إعدادات العرض
ಅದ್‌ಹಿಬಿಲ್ ಬಅ್‌ಸ್, ರಬ್ಬನ್ನಾಸ್, ವಶ್‌ಫಿ ಅಂತ ಶ್ಶಾಫೀ, ಲಾ ಶಿಫಾಅ ಇಲ್ಲಾ ಶಿಫಾಉಕ್, ಶಿಫಾಅನ್ ಲಾ ಯುಗಾದಿರು ಸಖಮಾ". (ಅರ್ಥ: ಓ ಮಾನವರ…
ಅದ್‌ಹಿಬಿಲ್ ಬಅ್‌ಸ್, ರಬ್ಬನ್ನಾಸ್, ವಶ್‌ಫಿ ಅಂತ ಶ್ಶಾಫೀ, ಲಾ ಶಿಫಾಅ ಇಲ್ಲಾ ಶಿಫಾಉಕ್, ಶಿಫಾಅನ್ ಲಾ ಯುಗಾದಿರು ಸಖಮಾ". (ಅರ್ಥ: ಓ ಮಾನವರ ಪರಿಪಾಲಕನೇ, ಕಾಯಿಲೆಯನ್ನು ದೂರ ಮಾಡು, ಮತ್ತು ಗುಣಪಡಿಸು, ನೀನೇ ಗುಣಪಡಿಸುವವನು. ನಿನ್ನ ಗುಣಪಡಿಸುವಿಕೆಯ ಹೊರತು ಬೇರೆ (ನೈಜ) ಗುಣಪಡಿಸುವಿಕೆ ಇಲ್ಲ. ಯಾವುದೇ ರೋಗವನ್ನು ಉಳಿಸದಂತಹ (ಸಂಪೂರ್ಣ) ಗುಣಪಡಿಸುವಿಕೆಯನ್ನು ನೀಡು.)
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ರೋಗಿಯ ಬಳಿಗೆ ಬಂದು ಪ್ರಾರ್ಥಿಸುವಾಗ ಹೀಗೆ ಹೇಳುತ್ತಿದ್ದರು: "ಅದ್‌ಹಿಬಿಲ್ ಬಅ್‌ಸ್, ರಬ್ಬನ್ನಾಸ್, ವಶ್‌ಫಿ ಅಂತ ಶ್ಶಾಫೀ, ಲಾ ಶಿಫಾಅ ಇಲ್ಲಾ ಶಿಫಾಉಕ್, ಶಿಫಾಅನ್ ಲಾ ಯುಗಾದಿರು ಸಖಮಾ". (ಅರ್ಥ: ಓ ಮಾನವರ ಪರಿಪಾಲಕನೇ, ಕಾಯಿಲೆಯನ್ನು ದೂರ ಮಾಡು, ಮತ್ತು ಗುಣಪಡಿಸು, ನೀನೇ ಗುಣಪಡಿಸುವವನು. ನಿನ್ನ ಗುಣಪಡಿಸುವಿಕೆಯ ಹೊರತು ಬೇರೆ (ನೈಜ) ಗುಣಪಡಿಸುವಿಕೆ ಇಲ್ಲ. ಯಾವುದೇ ರೋಗವನ್ನು ಉಳಿಸದಂತಹ (ಸಂಪೂರ್ಣ) ಗುಣಪಡಿಸುವಿಕೆಯನ್ನು ನೀಡು.)
