إعدادات العرض
ಗಾಳಿಯನ್ನು ನಿಂದಿಸಬೇಡಿ. ನಿಮಗೆ ಇಷ್ಟವಿಲ್ಲದ್ದನ್ನು ನೋಡಿದರೆ ಹೀಗೆ ಹೇಳಿರಿ: ಓ ಅಲ್ಲಾಹ್, ಈ ಗಾಳಿಯ ಒಳಿತು, ಅದರಲ್ಲಿರುವ ಒಳಿತು…
ಗಾಳಿಯನ್ನು ನಿಂದಿಸಬೇಡಿ. ನಿಮಗೆ ಇಷ್ಟವಿಲ್ಲದ್ದನ್ನು ನೋಡಿದರೆ ಹೀಗೆ ಹೇಳಿರಿ: ಓ ಅಲ್ಲಾಹ್, ಈ ಗಾಳಿಯ ಒಳಿತು, ಅದರಲ್ಲಿರುವ ಒಳಿತು ಮತ್ತು ಅದನ್ನು ಯಾವುದಕ್ಕಾಗಿ ಆಜ್ಞಾಪಿಸಲಾಗಿದೆಯೋ ಅದರ ಒಳಿತನ್ನು ನಾವು ನಿನ್ನಲ್ಲಿ ಬೇಡುತ್ತೇವೆ. ಈ ಗಾಳಿಯ ಕೆಡುಕು, ಅದರಲ್ಲಿರುವ ಕೆಡುಕು ಮತ್ತು ಅದನ್ನು ಯಾವುದಕ್ಕಾಗಿ ಆಜ್ಞಾಪಿಸಲಾಗಿದೆಯೋ ಅದರ ಕೆಡುಕಿನಿಂದ ನಾವು ನಿನ್ನಲ್ಲಿ ಅಭಯ ಯಾಚಿಸುತ್ತೇವೆ
ಉಬೈ ಬಿನ್ ಕಅಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಗಾಳಿಯನ್ನು ನಿಂದಿಸಬೇಡಿ. ನಿಮಗೆ ಇಷ್ಟವಿಲ್ಲದ್ದನ್ನು ನೋಡಿದರೆ ಹೀಗೆ ಹೇಳಿರಿ: ಓ ಅಲ್ಲಾಹ್, ಈ ಗಾಳಿಯ ಒಳಿತು, ಅದರಲ್ಲಿರುವ ಒಳಿತು ಮತ್ತು ಅದನ್ನು ಯಾವುದಕ್ಕಾಗಿ ಆಜ್ಞಾಪಿಸಲಾಗಿದೆಯೋ ಅದರ ಒಳಿತನ್ನು ನಾವು ನಿನ್ನಲ್ಲಿ ಬೇಡುತ್ತೇವೆ. ಈ ಗಾಳಿಯ ಕೆಡುಕು, ಅದರಲ್ಲಿರುವ ಕೆಡುಕು ಮತ್ತು ಅದನ್ನು ಯಾವುದಕ್ಕಾಗಿ ಆಜ್ಞಾಪಿಸಲಾಗಿದೆಯೋ ಅದರ ಕೆಡುಕಿನಿಂದ ನಾವು ನಿನ್ನಲ್ಲಿ ಅಭಯ ಯಾಚಿಸುತ್ತೇವೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी ئۇيغۇرچە Hausa Kurdî Português සිංහල Kiswahili অসমীয়া Tiếng Việt ગુજરાતી Nederlands മലയാളം Română Yorùbá Magyar ქართული Moore ไทย Македонски తెలుగు मराठी Українська ਪੰਜਾਬੀ دری አማርኛ Malagasy ភាសាខ្មែរالشرح
ಗಾಳಿಯನ್ನು ಶಪಿಸುವುದು ಅಥವಾ ನಿಂದಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಏಕೆಂದರೆ ಅದು ತನ್ನ ಸೃಷ್ಟಿಕರ್ತನ ಆಜ್ಞೆಯಂತೆ ವರ್ತಿಸುತ್ತದೆ. ಅದು ಕೆಲವೊಮ್ಮೆ ಕರುಣೆಯನ್ನು ಮತ್ತು ಕೆಲವೊಮ್ಮೆ ಶಿಕ್ಷೆಯನ್ನು ತರುತ್ತದೆ. ಅದನ್ನು ನಿಂದಿಸುವುದು ಅದರ ಸೃಷ್ಟಿಕರ್ತನಾದ ಅಲ್ಲಾಹನನ್ನು ನಿಂದಿಸಿದಂತೆ ಮತ್ತು ಅವನ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದಂತೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರ ಸೃಷ್ಟಿಕರ್ತನಾದ ಅಲ್ಲಾಹನ ಕಡೆಗೆ ಮರಳಲು ಮತ್ತು