ಗ್ರಂಥದ ಆರಂಭವನ್ನು (ಸೂರ ಫಾತಿಹ) ಪಠಿಸದವನಿಗೆ ನಮಾಝ್ ಇಲ್ಲ

ಗ್ರಂಥದ ಆರಂಭವನ್ನು (ಸೂರ ಫಾತಿಹ) ಪಠಿಸದವನಿಗೆ ನಮಾಝ್ ಇಲ್ಲ

ಉಬಾದ ಬಿನ್ ಸಾಮಿತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಗ್ರಂಥದ ಆರಂಭವನ್ನು (ಸೂರ ಫಾತಿಹ) ಪಠಿಸದವನಿಗೆ ನಮಾಝ್ ಇಲ್ಲ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸೂರ ಫಾತಿಹ ಪಠಿಸದಿದ್ದರೆ ನಮಾಝ್ ಸಿಂಧುವಾಗುವುದಿಲ್ಲ. ಅದು ನಮಾಝ್‌ನ ಪ್ರತಿಯೊಂದು ಘಟಕ (ರಕಅತ್) ಗಳಲ್ಲೂ ನಿರ್ವಹಿಸಬೇಕಾದ ಅದರ ಸ್ತಂಭಗಳಲ್ಲಿ ಒಂದಾಗಿದೆ.

فوائد الحديث

ಸೂರ ಫಾತಿಹ ಪಠಿಸಲು ಸಾಧ್ಯವಾಗುವವರು ಅದಲ್ಲದ ಬೇರೇನಾದರೂ ಪಠಿಸಿದರೆ ಸಾಕಾಗುವುದಿಲ್ಲ.

ಅದನ್ನು ಪಠಿಸದ ಘಟಕ (ರಕಅತ್) ಅಸಿಂಧುವಾಗುತ್ತದೆ, ಪಠಿಸದಿರುವುದು ಉದ್ದೇಶಪೂರ್ವಕವಾಗಿ, ಅಥವಾ ಅಜ್ಞಾನದಿಂದ ಅಥವಾ ಮರೆವಿನಿಂದಾದರೂ ಸಹ. ಏಕೆಂದರೆ ಅದು ಸ್ತಂಭವಾಗಿದೆ. ಯಾವುದೇ ಸ್ಥಿತಿಯಲ್ಲೂ ಸ್ತಂಭಗಳನ್ನು ನಿರ್ವಹಿಸದಿರುವುದಕ್ಕೆ ವಿನಾಯಿತಿಯಿಲ್ಲ.

ಆದರೆ ಇಮಾಂ ರುಕೂನಲ್ಲಿರುವಾಗ ಅವರೊಂದಿಗೆ ಸೇರುವವರು ಫಾತಿಹ ಪಠಿಸಬೇಕಾಗಿಲ್ಲ.

التصنيفات

Pillars of Prayer