ಓ ಅಲ್ಲಾಹನ ಸಂದೇಶವಾಹಕರೇ! ಉಮ್ಮು ಸಅದ್ ನಿಧನರಾದರು. ಅವರ ಹೆಸರಲ್ಲಿ ಯಾವ ದಾನಧರ್ಮವು ಶ್ರೇಷ್ಠವಾಗಿದೆ?" ಅವರು ಉತ್ತರಿಸಿದರು: "ನೀರು."…

ಓ ಅಲ್ಲಾಹನ ಸಂದೇಶವಾಹಕರೇ! ಉಮ್ಮು ಸಅದ್ ನಿಧನರಾದರು. ಅವರ ಹೆಸರಲ್ಲಿ ಯಾವ ದಾನಧರ್ಮವು ಶ್ರೇಷ್ಠವಾಗಿದೆ?" ಅವರು ಉತ್ತರಿಸಿದರು: "ನೀರು." ಆಗ ಅವರು ಒಂದು ಬಾವಿ ತೋಡಿದರು. ಮತ್ತು ಹೇಳಿದರು: "ಇದು ಉಮ್ಮು ಸಅದ್‌ರಿಗೆ

ಸಅದ್ ಬಿನ್ ಉಬಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಉಮ್ಮು ಸಅದ್ ನಿಧನರಾದರು. ಅವರ ಹೆಸರಲ್ಲಿ ಯಾವ ದಾನಧರ್ಮವು ಶ್ರೇಷ್ಠವಾಗಿದೆ?" ಅವರು ಉತ್ತರಿಸಿದರು: "ನೀರು." ಆಗ ಅವರು ಒಂದು ಬಾವಿ ತೋಡಿದರು. ಮತ್ತು ಹೇಳಿದರು: "ಇದು ಉಮ್ಮು ಸಅದ್‌ರಿಗೆ."

الشرح

ಸಅದ್ ಬಿನ್ ಉಬಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ತಾಯಿ (ಉಮ್ಮು ಸಅದ್) ನಿಧನರಾದರು. ಆಗ ಅವರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತನ್ನ ತಾಯಿ ಹೆಸರಲ್ಲಿ ಯಾವ ದಾನ ಮಾಡುವುದು ಶ್ರೇಷ್ಠವೆಂದು ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೀರು ದಾನ ಮಾಡುವುದು ಶ್ರೇಷ್ಠವೆಂದು ತಿಳಿಸಿದರು. ಅದರಂತೆ ಅವರು ಒಂದು ಬಾವಿಯನ್ನು ತೋಡಿ ಅದನ್ನು ತನ್ನ ತಾಯಿಯ ಹೆಸರಲ್ಲಿ ದಾನ ಮಾಡಿದರು.

فوائد الحديث

ನೀರು ಶ್ರೇಷ್ಠ ದಾನಗಳಲ್ಲಿ ಒಂದು ಎಂದು ವಿವರಿಸಲಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಅದ್‌ರಿಗೆ ನೀರು ದಾನ ಮಾಡಲು ಸೂಚಿಸಿದರು. ಏಕೆಂದರೆ, ಭೌತಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಹಾಗೂ ಕಠಿಣ ಬಿಸಿಲು, ನೀರಿನ ಅಭಾವ ಮತ್ತು ಜರೂರತ್ತಿನ ಕಾರಣದಿಂದ ಅದು ಹೆಚ್ಚು ಪ್ರಯೋಜನಕಾರಿಯಾಗಿದೆ.

ದಾನ ಮಾಡಿದರೆ ಅದರ ಪ್ರತಿಫಲವು ಮೃತರಿಗೆ ತಲುಪುತ್ತದೆಯೆಂದು ಇದು ಸೂಚಿಸುತ್ತದೆ.

ಸಅದ್ ಬಿನ್ ಉಬಾದ ತಮ್ಮ ತಾಯಿಗೆ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಮಾಡಿದ ಒಳಿತನ್ನು ತಿಳಿಸಲಾಗಿದೆ.

التصنيفات

Endowment, Voluntary Charity