ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹರಕೆಯನ್ನು ನಿಷೇಧಿಸಿದರು ಮತ್ತು ಹೇಳಿದರು: "ಅದು ಯಾವುದೇ ಒಳಿತನ್ನು…

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹರಕೆಯನ್ನು ನಿಷೇಧಿಸಿದರು ಮತ್ತು ಹೇಳಿದರು: "ಅದು ಯಾವುದೇ ