ಮನುಷ್ಯರಲ್ಲಿರುವ ಎರಡು ಗುಣಗಳು ಅವರಲ್ಲಿರುವ ಸತ್ಯನಿಷೇಧದ ಲಕ್ಷಣವಾಗಿವೆ. ವಂಶವನ್ನು ಟೀಕಿಸುವುದು ಮತ್ತು ಮೃತವ್ಯಕ್ತಿಗಾಗಿ…

ಮನುಷ್ಯರಲ್ಲಿರುವ ಎರಡು ಗುಣಗಳು ಅವರಲ್ಲಿರುವ ಸತ್ಯನಿಷೇಧದ ಲಕ್ಷಣವಾಗಿವೆ. ವಂಶವನ್ನು ಟೀಕಿಸುವುದು ಮತ್ತು ಮೃತವ್ಯಕ್ತಿಗಾಗಿ ರೋದಿಸುವುದು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮನುಷ್ಯರಲ್ಲಿರುವ ಎರಡು ಗುಣಗಳು ಅವರಲ್ಲಿರುವ ಸತ್ಯನಿಷೇಧದ ಲಕ್ಷಣವಾಗಿವೆ. ವಂಶವನ್ನು ಟೀಕಿಸುವುದು ಮತ್ತು ಮೃತವ್ಯಕ್ತಿಗಾಗಿ ರೋದಿಸುವುದು."

[صحيح] [رواه مسلم]

الشرح

ಮನುಷ್ಯರಲ್ಲಿರುವ ಎರಡು ಸತ್ಯನಿಷೇಧದ ಕರ್ಮಗಳು ಮತ್ತು ಅಜ್ಞಾನಕಾಲದ ಗುಣಗಳ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುತ್ತಿದ್ದಾರೆ. ಅವು: ಒಂದು: ಜನರ ವಂಶವನ್ನು ಟೀಕಿಸುವುದು, ಅವರನ್ನು ತುಚ್ಛವಾಗಿ ಕಾಣುವುದು ಮತ್ತು ಅವರ ಮುಂದೆ ಅಹಂಕಾರದಿಂದ ವರ್ತಿಸುವುದು. ಎರಡು: ವಿಪತ್ತು ಬಾಧಿಸಿದಾಗ ಅಲ್ಲಾಹನ ವಿಧಿಯ ಬಗ್ಗೆ ಅತೃಪ್ತಿ ಸೂಚಿಸುತ್ತಾ ಗೋಗರೆದು ಅಳುವುದು ಅಥವಾ ದುಃಖ ತಾಳಲಾರದೆ ಬಟ್ಟೆಯನ್ನು ಹರಿಯುವುದು.

فوائد الحديث

ವಿನಯದಿಂದ ನಡೆದುಕೊಳ್ಳಲು ಮತ್ತು ಜನರ ಮುಂದೆ ಅಹಂಕಾರ ತೋರದಿರಲು ಪ್ರೇರೇಪಿಸಲಾಗಿದೆ.

ಕಷ್ಟಗಳು ಬರುವಾಗ ತಾಳ್ಮೆ ತೋರುವುದು ಮತ್ತು ಸಿಟ್ಟು ಮಾಡಿಕೊಳ್ಳದಿರುವುದು ಕಡ್ಡಾಯವಾಗಿದೆ.

ಇವು ಸಣ್ಣ ಸತ್ಯನಿಷೇಧದಲ್ಲಿ ಒಳಪಟ್ಟ ವಿಷಯಗಳಾಗಿವೆ. ಈ ಕಾರ್ಯಗಳನ್ನು ಮಾಡಿದವನು ಇಸ್ಲಾಂ ಧರ್ಮದಿಂದ ಹೊರಹೋಗುವಂತಹ ಸತ್ಯನಿಷೇಧವನ್ನು ಮಾಡಿದವನಾಗುವುದಿಲ್ಲ. ಇಸ್ಲಾಂ ಧರ್ಮದಿಂದ ಹೊರಹೋಗುವುದು ದೊಡ್ಡ ಸತ್ಯನಿಷೇಧ ಮಾಡಿದರೆ ಮಾತ್ರವಾಗಿದೆ.

ಮುಸ್ಲಿಮರಲ್ಲಿ ಒಡಕು ಮತ್ತು ದ್ವೇಷಕ್ಕೆ ಕಾರಣವಾಗುವ ವಂಶವನ್ನು ಟೀಕಿಸುವುದು ಮುಂತಾದ ವಿಷಯಗಳನ್ನು ಇಸ್ಲಾಂ ನಿಷೇಧಿಸಿದೆ.

التصنيفات

Disbelief