ಅದರ ಒಳಿತು, ಅದರಲ್ಲಿರುವ ಒಳಿತು ಹಾಗೂ ಮಳೆಯನ್ನು ತರುವುದು, ಪರಾಗಸ್ಪರ್ಶವನ್ನು ಸಾಗಿಸುವುದು ಮುಂತಾದವುಗಳಿಗಾಗಿ ಅದನ್ನು ಕಳುಹಿಸಲಾದ ಒಳಿತನ್ನು ಬೇಡಲು ನಿರ್ದೇಶಿಸುತ್ತಾರೆ. ಹಾಗೆಯೇ ಅದರ ಕೆಡುಕು, ಅದರಲ್ಲಿರುವ ಕೆಡುಕು ಮತ್ತು ಸಸ್ಯಗಳು ಹಾಗೂ ಮರಗಳನ್ನು ನಾಶಪಡಿಸುವುದು, ಜಾನುವಾರುಗಳನ್ನು ನಾಶಪಡಿಸುವುದು ಮತ್ತು ಕಟ್ಟಡಗಳನ್ನು ಕೆಡುವುದು ಮುಂತಾದವುಗಳಿಗಾಗಿ ಅದನ್ನು ಕಳುಹಿಸಲಾದ ಕೆಡುಕಿನಿಂದ ಅಲ್ಲಾಹನಲ್ಲಿ ಅಭಯ ಯಾಚಿಸಲು ನಿರ್ದೇಶಿಸುತ್ತಾರೆ. ಅಲ್ಲಾಹನಲ್ಲಿ ಈ ರೀತಿ ಬೇಡುವುದು ಅಲ್ಲಾಹನಿಗಿರುವ ದಾಸ್ಯತ್ವವನ್ನು ನಿಜಪಡಿಸುವುದಾಗಿದೆ.فوائد الحديث
ಗಾಳಿಯನ್ನು ನಿಂದಿಸುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಅದು ನಿಯಂತ್ರಣದಲ್ಲಿರುವ ಸೃಷ್ಟಿಯಾಗಿದೆ. ಆದ್ದರಿಂದ, ಅದನ್ನು ನಿಂದಿಸಿದರೆ ಅದರ ಸೃಷ್ಟಿಕರ್ತ ಮತ್ತು ನಿಯಂತ್ರಕನನ್ನು ನಿಂದಿಸಿದಂತಾಗುತ್ತದೆ. ಅದು ತೌಹೀದ್‌ನಲ್ಲಿರುವ (ಏಕದೇವವಿಶ್ವಾಸದಲ್ಲಿರುವ) ಕೊರತೆಯಾಗಿದೆ.
ಅಲ್ಲಾಹನ ಕಡೆಗೆ ಮರಳುವುದು ಮತ್ತು ಅವನು ಸೃಷ್ಟಿಸಿದ ಕೆಡುಕಿನಿಂದ ಅವನಲ್ಲಿ ಆಶ್ರಯ ಪಡೆಯುವುದು.
ಗಾಳಿಯನ್ನು ಒಳಿತಿನ ಆದೇಶದೊಂದಿಗೆ ಕಳುಹಿಸಲಾಗುತ್ತದೆ. ಹಾಗೆಯೇ ಅದನ್ನು ಕೆಡುಕಿನ ಆದೇಶದೊಂದಿಗೂ ಕಳುಹಿಸಲಾಗುತ್ತದೆ.
ಇಬ್ನ್ ಬಾಝ್ ಹೇಳುತ್ತಾರೆ: "ಗಾಳಿಯನ್ನು ನಿಂದಿಸುವುದು ಪಾಪಗಳಲ್ಲಿ ಒಂದಾಗಿದೆ. ಏಕೆಂದರೆ ಅದು ನಿಯಂತ್ರಣದಲ್ಲಿರುವ ಸೃಷ್ಟಿಯಾಗಿದೆ. ಅದನ್ನು ಒಳಿತಿನೊಂದಿಗೂ ಕೆಡುಕಿನೊಂದಿಗೂ ಕಳುಹಿಸಲಾಗುತ್ತದೆ. ಆದ್ದರಿಂದ ಅದನ್ನು ನಿಂದಿಸುವುದು ಸರಿಯಲ್ಲ. "ಅಲ್ಲಾಹು ಗಾಳಿಯನ್ನು ಶಪಿಸಲಿ" ಅಥವಾ "ಅಲ್ಲಾಹು ಗಾಳಿಯೊಂದಿಗೆ ಹೋರಾಡಲಿ" ಅಥವಾ "ಈ ಗಾಳಿಯಲ್ಲಿ ಅಲ್ಲಾಹು ಸಮೃದ್ಧಿ (ಬರಕತ್) ಮಾಡದಿರಲಿ" ಮುಂತಾದ ಮಾತುಗಳನ್ನು ಹೇಳಬಾರದು. ಬದಲಿಗೆ, ಸತ್ಯವಿಶ್ವಾಸಿಯು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾರ್ಗದರ್ಶನದಂತೆ ನಡೆಯಬೇಕು."
ನಿಂದಿಸುವುದು ಮತ್ತು ಶಪಿಸುವುದರಲ್ಲಿ ಗಾಳಿಯಂತೆಯೇ ಅದರೊಂದಿಗೆ ಸಂಬಂಧವಿರುವ ತಾಪ, ಚಳಿ, ಬಿಸಿಲು, ಧೂಳು ಮುಂತಾದ ಅಲ್ಲಾಹನ ಸೃಷ್ಟಿ ಮತ್ತು ನಿಯಂತ್ರಣದಲ್ಲಿರುವ ಇತರ ವಿಷಯಗಳೂ ಸೇರುತ್ತವೆ.
التصنيفات
Dhikr on Special Occasions