ನನ್ನ ಸಮುದಾಯಕ್ಕೆ ಅವರ ಮನದಲ್ಲಿ ಮೂಡುವ ದುರ್ವಿಚಾರಗಳನ್ನು, ಅವರು ಅವುಗಳನ್ನು ಕಾರ್ಯಗತಗೊಳಿಸದಿರುವ ತನಕ ಅಥವಾ ಮಾತನಾಡದಿರುವ ತನಕ…

ನನ್ನ ಸಮುದಾಯಕ್ಕೆ ಅವರ ಮನದಲ್ಲಿ ಮೂಡುವ ದುರ್ವಿಚಾರಗಳನ್ನು, ಅವರು ಅವುಗಳನ್ನು ಕಾರ್ಯಗತಗೊಳಿಸದಿರುವ ತನಕ ಅಥವಾ ಮಾತನಾಡದಿರುವ ತನಕ ಅಲ್ಲಾಹು ಕ್ಷಮಿಸಿದ್ದಾನೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಸಮುದಾಯಕ್ಕೆ ಅವರ ಮನದಲ್ಲಿ ಮೂಡುವ ದುರ್ವಿಚಾರಗಳನ್ನು, ಅವರು ಅವುಗಳನ್ನು ಕಾರ್ಯಗತಗೊಳಿಸದಿರುವ ತನಕ ಅಥವಾ ಮಾತನಾಡದಿರುವ ತನಕ ಅಲ್ಲಾಹು ಕ್ಷಮಿಸಿದ್ದಾನೆ."

[صحيح] [متفق عليه]

الشرح

ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಬ್ಬ ಮುಸಲ್ಮಾನನ ಮನಸ್ಸಿನಲ್ಲಿ ಉಂಟಾಗುವ ದುಷ್ಟ ಯೋಚನೆಗಳಿಗಾಗಿ, ಅವನು ಅದನ್ನು ಕಾರ್ಯಗತಗೊಳಿಸದಿರುವ ತನಕ ಅಥವಾ ಮಾತನಾಡದಿರುವ ತನಕ ಅಲ್ಲಾಹು ಅವನನ್ನು ಶಿಕ್ಷಿಸುವುದಿಲ್ಲ. ಏಕೆಂದರೆ, ಅಲ್ಲಾಹು ಆ ಕಷ್ಟವನ್ನು ನಿವಾರಿಸಿ ಕ್ಷಮಿಸಿದ್ದಾನೆ. ಅವನು ಮುಹಮ್ಮದರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮುದಾಯವನ್ನು ಅವರ ಮನಸ್ಸಿನಲ್ಲಿ ಉಂಟಾಗುವ ಸಂಶಯಗಳಿಗಾಗಿ, ಅವು ಅವರ ಮನಸ್ಸಿನಲ್ಲಿ ದೃಢವಾಗಿ ನೆಲೆಯೂರಿ ಅವರು ಅವುಗಳ ಬಗ್ಗೆ ನಿಶ್ಚಿಂತರಾಗುವ ತನಕ ಶಿಕ್ಷಿಸುವುದಿಲ್ಲ. ಆದರೆ, ಅಹಂಕಾರ, ಅಹಂಭಾವ, ಕಾಪಟ್ಯಗಳಂತೆ ಅವು ಅವರ ಮನಸ್ಸಿನಲ್ಲಿ ದೃಢವಾಗಿ ನೆಲೆಯೂರಿದರೆ, ಅಥವಾ ಅವು ಅವರ ಅಂಗಾಂಗಗಳಿಂದ ಪ್ರಕಟವಾದರೆ, ಅಥವಾ ಅವರ ಮಾತಿನಿಂದ ಹೊರಹೊಮ್ಮಿದರೆ ಅಲ್ಲಾಹು ಅವರನ್ನು ಅದಕ್ಕಾಗಿ ಶಿಕ್ಷಿಸುತ್ತಾನೆ.

فوائد الحديث

ಸರ್ವಶಕ್ತನಾದ ಅಲ್ಲಾಹು ಮನುಷ್ಯನ ಮನಸ್ಸಿನಲ್ಲಿ ಉಂಟಾಗುವ ಯೋಚನೆಗಳು ಮತ್ತು ದುರ್ವಿಚಾರಗಳಗಳನ್ನು ಕ್ಷಮಿಸುತ್ತಾನೆ ಮತ್ತು ನಿರ್ಲಕ್ಷಿಸುತ್ತಾನೆ.

ಒಬ್ಬ ವ್ಯಕ್ತಿ ಮನಸ್ಸಿನಲ್ಲಿ ವಿಚ್ಛೇದನ ನೀಡಲು ಯೋಚಿಸಿದರೆ, ಅಥವಾ ಅದು ಅವನ ಮನದಲ್ಲಿ ಮೂಡಿದರೆ, ಅವನು ಅದನ್ನು ಮಾತಿನಿಂದ ಅಥವಾ ಬರಹದಿಂದ ವ್ಯಕ್ತಪಡಿಸದಿರುವ ತನಕ ಅದು ವಿಚ್ಛೇದನ ಎಂದು ಪರಿಗಣಿಸಲಾಗುವುದಿಲ್ಲ.

ಮನುಷ್ಯನ ಮನಸ್ಸಿನಲ್ಲಿ ಎಷ್ಟೇ ದೊಡ್ಡ ದುಷ್ಟ ಯೋಚನೆ ಮೂಡಿದರೂ ಅದಕ್ಕಾಗಿ ಅವನು ಶಿಕ್ಷಿಸಲ್ಪಡುವುದಿಲ್ಲ. ಅದು ಅವನ ಮನಸ್ಸಿನಲ್ಲಿ ದೃಢವಾಗಿ ನೆಲೆಯೂರಿ ಅವನು ಅದನ್ನು ಕಾರ್ಯಗತಗೊಳಿಸದಿರುವ ಅಥವಾ ಮಾತನಾಡದಿರುವ ತನಕ.

ಮುಹಮ್ಮದರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮುದಾಯಕ್ಕಿರುವ ಮಹಾ ಗೌರವವನ್ನು ತಿಳಿಸಲಾಗಿದೆ. ಏಕೆಂದರೆ, ಹಿಂದಿನ ಸಮುದಾಯಗಳಿಗೆ ವ್ಯತಿರಿಕ್ತವಾಗಿ ಮನಸ್ಸಿನಲ್ಲಿ ಮೂಡುವ ವಿಚಾರಗಳಿಗಾಗಿ ಈ ಸಮುದಾಯವು ಶಿಕ್ಷಿಸಲ್ಪಡುವುದಿಲ್ಲ.

التصنيفات

Words of Divorce