إعدادات العرض
ಯಾವ ವ್ಯಕ್ತಿಯ ಬಳಿ ನನ್ನ ಹೆಸರನ್ನು ಉಲ್ಲೇಖಿಸಲಾಗಿಯೂ ಅವನು ನನ್ನ ಮೇಲೆ ದುರೂದ್ (ಸಲಾತ್) ಹೇಳಲಿಲ್ಲವೋ ಅವನ ಮೂಗು ಮಣ್ಣಾಗಲಿ (ಅವನು…
ಯಾವ ವ್ಯಕ್ತಿಯ ಬಳಿ ನನ್ನ ಹೆಸರನ್ನು ಉಲ್ಲೇಖಿಸಲಾಗಿಯೂ ಅವನು ನನ್ನ ಮೇಲೆ ದುರೂದ್ (ಸಲಾತ್) ಹೇಳಲಿಲ್ಲವೋ ಅವನ ಮೂಗು ಮಣ್ಣಾಗಲಿ (ಅವನು ನಾಶವಾಗಲಿ). ಯಾವ ವ್ಯಕ್ತಿ ರಮದಾನ್ ತಿಂಗಳನ್ನು ಪಡೆದೂ ಸಹ ಅವನ ಪಾಪಗಳು ಕ್ಷಮಿಸಲ್ಪಡುವ ಮೊದಲು ಅದು ಮುಗಿದುಹೋಯಿತೋ ಅವನ ಮೂಗು ಮಣ್ಣಾಗಲಿ. ಯಾವ ವ್ಯಕ್ತಿಯ ಬಳಿ ಅವನ ತಂದೆತಾಯಿ ವೃದ್ಧಾಪ್ಯವನ್ನು ತಲುಪಿಯೂ ಅವರು ಅವನನ್ನು ಸ್ವರ್ಗಕ್ಕೆ ಸೇರಿಸಲಿಲ್ಲವೋ ಅವನ ಮೂಗು ಮಣ್ಣಾಗಲಿ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವ ವ್ಯಕ್ತಿಯ ಬಳಿ ನನ್ನ ಹೆಸರನ್ನು ಉಲ್ಲೇಖಿಸಲಾಗಿಯೂ ಅವನು ನನ್ನ ಮೇಲೆ ದುರೂದ್ (ಸಲಾತ್) ಹೇಳಲಿಲ್ಲವೋ ಅವನ ಮೂಗು ಮಣ್ಣಾಗಲಿ (ಅವನು ನಾಶವಾಗಲಿ). ಯಾವ ವ್ಯಕ್ತಿ ರಮದಾನ್ ತಿಂಗಳನ್ನು ಪಡೆದೂ ಸಹ ಅವನ ಪಾಪಗಳು ಕ್ಷಮಿಸಲ್ಪಡುವ ಮೊದಲು ಅದು ಮುಗಿದುಹೋಯಿತೋ ಅವನ ಮೂಗು ಮಣ್ಣಾಗಲಿ. ಯಾವ ವ್ಯಕ್ತಿಯ ಬಳಿ ಅವನ ತಂದೆತಾಯಿ ವೃದ್ಧಾಪ್ಯವನ್ನು ತಲುಪಿಯೂ ಅವರು ಅವನನ್ನು ಸ್ವರ್ಗಕ್ಕೆ ಸೇರಿಸಲಿಲ್ಲವೋ ಅವನ ಮೂಗು ಮಣ್ಣಾಗಲಿ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी ئۇيغۇرچە Hausa Kurdî Português සිංහල Kiswahili অসমীয়া Tiếng Việt ગુજરાતી Nederlands മലയാളം Română Magyar ქართული Moore ไทย Македонски తెలుగు मराठी ਪੰਜਾਬੀ دری አማርኛ Malagasy Українська ភាសាខ្មែរالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂರು ರೀತಿಯ ಜನರಿಗೆ ಅವಮಾನ, ಅಧೋಗತಿ ಮತ್ತು ನಷ್ಟದಿಂದ ಅವರ ಮೂಗು ಮಣ್ಣಾಗಲಿ ಎಂದು ಪ್ರಾರ್ಥಿಸಿದರು: ಮೊದಲನೆಯ ರೀತಿಯ ಜನರು: ಅವರ ಬಳಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಸರನ್ನು ಉಲ್ಲೇಖಿಸಲಾಗಿದ್ದರೂ ಅವರು "ಸಲ್ಲಲ್ಲಾಹು ಅಲೈಹಿ ವಸಲ್ಲಮ್" ಅಥವಾ ಅಂತಹ ಯಾವುದೇ ದುರೂದ್ (ಸಲಾತ್) ಹೇಳಲಿಲ್ಲ. ಎರಡನೆಯ ರೀತಿಯ ಜನರು: ಅವರು ರಮದಾನ್ ತಿಂಗಳನ್ನು ಪಡೆದೂ ಸಹ ಸತ್ಕರ್ಮಗಳನ್ನು ನಿರ್ವಹಿಸದ ಕಾರಣ ಅವರ ಪಾಪಗಳು ಕ್ಷಮಿಸಲ್ಪಡುವ ಮೊದಲೇ ತಿಂಗಳು ಮುಗಿದುಹೋಯಿತು. ಮೂರನೆಯ ರೀತಿ: ಅವರ ಬಳಿ ಅವರ ತಂದೆತಾಯಿಯರು ವೃದ್ಧಾಪ್ಯವನ್ನು ತಲುಪಿದರು, ಆದರೆ ಅವರು ತಂದೆತಾಯಿಗಳಿಗೆ ಯಾವುದೇ ಒಳಿತು ಮಾಡಲು ಮತ್ತು ಅವರ ಹಕ್ಕುಗಳನ್ನು ನೆರವೇರಿಸಲು ವಿಫಲರಾದ ಕಾರಣ ಅವರ ಸ್ವರ್ಗ ಪ್ರವೇಶಕ್ಕೆ ಇವರು ತಡೆಯಾದರು.فوائد الحديث
ಸಿಂದಿ ಹೇಳುತ್ತಾರೆ: "ಒಟ್ಟಿನಲ್ಲಿ, ಇವರಲ್ಲಿ ಪ್ರತಿಯೊಬ್ಬನೂ ತಾನು ನಿರ್ಲಕ್ಷ್ಯ ವಹಿಸದಿದ್ದರೆ ಹೇರಳವಾದ ಒಳಿತನ್ನು ಪಡೆಯಬಹುದಾದ ಅವಕಾಶವನ್ನು ಹೊಂದಿದ್ದನು. ಆದರೆ ಅವನು ನಿರ್ಲಕ್ಷ್ಯ ವಹಿಸಿದ ಕಾರಣ ಅದನ್ನು ಕಳೆದುಕೊಂಡನು. ಹೀಗಾಗಿ ಅವನು ನಿರಾಶೆ ಮತ್ತು ನಷ್ಟವನ್ನು ಅನುಭವಿಸಿದನು."
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಸರನ್ನು ಉಲ್ಲೇಖಿಸಲಾದಾಗಲೆಲ್ಲಾ ಅವರ ಮೇಲೆ ದುರೂದ್ (ಸಲಾತ್) ಹೇಳಲು ಪ್ರೋತ್ಸಾಹಿಸಲಾಗಿದೆ.
ರಮದಾನ್ ತಿಂಗಳಲ್ಲಿ ಆರಾಧನೆಗಳನ್ನು ನಿರ್ವಹಿಸಲು ಅತಿಯಾಗಿ ಶ್ರಮಿಸಲು ಮತ್ತು ಪ್ರಯತ್ನಿಸಲು ಪ್ರೋತ್ಸಾಹಿಸಲಾಗಿದೆ.
ತಂದೆತಾಯಿಗಳಿಗೆ ಒಳಿತು ಮಾಡಲು ಪರಿಶ್ರಮಿಸುವುದನ್ನು ಮತ್ತು ಅವರನ್ನು ಗೌರವಿಸುವುದನ್ನು ಪ್ರೋತ್ಸಾಹಿಸಲಾಗಿದೆ. ವಿಶೇಷವಾಗಿ ಅವರ ವೃದ್ಧಾಪ್ಯದಲ್ಲಿ.
التصنيفات
Dhikr on Special Occasions