ನೀವು ರಮದಾನ್‌ಗಿಂತ ಒಂದು ಅಥವಾ ಎರಡು ದಿನಗಳ ಮೊದಲು ಉಪವಾಸ ಆಚರಿಸಬಾರದು. ಆದರೆ ವಾಡಿಕೆಯ ಉಪವಾಸವನ್ನು ಆಚರಿಸುವವನ ಹೊರತು. ಅವನು…

ನೀವು ರಮದಾನ್‌ಗಿಂತ ಒಂದು ಅಥವಾ ಎರಡು ದಿನಗಳ ಮೊದಲು ಉಪವಾಸ ಆಚರಿಸಬಾರದು. ಆದರೆ ವಾಡಿಕೆಯ ಉಪವಾಸವನ್ನು ಆಚರಿಸುವವನ ಹೊರತು. ಅವನು ಅದನ್ನು ಆಚರಿಸಬಹುದು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನೀವು ರಮದಾನ್‌ಗಿಂತ ಒಂದು ಅಥವಾ ಎರಡು ದಿನಗಳ ಮೊದಲು ಉಪವಾಸ ಆಚರಿಸಬಾರದು. ಆದರೆ ವಾಡಿಕೆಯ ಉಪವಾಸವನ್ನು ಆಚರಿಸುವವನ ಹೊರತು. ಅವನು ಅದನ್ನು ಆಚರಿಸಬಹುದು."

[صحيح] [متفق عليه]

الشرح

ರಮದಾನ್ ತಿಂಗಳ ಬಗ್ಗೆ ಮುನ್ನೆಚ್ಚರಿಕೆಯಾಗಿ ರಮದಾನ್ ತಿಂಗಳಿಗಿಂತ ಒಂದು ಅಥವಾ ಎರಡು ದಿನಗಳ ಮೊದಲು ಉಪವಾಸ ಆಚರಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಡೆದಿದ್ದಾರೆ. ಏಕೆಂದರೆ, ರಮದಾನ್ ಉಪವಾಸದ ಕಡ್ಡಾಯವು ಚಂದ್ರ ದರ್ಶನದ ಮೇಲೆ ಆಧಾರಿತವಾಗಿದೆ. ಇಲ್ಲಿ ಅನಗತ್ಯವಾಗಿ ಹೊರೆ ಹೊರಬೇಕಾದ ಅಗತ್ಯವಿಲ್ಲ. ಆದರೆ, ಯಾರಾದರೂ ವಾಡಿಕೆಯ ಉಪವಾಸವನ್ನು ಆಚರಿಸುತ್ತಿದ್ದರೆ, ಉದಾಹರಣೆಗೆ ದಿನ ಬಿಟ್ಟು ದಿನ ಉಪವಾಸ ಆಚರಿಸುವುದು, ಅಥವಾ ಸೋಮವಾರ ಅಥವಾ ಗುರುವಾರಗಳಂದು ಉಪವಾಸ ಆಚರಿಸುವುದು ಇತ್ಯಾದಿ, ಮತ್ತು ಈ ಉಪವಾಸಗಳು ಆ ದಿನಗಳಿಗೆ ಹೊಂದಿಕೆಯಾದರೆ, ಅವರು ಆ ದಿನಗಳಲ್ಲಿ ಉಪವಾಸ ಆಚರಿಸಬಹುದು. ಏಕೆಂದರೆ, ಇದನ್ನು ರಮದಾನ್ ತಿಂಗಳನ್ನು ನಿರೀಕ್ಷಿಸುವುದರ ಒಂದು ಭಾಗವೆಂದು ಪರಿಗಣಿಸಲಾಗುವುದಿಲ್ಲ. ಇದು ತಪ್ಪಿ ಹೋದ ಉಪವಾಸಗಳು, ಹರಕೆಯ ಉಪವಾಸಗಳು ಮುಂತಾದ ಕಡ್ಡಾಯ ಉಪವಾಸಗಳನ್ನು ಕಝಾ ನಿರ್ವಹಿಸುವುದಕ್ಕೂ ಅನ್ವಯಿಸುತ್ತದೆ.

فوائد الحديث

ಅನಗತ್ಯವಾಗಿ ಹೊರೆ ಹೊರುವುದನ್ನು ನಿಷೇಧಿಸಲಾಗಿದೆ. ಯಾವುದೇ ಸೇರ್ಪಡೆ ಅಥವಾ ಕಡಿತವಿಲ್ಲದೆ ಶಾಸನಬದ್ಧವಾಗಿ ಆರಾಧನೆಯನ್ನು ಆಚರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.

ಇದರ ಹಿಂದಿನ ವಿವೇಕವೇನೆಂದರೆ - ಹೆಚ್ಚು ಬಲ್ಲವನು ಅಲ್ಲಾಹು - ಕಡ್ಡಾಯ ಆರಾಧನೆ ಮತ್ತು ಐಚ್ಛಿಕ ಆರಾಧನೆಗಳನ್ನು ಬೇರ್ಪಡಿಸುವುದು, ಶಕ್ತಿ ಮತ್ತು ಉತ್ಸಾಹದಿಂದ ರಮದಾನ್ ತಿಂಗಳನ್ನು ಸ್ವೀಕರಿಸಲು ಸಿದ್ಧರಾಗಿರುವುದು, ಮತ್ತು ಉಪವಾಸವು ಆ ಶ್ರೇಷ್ಠ ಮತ್ತು ವಿಶೇಷ ತಿಂಗಳ ವಿಶಿಷ್ಟ ಗುರುತಾಗುವುದು.

التصنيفات

Fasting on the Day of Doubt