الترجمة
العربية বাংলা Bosanski English Español فارسی Français Indonesia Tagalog Türkçe اردو 中文 हिन्दी Tiếng Việt සිංහල ئۇيغۇرچە Hausa Kurdî தமிழ் Русский অসমীয়া Nederlands Kiswahili ગુજરાતી Magyar ქართული Română Português ไทย తెలుగు मराठी دری አማርኛ Malagasy Македонски ភាសាខ្មែរ Українська ਪੰਜਾਬੀ Wolof پښتو Moore Svenska മലയാളം Српскиالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ರೋಗಿಯನ್ನು ಸಂದರ್ಶಿಸಿದಾಗ, ಅವನಿಗಾಗಿ ಪ್ರಾರ್ಥಿಸುತ್ತಾ ಹೀಗೆ ಹೇಳುತ್ತಿದ್ದರು: ಅಲ್ಲಾಹುಮ್ಮ (ಓ ಅಲ್ಲಾಹ್), (ಅದ್‌ಹಿಬ್) ದೂರ ಮಾಡು ಮತ್ತು ನಿವಾರಿಸು (ಅಲ್-ಬಅ್‌ಸ್) ನೋವನ್ನು ಮತ್ತು ರೋಗದ ತೀವ್ರತೆಯನ್ನು, (ರಬ್ಬನ್ನಾಸ್) ಓ ಮಾನವರ ಪ್ರಭು, ಸೃಷ್ಟಿಕರ್ತನೇ ಮತ್ತು ಪರಿಪಾಲಕನೇ, (ವಶ್‌ಫಿ) ಈ ರೋಗಿಯನ್ನು ಗುಣಪಡಿಸು, (ಅಂತ) ಪರಿಶುದ್ಧನಾದ ನೀನು, (ಅಶ್ಶಾಫೀ) ಗುಣಪಡಿಸುವವನು, ನಿನ್ನ 'ಅಶ್ಶಾಫಿ' ಎಂಬ ಹೆಸರಿನ ಮೂಲಕ ನಾನು ನಿನ್ನಲ್ಲಿ ಬೇಡುತ್ತೇನೆ, (ಲಾ ಶಿಫಾಅ) ರೋಗಿಗೆ ಯಾವುದೇ ನೈಜ ಗುಣಪಡಿಸುವಿಕೆ ಲಭಿಸುವುದಿಲ್ಲ (ಇಲ್ಲಾ ಶಿಫಾಉಕ) ನಿನ್ನ ಗುಣಪಡಿಸುವಿಕೆ ಮತ್ತು ಆರೋಗ್ಯ ನೀಡುವಿಕೆಯ ಹೊರತು, (ಶಿಫಾಅನ್) ಸಂಪೂರ್ಣವಾದ ಗುಣಪಡಿಸುವಿಕೆ (ಲಾ ಯುಗಾದಿರು) ಅದು ಬಿಡುವುದಿಲ್ಲ, ಉಳಿಸುವುದಿಲ್ಲ ಮತ್ತು ತೊರೆಯುವುದಿಲ್ಲ (ಸಖಮಾ) ಬೇರೊಂದು ರೋಗವನ್ನು ಅಥವಾ ಅಸ್ವಸ್ಥತೆಯನ್ನು.فوائد الحديث
ಗುಣಪಡಿಸುವವನು (ಅಶ್ಶಾಫಿ) ಅಲ್ಲಾಹು ಮಾತ್ರ. ವೈದ್ಯರು ಮತ್ತು ಔಷಧಿಗಳು ಕೇವಲ ಸಾಧನಗಳಾಗಿವೆ. ಅವು ಅಲ್ಲಾಹುವಿನ ಅನುಮತಿಯಿಲ್ಲದೆ ಲಾಭವನ್ನಾಗಲೀ ನಷ್ಟವನ್ನಾಗಲೀ ಉಂಟುಮಾಡಲಾರವು.
ರೋಗಿಯನ್ನು ಸಂದರ್ಶಿಸುವುದು ಮುಸ್ಲಿಮರು ಪರಸ್ಪರ ನೆರವೇರಿಸಬೇಕಾದ ಹಕ್ಕುಗಳಲ್ಲಿ ಒಂದಾಗಿದೆ. ಕುಟುಂಬ ಸದಸ್ಯರ ವಿಷಯದಲ್ಲಿ ಇದು ಹೆಚ್ಚು ಮಹತ್ವ ಪಡೆಯುತ್ತದೆ.
