ಯಾವುದೇ ಮುಸ್ಲಿಂ ಮಹಿಳೆ ತನ್ನ ಮಹ್ರಮ್ (ಹತ್ತಿರದ ಪುರುಷ ಸಂಬಂಧಿ) ಇಲ್ಲದೆ ಒಂದು ರಾತ್ರಿಯ ದೂರ ಪ್ರಯಾಣಿಸುವುದು ಅನು…

ಯಾವುದೇ ಮುಸ್ಲಿಂ ಮಹಿಳೆ ತನ್ನ ಮಹ್ರಮ್ (ಹತ್ತಿರದ ಪುರುಷ ಸಂಬಂಧಿ) ಇಲ್ಲದೆ ಒಂದು ರಾತ್ರಿಯ ದೂರ ಪ್ರಯಾಣಿಸುವುದು ಅನು ಮತಿಸಲಾಗುವುದಿಲ್ಲ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವುದೇ ಮುಸ್ಲಿಂ ಮಹಿಳೆ ತನ್ನ ಮಹ್ರಮ್ (ಹತ್ತಿರದ ಪುರುಷ ಸಂಬಂಧಿ) ಇಲ್ಲದೆ ಒಂದು ರಾತ್ರಿಯ ದೂರ ಪ್ರಯಾಣಿಸುವುದು ಅನು ಮತಿಸಲಾಗುವುದಿಲ್ಲ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಒಬ್ಬ ಮುಸ್ಲಿಂ ಮಹಿಳೆ ತನ್ನ ಮಹ್ರಮ್ (ಹತ್ತಿರದ ಪುರುಷ ಸಂಬಂಧಿ) ಇಲ್ಲದೆ ಒಂದು ರಾತ್ರಿಯ ದೂರ ಪ್ರಯಾಣಿಸುವುದು ಅನುಮತಿಸಲಾಗುವುದಿಲ್ಲ.

فوائد الحديث

ಇಬ್ನ್ ಹಜರ್ ಹೇಳಿದರು: "ಮಹ್ರಮ್ ಇಲ್ಲದೆ ಪ್ರಯಾಣ ಮಾಡಲು ಮಹಿಳೆಗೆ ಅನುಮತಿಯಿಲ್ಲ. ಹಜ್ಜ್ ಮತ್ತು ಉಮ್ರಾ ನಿರ್ವಹಿಸಲು ಪ್ರಯಾಣ ಮಾಡುವುದು, ಬಹುದೇವವಿಶ್ವಾಸದ ದೇಶದಿಂದ ಪ್ರಯಾಣ ಮಾಡುವುದು ಮುಂತಾದವುಗಳನ್ನು ಹೊರತುಪಡಿಸಿ ಇತರ ಎಲ್ಲಾ ಪ್ರಯಾಣಗಳಿಗೆ ಇದು ಅನ್ವಯವಾಗುತ್ತದೆ ಎಂಬ ಬಗ್ಗೆ ವಿದ್ವಾಂಸರಿಗೆ ಒಮ್ಮತವಿದೆ. ಆದರೆ, ಕೆಲವು ವಿದ್ವಾಂಸರು ಇದನ್ನು ಹಜ್ಜ್ ನಿರ್ವಹಿಸುವವರು ಪಾಲಿಸಬೇಕಾದ ಷರತ್ತುಗಳಲ್ಲೂ ಸೇರಿಸಿದ್ದಾರೆ."

ಇಸ್ಲಾಮಿ ಧರ್ಮಶಾಸ್ತ್ರದ ಪರಿಪೂರ್ಣತೆಯನ್ನು ಮತ್ತು ಅದು ಮಹಿಳೆಯರನ್ನು ರಕ್ಷಿಸುವ ಮತ್ತು ಕಾಪಾಡುವ ವಿಷಯದಲ್ಲಿ ಹೊಂದಿರುವ ಆಳವಾದ ಕಾಳಜಿಯನ್ನು ತಿಳಿಸಲಾಗಿದೆ.

ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿರುವ ವಿಶ್ವಾಸವು ಅಲ್ಲಾಹನ ಕಾನೂನಿಗೆ ವಿಧೇಯತೆ ತೋರುವುದನ್ನು ಮತ್ತು ಅವನು ನಿಶ್ಚಯಿಸಿದ ಮಿತಿಗಳಿಗೆ ಬದ್ಧವಾಗಿರುವುದನ್ನು ಬಯಸುತ್ತದೆ.

