ಒಬ್ಬ ವ್ಯಕ್ತಿ ಅಲ್ಲಾಹನಿಂದ ಪ್ರತಿಫಲವನ್ನು ಅಪೇಕ್ಷಿಸುತ್ತಾ ತನ್ನ ಕುಟುಂಬಕ್ಕೆ ಖರ್ಚು ಮಾಡುವುದೆಲ್ಲವೂ ದಾನವಾಗಿವೆ

ಒಬ್ಬ ವ್ಯಕ್ತಿ ಅಲ್ಲಾಹನಿಂದ ಪ್ರತಿಫಲವನ್ನು ಅಪೇಕ್ಷಿಸುತ್ತಾ ತನ್ನ ಕುಟುಂಬಕ್ಕೆ ಖರ್ಚು ಮಾಡುವುದೆಲ್ಲವೂ ದಾನವಾಗಿವೆ

ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿ ಅಲ್ಲಾಹನಿಂದ ಪ್ರತಿಫಲವನ್ನು ಅಪೇಕ್ಷಿಸುತ್ತಾ ತನ್ನ ಕುಟುಂಬಕ್ಕೆ ಖರ್ಚು ಮಾಡುವುದೆಲ್ಲವೂ ದಾನವಾಗಿವೆ."

[Sahih/Authentic.] [Al-Bukhari and Muslim]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ತನ್ನ ಪೋಷಣೆಯಲ್ಲಿರುವ ಪತ್ನಿ, ತಂದೆ-ತಾಯಿ, ಮಕ್ಕಳು ಮುಂತಾದವರಿಗೆ ಹಣವನ್ನು ಖರ್ಚು ಮಾಡುವಾಗ, ಅದರ ಮೂಲಕ ಅಲ್ಲಾಹನ ಸಾಮೀಪ್ಯ ಮತ್ತು ಅವನ ಪ್ರತಿಫಲವನ್ನು ಬಯಸುವುದಾದರೆ, ಅವನಿಗೆ ಆ ಹಣವನ್ನು ದಾನ ಮಾಡಿದ ಪ್ರತಿಫಲವಿದೆ.

فوائد الحديث

ಕುಟುಂಬಕ್ಕೆ ಖರ್ಚು ಮಾಡಿದರೂ ಪ್ರತಿಫಲ ಮತ್ತು ಪುಣ್ಯವಿದೆಯೆಂದು ಈ ಹದೀಸ್ ತಿಳಿಸುತ್ತದೆ.

ಸತ್ಯವಿಶ್ವಾಸಿಯು ತನ್ನ ಕರ್ಮದ ಮೂಲಕ ಅಲ್ಲಾಹನ ಸಂಪ್ರೀತಿ ಮತ್ತು ಪ್ರತಿಫಲವನ್ನು ಬಯಸಬೇಕೆಂದು ಈ ಹದೀಸ್ ತಿಳಿಸುತ್ತದೆ.

ಕುಟುಂಬಕ್ಕೆ ಖರ್ಚು ಮಾಡುವುದು ಸೇರಿದಂತೆ, ಯಾವುದೇ ಕೆಲಸ ಮಾಡುವಾಗಲೂ ಮನಸ್ಸಿನಲ್ಲಿ ಉದ್ದೇಶವನ್ನು (ನಿಯ್ಯತ್) ನಿರ್ಧರಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.