ಸತ್ಯವಿಶ್ವಾಸಿಯು ದೂಷಿಸುವವನಲ್ಲ, ಶಪಿಸುವವನಲ್ಲ, ಅಶ್ಲೀಲವಾಗಿ ಮಾತನಾಡುವವನಲ್ಲ ಅಥವಾ ಅವಾಚ್ಯ ಶಬ್ದಗಳನ್ನು ಬಳಸುವವನಲ್ಲ

ಸತ್ಯವಿಶ್ವಾಸಿಯು ದೂಷಿಸುವವನಲ್ಲ, ಶಪಿಸುವವನಲ್ಲ, ಅಶ್ಲೀಲವಾಗಿ ಮಾತನಾಡುವವನಲ್ಲ ಅಥವಾ ಅವಾಚ್ಯ ಶಬ್ದಗಳನ್ನು ಬಳಸುವವನಲ್ಲ

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯವಿಶ್ವಾಸಿಯು ದೂಷಿಸುವವನಲ್ಲ, ಶಪಿಸುವವನಲ್ಲ, ಅಶ್ಲೀಲವಾಗಿ ಮಾತನಾಡುವವನಲ್ಲ ಅಥವಾ ಅವಾಚ್ಯ ಶಬ್ದಗಳನ್ನು ಬಳಸುವವನಲ್ಲ."

[صحيح] [رواه الترمذي]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಜನರ ವಂಶವನ್ನು ಟೀಕಿಸುವುದು, ಅತ್ಯಧಿಕವಾಗಿ ದೂಷಿಸುವುದು ಮತ್ತು ಶಪಿಸುವುದು, ಯಾವುದೇ ನಾಚಿಕೆಯಿಲ್ಲದೆ ದೈಹಿಕವಾಗಿ ಮತ್ತು ಮೌಖಿಕವಾಗಿ ಅಶ್ಲೀಲವಾಗಿ ವರ್ತಿಸುವುದು ಪೂರ್ಣರೂಪದ ಸತ್ಯವಿಶ್ವಾಸವನ್ನು ಹೊಂದಿರುವ ಸತ್ಯವಿಶ್ವಾಸಿಯ ಸ್ವಭಾವಗಳಲ್ಲ.

فوائد الحديث

ಯಾವುದಾದರೂ ಕೆಲಸವನ್ನು ಮಾಡುವವನು ಧರ್ಮಶಾಸ್ತ್ರದಲ್ಲಿ ಸತ್ಯವಿಶ್ವಾಸಿಯಲ್ಲ ಎಂದು ಹೇಳಲಾಗಿದ್ದರೆ ಆ ಕೆಲಸವು ನಿಷಿದ್ಧವಾಗಿದೆ ಅಥವಾ ಅದನ್ನು ತೊರೆಯುವುದು ಕಡ್ಡಾಯವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು.

ಅಂಗಾಂಗಗಳು, ವಿಶೇಷವಾಗಿ ನಾಲಗೆಯು ಕೆಟ್ಟ ಕೆಲಸಗಳಿಗೆ ಬಳಕೆಯಾಗದಂತೆ ರಕ್ಷಿಸುವುದನ್ನು ಪ್ರೋತ್ಸಾಹಿಸಲಾಗಿದೆ.

ಸಿಂದಿ ಹೇಳಿದರು: "ಇಲ್ಲಿ ದೂಷಿಸುವವನು, ಶಪಿಸುವವನು ಎಂದು ಉತ್ಪ್ರೇಕ್ಷೆಯ ಶೈಲಿಯಲ್ಲಿ ಬಳಸಿರುವುದು, ಕನಿಷ್ಠ ರೂಪದಲ್ಲಿ ದೂಷಿಸುವ ಅಥವಾ ಶಪಿಸುವ ಸತ್ಯವಿಶ್ವಾಸಿಯಲ್ಲಿರುವ ಸತ್ಯವಿಶ್ವಾಸ ಎಂಬ ಗುಣಕ್ಕೆ ಇದರಿಂದ ತೊಂದರೆಯಾಗುವುದಿಲ್ಲ ಎಂಬುದಕ್ಕೆ ಪುರಾವೆಯಾಗಿದೆ."

التصنيفات

Praiseworthy Morals, Manners of Speaking and Keeping Silent