ನಾಲ್ಕು ವಚನಗಳು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿವೆ: ಸು‌ಬ್‌ಹಾನಲ್ಲಾಹ್, ಅಲ್-ಹಮ್ದುಲಿಲ್ಲಾಹ್, ಲಾಇಲಾಹ ಇಲ್ಲಲ್ಲಾಹ್ ಮತ್ತು…

ನಾಲ್ಕು ವಚನಗಳು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿವೆ: ಸು‌ಬ್‌ಹಾನಲ್ಲಾಹ್, ಅಲ್-ಹಮ್ದುಲಿಲ್ಲಾಹ್, ಲಾಇಲಾಹ ಇಲ್ಲಲ್ಲಾಹ್ ಮತ್ತು ಅಲ್ಲಾಹು ಅಕ್ಬರ್. ನೀನು ಯಾವುದರಿಂದ ಪ್ರಾರಂಭಿಸಿದರೂ ತೊಂದರೆಯಿಲ್ಲ

ಸಮುರ ಬಿನ್ ಜುಂದುಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾಲ್ಕು ವಚನಗಳು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿವೆ: ಸು‌ಬ್‌ಹಾನಲ್ಲಾಹ್, ಅಲ್-ಹಮ್ದುಲಿಲ್ಲಾಹ್, ಲಾಇಲಾಹ ಇಲ್ಲಲ್ಲಾಹ್ ಮತ್ತು ಅಲ್ಲಾಹು ಅಕ್ಬರ್. ನೀನು ಯಾವುದರಿಂದ ಪ್ರಾರಂಭಿಸಿದರೂ ತೊಂದರೆಯಿಲ್ಲ."

[صحيح] [رواه مسلم]

الشرح

ನಾಲ್ಕು ವಚನಗಳು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿವೆಯೆಂದು ಪ್ರವಾದಿಯವರು ಇಲ್ಲಿ ವಿವರಿಸುತ್ತಿದ್ದಾರೆ. ಅವು: ಸು‌ಬ್‌ಹಾನಲ್ಲಾಹ್: ಎಂದರೆ ಅಲ್ಲಾಹನನ್ನು ಎಲ್ಲಾ ರೀತಿಯ ನ್ಯೂನತೆ ಅಥವಾ ಕೊರತೆಗಳಿಂದ ಪರಿಶುದ್ಧಗೊಳಿಸುವುದು. ಅಲ್-ಹಮ್ದುಲಿಲ್ಲಾಹ್: ಇದು ಅಲ್ಲಾಹನನ್ನು ಪ್ರೀತಿಸುವುದು ಮತ್ತು ಅತಿಯಾಗಿ ಗೌರವಿಸುವುದರ ಜೊತೆಗೆ ಅವನನ್ನು ಸಂಪೂರ್ಣತೆಯ ಗುಣಗಳಿಂದ ವರ್ಣಿಸುವುದಾಗಿದೆ. ಲಾ ಇಲಾಹ ಇಲ್ಲಲ್ಲಾಹ್: ಅಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ. ಅಲ್ಲಾಹು ಅಕ್ಬರ್: ಅಂದರೆ ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು, ಮಹಾಮಹಿಮನು ಮತ್ತು ಪ್ರತಾಪವುಳ್ಳವನು. ಇವುಗಳ ಶ್ರೇಷ್ಠತೆ ಮತ್ತು ಇವುಗಳಿಗೆ ದೊರಕುವ ಪ್ರತಿಫಲವನ್ನು ಪಡೆಯಬೇಕಾದರೆ ಇವುಗಳನ್ನು ಅನುಕ್ರಮವಾಗಿಯೇ ಹೇಳಬೇಕೆಂಬ ನಿಬಂಧನೆಯಿಲ್ಲ.

فوائد الحديث

ಇಸ್ಲಾಂ ಧರ್ಮವು ಸುಲಭವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಈ ವಚನಗಳಲ್ಲಿ ಯಾವುದನ್ನು ಮೊದಲು ಹೇಳಿದರೂ ಅದರಲ್ಲಿ ತೊಂದರೆಯಿಲ್ಲವೆಂದು ಹೇಳಲಾಗಿದೆ.

التصنيفات

Timeless Dhikr