ಚೂಪಾದ ಹಲ್ಲನ್ನು ಹೊಂದಿರುವ ಎಲ್ಲಾ ವನ್ಯಮೃಗಗಳನ್ನು ಮತ್ತು ಚೂಪಾದ ಉಗುರನ್ನು ಹೊಂದಿರುವ ಎಲ್ಲಾ ಹಕ್ಕಿಗಳನ್ನು ನಿಷೇಧಿಸಿದ್ದಾರೆ

ಚೂಪಾದ ಹಲ್ಲನ್ನು ಹೊಂದಿರುವ ಎಲ್ಲಾ ವನ್ಯಮೃಗಗಳನ್ನು ಮತ್ತು ಚೂಪಾದ ಉಗುರನ್ನು ಹೊಂದಿರುವ ಎಲ್ಲಾ ಹಕ್ಕಿಗಳನ್ನು ನಿಷೇಧಿಸಿದ್ದಾರೆ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚೂಪಾದ ಹಲ್ಲನ್ನು ಹೊಂದಿರುವ ಎಲ್ಲಾ ವನ್ಯಮೃಗಗಳನ್ನು ಮತ್ತು ಚೂಪಾದ ಉಗುರನ್ನು ಹೊಂದಿರುವ ಎಲ್ಲಾ ಹಕ್ಕಿಗಳನ್ನು ನಿಷೇಧಿಸಿದ್ದಾರೆ.

[صحيح] [رواه مسلم]

الشرح

ತಮ್ಮ ಚೂಪಾದ ಹಲ್ಲುಗಳಿಂದ ಬೇಟೆಯಾಡುವ ಎಲ್ಲಾ ವನ್ಯಪ್ರಾಣಿಗಳ ಮತ್ತು ತಮ್ಮ ಚೂಪಾದ ಉಗುರುಗಳಿಂದ ಹರಿಯುವ ಮತ್ತು ಹಿಡಿಯುವ ಎಲ್ಲಾ ಹಕ್ಕಿಗಳ ಮಾಂಸವನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ.

فوائد الحديث

ಆಹಾರ ಪಾನೀಯ ಮುಂತಾದ ಎಲ್ಲದರಲ್ಲೂ ಶುದ್ಧವಾದ ವಸ್ತುಗಳನ್ನು ಮಾತ್ರ ಸೇವಿಸಲು ಇಸ್ಲಾಂ ಉತ್ತೇಜಿಸಿದೆ.

ಮೂಲವಾಗಿ ಎಲ್ಲಾ ವಸ್ತುಗಳೂ ಅನುಮತಿಸಲ್ಪಟ್ಟಿವೆ—ನಿಷೇಧಿಸಲಾಗಿದೆಯೆಂದು ಕುರ್‌ಆನ್ ಮತ್ತು ಹದೀಸ್‌ಗಳಲ್ಲಿ ಪುರಾವೆಯಿರುವವುಗಳ ಹೊರತು.

التصنيفات

Lawful and Unlawful Animals and Birds