ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಜುಮಾ ನಮಾಝಿಗೆ ಬಂದು, (ಪ್ರವಚನವನ್ನು) ಕಿವಿಗೊಟ್ಟು ಕೇಳಿ, ಮೌನವಾಗಿರುತ್ತಾನೋ, ಆ…

ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಜುಮಾ ನಮಾಝಿಗೆ ಬಂದು, (ಪ್ರವಚನವನ್ನು) ಕಿವಿಗೊಟ್ಟು ಕೇಳಿ, ಮೌನವಾಗಿರುತ್ತಾನೋ, ಆ ಜುಮಾ ಮತ್ತು ಮುಂದಿನ ಜುಮಾದ ತನಕವಿರುವ ಮತ್ತು ಮೂರು ದಿನ ಹೆಚ್ಚುವರಿಯಾಗಿ, ಅವನ ಎಲ್ಲಾ ಪಾಪಗಳನ್ನು ಕ್ಷಮಿಸಲಾಗುವುದು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಜುಮಾ ನಮಾಝಿಗೆ ಬಂದು, (ಪ್ರವಚನವನ್ನು) ಕಿವಿಗೊಟ್ಟು ಕೇಳಿ, ಮೌನವಾಗಿರುತ್ತಾನೋ, ಆ ಜುಮಾ ಮತ್ತು ಮುಂದಿನ ಜುಮಾದ ತನಕವಿರುವ ಮತ್ತು ಮೂರು ದಿನ ಹೆಚ್ಚುವರಿಯಾಗಿ, ಅವನ ಎಲ್ಲಾ ಪಾಪಗಳನ್ನು ಕ್ಷಮಿಸಲಾಗುವುದು. ಆದರೆ ಯಾರು ಬೆಣಚುಕಲ್ಲುಗಳನ್ನು ಮುಟ್ಟುತ್ತಾನೋ ಅವನು ಅನಗತ್ಯವನ್ನು ಮಾಡಿದನು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಅತ್ಯುತ್ತಮ ರೀತಿಯಲ್ಲಿ, ಅಂದರೆ ವುದೂವಿನ ಸ್ತಂಭಗಳನ್ನು, ಐಚ್ಚಿಕ ಕಾರ್ಯಗಳನ್ನು ಮತ್ತು ಶಿಷ್ಟಾಚಾರಗಳನ್ನು ಪೂರ್ಣವಾಗಿ ನಿರ್ವಹಿಸುತ್ತಾ ವುದೂ ನಿರ್ವಹಿಸುತ್ತಾನೋ, ನಂತರ ಜುಮಾ ನಮಾಝಿಗೆ ಬಂದು, ಅನಗತ್ಯ ವಿಷಯಗಳಲ್ಲಿ ತೊಡಗದೆ, ಮೌನವಾಗಿ ಹಾಗೂ ಏಕಾಗ್ರತೆಯಿಂದ ಪ್ರವಚನಕ್ಕೆ ಕಿವಿಗೊಡುತ್ತಾನೋ, ಅವನ ಹತ್ತು ದಿನಗಳ ಸಣ್ಣ ಪಾಪಗಳನ್ನು ಕ್ಷಮಿಸಲಾಗುವುದು. ಅಂದರೆ ಆ ಜುಮಾ ನಮಾಝ್ ನಿಂದ ಮುಂದಿನ ಜುಮಾ ನಮಾಝಿನ ತನಕ ಮತ್ತು ಮೂರು ದಿನಗಳು ಹೆಚ್ಚುವರಿಯಾಗಿ. ಏಕೆಂದರೆ, ಒಂದು ಉತ್ತಮ ಕಾರ್ಯಕ್ಕೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನದಲ್ಲಿ ನೀಡಲಾಗುವ ಉಪದೇಶಕ್ಕೆ ಏಕಾಗ್ರತೆಯಿಂದ ಕಿವಿಗೊಡದೆ, ಬೆಣಚುಕಲ್ಲುಗಳನ್ನು ಸ್ಪರ್ಶಿಸುವುದು ಮುಂತಾದ ಅನಗತ್ಯ ಕಾರ್ಯಗಳಲ್ಲಿ ತಲ್ಲೀನರಾಗುವವರ ಬಗ್ಗೆ, ಅಂತಹವರು ಅನಗತ್ಯ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ಅನಗತ್ಯ ಕಾರ್ಯಗಳನ್ನು ಮಾಡುವವರಿಗೆ ಜುಮಾ ನಮಾಝಿನ ಪೂರ್ಣ ಪ್ರತಿಫಲವು ಲಭ್ಯವಾಗುವುದಿಲ್ಲವೆಂದು ಎಚ್ಚರಿಸಿದ್ದಾರೆ.

فوائد الحديث

ವುದೂವನ್ನು ಸಂಪೂರ್ಣವಾಗಿ ಮತ್ತು ಸರಿಯಾಗಿ ನಿರ್ವಹಿಸಲು ಹಾಗೂ ಜುಮಾ ನಮಾಝನ್ನು ಸಂರಕ್ಷಿಸಲು ಪ್ರೋತ್ಸಾಹಿಸಲಾಗಿದೆ.

ಜುಮಾ ನಮಾಝ್‌ನ ಶ್ರೇಷ್ಠತೆಯನ್ನು ತಿಳಿಸಲಾಗಿದೆ.

ಶುಕ್ರವಾರದ ಪ್ರವಚನದ ಸಮಯದಲ್ಲಿ ಮೌನವಾಗಿರುವುದು ಹಾಗೂ ಮಾತು ಮುಂತಾದ ಕಾರ್ಯಗಳಲ್ಲಿ ತೊಡಗದಿರುವುದು ಕಡ್ಡಾಯವಾಗಿದೆ.

ಪ್ರವಚನದ ಸಮಯದಲ್ಲಿ ಅನಗತ್ಯ ಕಾರ್ಯಗಳಲ್ಲಿ ತೊಡಗುವವರಿಗೆ ಪ್ರತಿಫಲದಲ್ಲಿ ಕಡಿತವುಂಟಾದರೂ, ಅವರ ಜುಮಾ ನಮಾಝ್ ಸಿಂಧುವಾಗುತ್ತದೆ ಮತ್ತು ಅವರು ಅದರ ಕಡ್ಡಾಯತೆಯನ್ನು ನೆರವೇರಿಸಿದಂತಾಗುತ್ತದೆ.

التصنيفات

Merit of Jumu‘ah Prayer