ಮಹಿಳೆಯ ಮಹ್ರಮ್ (ಹತ್ತಿರದ ಪುರುಷ ಸಂಬಂಧಿ) ಎಂದರೆ ಅವಳ ಗಂಡ, ಅಥವಾ ರಕ್ತ ಸಂಬಂಧ, ಸ್ತನಪಾನ ಸಂಬಂಧ ಅಥವಾ ವಿವಾಹ ಸಂಬಂಧಗಳಿಂದಾಗಿ ಅವಳನ್ನು ಮದುವೆಯಾಗಲು ಶಾಶ್ವತವಾಗಿ ನಿಷೇಧವಿರುವ ವ್ಯಕ್ತಿ. ಅವನು ಮುಸ್ಲಿಂ, ಪ್ರಾಪ್ತ ವಯಸ್ಸಿನವನು, ವಿವೇಚನಾಶಕ್ತಿಯುಳ್ಳವನು, ನಂಬಲರ್ಹನು ಮತ್ತು ವಿಶ್ವಾಯೋಗ್ಯನಾಗಿರಬೇಕು. ಏಕೆಂದರೆ ಮಹ್ರಮ್‌ನ ಉದ್ದೇಶವು ಮಹಿಳೆಯ ಸಂರಕ್ಷಣೆ ಮಾಡುವುದು, ಆಕೆಯನ್ನು ಕಾಪಾಡುವುದು ಮತ್ತು ಆಕೆಯ ಅಗತ್ಯಗಳನ್ನು ನೋಡಿಕೊಳ್ಳುವುದಾಗಿದೆ.

ಹತ್ತಿರದ ಸಂಬಂಧಿಯೊಂದಿಗೆ ಮಾತ್ರ ಪ್ರಯಾಣಿಸಲು ಅನುಮತಿಸಲ್ಪಡುವ ಪ್ರಯಾಣದ ಅವಧಿಗೆ ಸಂಬಂಧಿಸಿದ ವರದಿಗಳ ಬಗ್ಗೆ ಬೈಹಕಿ ಹೇಳುತ್ತಾರೆ: "ಒಟ್ಟಿನಲ್ಲಿ, ಪ್ರಯಾಣ ಎಂದು ಕರೆಯಲ್ಪಡುವ ಯಾವುದನ್ನಾದರೂ, ಪತಿ ಅಥವಾ ಹತ್ತಿರದ ಪುರುಷ ಸಂಬಂಧಿ ಇಲ್ಲದೆ ಮಹಿಳೆ ಅದನ್ನು ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ. ಅದು ಮೂರು ದಿನಗಳು, ಎರಡು ದಿನಗಳು, ಒಂದು ದಿನ, ಬರೀದ್ (ನಿರ್ದಿಷ್ಟ ದೂರದ ಮಾಪನ) ಅಥವಾ ಇನ್ನಾವುದೇ ಆಗಿದ್ದರೂ ಸಹ. ಇಬ್ನ್ ಅಬ್ಬಾಸ್ ವರದಿ ಮಾಡಿದ ಕೆಳಗಿನ ಹದೀಸಿನಲ್ಲಿರುವ ಅನಿರ್ದಿಷ್ಟವಾದ ಆಜ್ಞೆಯು ಇದನ್ನು ಸೂಚಿಸುತ್ತದೆ. ಇದು ಇಮಾಂ ಮುಸ್ಲಿಂರ ಹಿಂದಿನ ವರದಿಗಳಲ್ಲಿ ಕೊನೆಯದ್ದಾಗಿದೆ: "ಯಾವ ಮಹಿಳೆಯು ಮಹ್ರಮ್ ಇಲ್ಲದೆ ಪ್ರಯಾಣಿಸಬಾರದು." ಇದು ಪ್ರಯಾಣ ಎಂದು ಕರೆಯಲ್ಪಡುವ ಎಲ್ಲದಕ್ಕೂ ಅನ್ವಯಿಸುತ್ತದೆ." ಈ ಹದೀಸ್ ಪ್ರಶ್ನಿಸಿದವರ ಸ್ಥಿತಿ ಮತ್ತು ಅವರ ಸ್ಥಳವನ್ನು ಆಧರಿಸಿದೆ.

التصنيفات

Manners and Rulings of Travel, Obligations of ‘Umrah