ರೋಗಿಯನ್ನು ಸಂದರ್ಶಿಸುವವರು ಅವನಿಗಾಗಿ ಈ ಅಧಿಕೃತ ಮತ್ತು ಅನುಗ್ರಹೀತ ಪ್ರಾರ್ಥನೆಯನ್ನು ಮಾಡಲು ಪ್ರೋತ್ಸಾಹ.
ಕುರ್‌ಆನ್ ಮತ್ತು ಉತ್ತಮ ಪ್ರಾರ್ಥನೆಗಳ ಮೂಲಕ 'ರುಕ್ಯಾ ಶರಇಯ್ಯ' (ಮಂತ್ರ/ಆಧ್ಯಾತ್ಮಿಕ ಚಿಕಿತ್ಸೆ) ದೊಂದಿಗೆ ಚಿಕಿತ್ಸೆ ನೀಡುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮಾರ್ಗದರ್ಶನಗಳಲ್ಲಿ ಒಳಪಟ್ಟದ್ದಾಗಿದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಮಗೆ ಅನಾರೋಗ್ಯವಾದಾಗ ತಮಗಾಗಿಯೇ ರುಕ್ಯಾ (ಮಂತ್ರ) ಮಾಡಿಕೊಳ್ಳುತ್ತಿದ್ದರು. ಹಾಗೆಯೇ ತಮ್ಮ ಕುಟುಂಬದವರು ಮತ್ತು ಇತರರು ಅನಾರೋಗ್ಯಕ್ಕೆ ತುತ್ತಾದಾಗ ಅವರಿಗೂ ರುಕ್ಯಾ ಮಾಡುತ್ತಿದ್ದರು.
ಇಬ್ನ್ ಹಜರ್ ಹೇಳುತ್ತಾರೆ: "ರೋಗವು ಪಾಪಗಳಿಗೆ ಪ್ರಾಯಶ್ಚಿತ್ತ ಮತ್ತು ಪುಣ್ಯವನ್ನು ತರುತ್ತದೆ ಎಂದು ಹಲವಾರು ಹದೀಸ್‌ಗಳಲ್ಲಿ ಬಂದಿರುವಾಗ, ರೋಗಿಗೆ ಗುಣಮುಖವಾಗಲೆಂದು ಪ್ರಾರ್ಥಿಸುವುದರ ಬಗ್ಗೆ ಪ್ರಶ್ನೆ ಉದ್ಭವಿಸಬಹುದು. ಅದಕ್ಕಿರುವ ಉತ್ತರವೇನೆಂದರೆ: ಪ್ರಾರ್ಥನೆಯು ಒಂದು 'ಇಬಾದತ್' (ಆರಾಧನೆ) ಆಗಿದೆ. ಅದು ಪುಣ್ಯ ಮತ್ತು ಪ್ರಾಯಶ್ಚಿತ್ತಕ್ಕೆ ವಿರುದ್ಧವಾಗಿಲ್ಲ. ಏಕೆಂದರೆ ಇವೆರಡೂ ರೋಗದ ಆರಂಭದಲ್ಲೇ ಮತ್ತು ಅದರ ಮೇಲೆ ತಾಳ್ಮೆ ವಹಿಸುವುದರಿಂದ ದೊರೆಯುತ್ತವೆ. ಪ್ರಾರ್ಥಿಸುವವನು ಎರಡು ಒಳಿತುಗಳ ನಡುವೆ ಇರುತ್ತಾನೆ: ಒಂದೋ ಅವನ ಉದ್ದೇಶ ಈಡೇರುತ್ತದೆ, ಅಥವಾ ಅದಕ್ಕೆ ಬದಲಾಗಿ ಪ್ರಯೋಜನವನ್ನು ತರುವ ಅಥವಾ ಹಾನಿಯನ್ನು ತಡೆಯುವ ಮೂಲಕ ಪರಿಹಾರ ನೀಡಲಾಗುತ್ತದೆ. ಇವೆಲ್ಲವೂ ಅಲ್ಲಾಹುವಿನ ಅನುಗ್ರಹವಾಗಿವೆ.
