ಓ ಅಲ್ಲಾಹ್! ನಿನ್ನ ಅನುಗ್ರಹಗಳ ನಿವಾರಣೆಯಿಂದ, ನಿನ್ನ ಸೌಖ್ಯದ ಬದಲಾವಣೆಯಿಂದ, ನಿನ್ನ ಹಠಾತ್ ಶಿಕ್ಷೆಯಿಂದ ಮತ್ತು ನಿನ್ನ ಸರ್ವ…

ಓ ಅಲ್ಲಾಹ್! ನಿನ್ನ ಅನುಗ್ರಹಗಳ ನಿವಾರಣೆಯಿಂದ, ನಿನ್ನ ಸೌಖ್ಯದ ಬದಲಾವಣೆಯಿಂದ, ನಿನ್ನ ಹಠಾತ್ ಶಿಕ್ಷೆಯಿಂದ ಮತ್ತು ನಿನ್ನ ಸರ್ವ ಕ್ರೋಧಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ

ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸುತ್ತಿದ್ದ ಪ್ರಾರ್ಥನೆಗಳಲ್ಲಿ ಒಂದು ಹೀಗಿತ್ತು: "ಓ ಅಲ್ಲಾಹ್! ನಿನ್ನ ಅನುಗ್ರಹಗಳ ನಿವಾರಣೆಯಿಂದ, ನಿನ್ನ ಸೌಖ್ಯದ ಬದಲಾವಣೆಯಿಂದ, ನಿನ್ನ ಹಠಾತ್ ಶಿಕ್ಷೆಯಿಂದ ಮತ್ತು ನಿನ್ನ ಸರ್ವ ಕ್ರೋಧಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನಾಲ್ಕು ವಿಷಯಗಳ ಬಗ್ಗೆ ರಕ್ಷೆ ಬೇಡಿದ್ದಾರೆ. ಒಂದು: "ಓ ಅಲ್ಲಾಹ್! ನಿನ್ನ ಅನುಗ್ರಹಗಳ ನಿವಾರಣೆಯಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ." ಅಂದರೆ ಧಾರ್ಮಿಕ ಮತ್ತು ಐಹಿಕವಾದ ಅನುಗ್ರಹಗಳ ನಿವಾರಣೆಯಿಂದ. ನೀನು ನನ್ನನ್ನು ಇಸ್ಲಾಂ ಧರ್ಮದಲ್ಲಿ ದೃಢವಾಗಿ ನಿಲ್ಲಿಸಬೇಕೆಂದು, ಮತ್ತು ಅನುಗ್ರಹಗಳ ನಿವಾರಣೆಗೆ ಕಾರಣವಾಗುವ ಪಾಪಗಳಲ್ಲಿ ಒಳಪಡದಂತೆ ನನ್ನನ್ನು ರಕ್ಷಿಸಬೇಕೆಂದು ಬೇಡುತ್ತೇನೆ. ಎರಡು: "ನಿನ್ನ ಸೌಖ್ಯದ ಬದಲಾವಣೆಯಿಂದ" ಅಂದರೆ, ಸೌಖ್ಯವನ್ನು ಅಸೌಖ್ಯವಾಗಿ ಬದಲಾಯಿಸುವುದರಿಂದ. ನಾನು ನಿನ್ನಲ್ಲಿ ಶಾಶ್ವತ ಸೌಖ್ಯವನ್ನು ಮತ್ತು ಎಲ್ಲಾ ರೀತಿಯ ನೋವು ಮತ್ತು ಅನಾರೋಗ್ಯಗಳಿಂದ ಮುಕ್ತಿಯನ್ನು ಬೇಡುತ್ತೇನೆ. ಮೂರು: "ನಿನ್ನ ಹಠಾತ್ ಶಿಕ್ಷೆಯಿಂದ" ಅಂದರೆ, ಸಂಕಷ್ಟಗಳು ಮತ್ತು ದುರಂತಗಳಿಂದ. ಏಕೆಂದರೆ ಪ್ರತೀಕಾರ ಅಥವಾ ಶಿಕ್ಷೆ ಹಠಾತ್ ಬಂದು ಬಿಟ್ಟರೆ, ಪಶ್ಚಾತ್ತಾಪಪಡಲು ಅಥವಾ ಸ್ವಯಂ ತಿದ್ದಿಕೊಳ್ಳಲು ಸಮಯವಿರುವುದಿಲ್ಲ. ಅದು ಆ ದುರಂತವನ್ನು ಇನ್ನಷ್ಟು ದೊಡ್ಡದು ಮತ್ತು ಕಠೋರಗೊಳಿಸುತ್ತದೆ. ನಾಲ್ಕು: "ಮತ್ತು ನಿನ್ನ ಸರ್ವ ಕ್ರೋಧಗಳಿಂದ" ಹಾಗೂ ನಿನ್ನ ಕೋಪಕ್ಕೆ ಕಾರಣವಾಗುವ ಎಲ್ಲಾ ವಿಷಯಗಳಿಂದ. ಏಕೆಂದರೆ ಯಾರ ಮೇಲೆ ನೀನು ಕೋಪಿಸುತ್ತೀಯೋ ಅವನು ಪರಾಜಿತನಾಗುತ್ತಾನೆ ಮತ್ತು ನಷ್ಟ ಅನುಭವಿಸುತ್ತಾನೆ. ಅಲ್ಲಾಹನಿಗೆ ಕೋಪ ತರುವ ಎಲ್ಲಾ ರೀತಿಯ ಮಾತುಗಳನ್ನು ಮತ್ತು ಕರ್ಮಗಳನ್ನು ಇದರಲ್ಲಿ ಒಳಗೊಳಿಸುವುದಕ್ಕಾಗಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ "ಸರ್ವ" ಎಂಬ ಪದವನ್ನು ಬಳಸಿದ್ದಾರೆ.

