ತು ಅದು ಶೈತಾನನ ಕಾರಣದಿಂದ ಎಂದು ತಿಳಿಸಲಾಗಿದೆ.

ಮನುಷ್ಯನು ಅಲ್ಲಾಹನ ಅನುಸರಣೆ ಮಾಡದಂತೆ ತಡೆಯಲು ಎಲ್ಲಾ ಮಾರ್ಗಗಳಲ್ಲೂ ಕುಳಿತಿರುವ ಶೈತಾನನ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಲಾಗಿದೆ.

ಇಬ್ನ್ ಹಜರ್ ಹೇಳಿದರು: "ಅವನು ನಮಾಝ್ ನಿರ್ವಹಿಸಲು ಎದ್ದೇಳಲಿಲ್ಲ" ಎಂಬ ಅವರ ಮಾತಿನಲ್ಲಿರುವ ನಮಾಝ್ ವರ್ಗನಾಮವಾಗಿರಬಹುದು (ಅಂದರೆ ಎಲ್ಲಾ ನಮಾಝ್‌ಗಳೂ ಅದರಲ್ಲಿ ಒಳಪಡಬಹುದು) ಅಥವಾ ಅದು ನಿರ್ದಿಷ್ಟ ನಮಾಝನ್ನು ಸೂಚಿಸುವ ನಾಮವಾಗಿರಬಹುದು. ಇಲ್ಲಿ ಇದರ ಉದ್ದೇಶವು ರಾತ್ರಿ ನಮಾಝ್ ಅಥವಾ ಕಡ್ಡಾಯ ನಮಾಝ್ ಆಗಿರಬಹುದು."

ತೀಬಿ ಹೇಳಿದರು: "ನಿದ್ರೆಯೊಂದಿಗೆ ಕಣ್ಣಿಗೆ ಹೆಚ್ಚು ಸಂಬಂಧವಿದ್ದರೂ ನಿದ್ರೆಯ ಭಾರವನ್ನು ಸೂಚಿಸುವುದಕ್ಕಾಗಿ ಇಲ್ಲಿ ಕಿವಿಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಏಕೆಂದರೆ ಕಿವಿಗಳು ಎಚ್ಚರಗೊಳ್ಳುವುದಕ್ಕಿರುವ ಮೂಲವಾಗಿದೆ. ಇಲ್ಲಿ ಮೂತ್ರ ವಿಸರ್ಜನೆಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದು ಏಕೆಂದರೆ, ಅದು ಸುಲಭವಾಗಿ ಕುಳಿಗಳ ಒಳಗೆ ಪ್ರವೇಶಿಸುತ್ತದೆ ಮತ್ತು ರಕ್ತನಾಳಗಳಿಗೆ ವೇಗವಾಗಿ ನುಗ್ಗುತ್ತದೆ. ನಂತರ ಅದು ಎಲ್ಲಾ ಅಂಗಗಳಲ್ಲಿ ಸೋಮಾರಿತನವನ್ನು ಉಂಟುಮಾಡುತ್ತದೆ."

التصنيفات

Obligation of Prayer and Ruling on Its Abandoner