ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" (ಓ ನನ್ನ…

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" (ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು, ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು) ಎಂದು ಹೇಳುತ್ತಿದ್ದರು

ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" (ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು, ಓ ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು) ಎಂದು ಹೇಳುತ್ತಿದ್ದರು.

[صحيح] [رواه أبو داود والنسائي وابن ماجه وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ ಕುಳಿತುಕೊಂಡು, "ರಬ್ಬಿಗ್ಫಿರ್ ಲೀ, ರಬ್ಬಿಗ್ಫಿರ್ ಲೀ" ಎಂದು ಹೇಳುತ್ತಿದ್ದರು. "ರಬ್ಬಿಗ್ಫಿರ್ ಲೀ" ಎಂದರೆ ಅಲ್ಲಾಹನಲ್ಲಿ ಪಾಪಗಳನ್ನು ಅಳಿಸಲು ಮತ್ತು ನ್ಯೂನತೆಗಳನ್ನು ಮರೆಮಾಚಲು ಬೇಡುವುದು.

فوائد الحديث

ಕಡ್ಡಾಯ ಮತ್ತು ಐಚ್ಛಿಕ ನಮಾಝ್‌ಗಳಲ್ಲಿ ಎರಡು ಸುಜೂದ್‌ಗಳ ನಡುವೆ ಕುಳಿತುಕೊಳ್ಳುವಾಗ ಈ ಪ್ರಾರ್ಥನೆಯನ್ನು ಹೇಳಬೇಕು.

"ರಬ್ಬಿಗ್ಫಿರ್ ಲೀ" ಎಂದು ಹೇಳುತ್ತಾ ಇರುವುದು ಅಪೇಕ್ಷಣೀಯವಾಗಿದೆ. ಆದರೆ ಒಂದು ಸಲ ಹೇಳುವುದು ಕಡ್ಡಾಯವಾಗಿದೆ.

التصنيفات

Method of Prayer