فوائد الحديث

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನನ್ನು ಸಂಪೂರ್ಣವಾಗಿ ಅವಲಂಬಿಸಿಕೊಂಡಿದ್ದರೆಂದು ತಿಳಿಸಲಾಗಿದೆ.

ಈ ಅನುಗ್ರಹೀತ ರಕ್ಷಾ ಪ್ರಾರ್ಥನೆಯು: ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸುವುದು ಮತ್ತು ಪಾಪಕೃತ್ಯಗಳಲ್ಲಿ ಒಳಪಡದಂತೆ ರಕ್ಷಣೆ ಬೇಡುವುದನ್ನು ಒಳಗೊಂಡಿದೆ. ಏಕೆಂದರೆ ಪಾಪಕೃತ್ಯಗಳು ಅನುಗ್ರಹಗಳನ್ನು ನಿವಾರಿಸುತ್ತವೆ.

ಅಲ್ಲಾಹನ ಕೋಪಕ್ಕೆ ತುತ್ತಾಗುವ ಸ್ಥಳಗಳಿಂದ ದೂರವಿರಲು ಉತ್ತೇಜಿಸಲಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಹಠಾತ್ ಶಿಕ್ಷೆಗಳಿಂದ ರಕ್ಷೆ ಬೇಡಿದ್ದಾರೆ. ಏಕೆಂದರೆ ಅಲ್ಲಾಹು ದಾಸನ ಮೇಲೆ ಪ್ರತೀಕಾರ ತೀರಿಸಲು ಬಯಸಿದರೆ ಅವನಿಗೆ ತಡೆಯಲು ಸಾಧ್ಯವಿಲ್ಲದಂತಹ ಮತ್ತು ಸೃಷ್ಟಿಗಳೆಲ್ಲರೂ ಸೇರಿದರೂ ಹಿಮ್ಮೆಟ್ಟಿಸಲಾಗದಂತಹ ಸಂಕಷ್ಟವನ್ನು ಎರಗಿಸುತ್ತಾನೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಸೌಖ್ಯ ಬದಲಾವಣೆಯಾಗುವುದರ ಬಗ್ಗೆ ರಕ್ಷೆ ಬೇಡಿದ್ದಾರೆ. ಏಕೆಂದರೆ, ಅಲ್ಲಾಹು ಒಬ್ಬ ದಾಸನಿಗೆ ವಿಶೇಷವಾಗಿ ಸೌಖ್ಯವನ್ನು ದಯಪಾಲಿಸಿದರೆ, ಅವನು ಇಹಲೋಕ ಮತ್ತು ಪರಲೋಕದಲ್ಲಿ ವಿಜಯಿಯಾಗುತ್ತಾನೆ. ಆ ಸೌಖ್ಯವು ನಿವಾರಣೆಯಾದರೆ, ಅವನಿಗೆ ಇಹಲೋಕ ಮತ್ತು ಪರಲೋಕದ ಸಂಕಷ್ಟಗಳು ಎರಗುತ್ತವೆ. ಏಕೆಂದರೆ, ಸೌಖ್ಯವು ಧಾರ್ಮಿಕ ಮತ್ತು ಐಹಿಕ ಕ್ಷೇಮವನ್ನು ಒಳಗೊಂಡಿದೆ.

التصنيفات

Reported Supplications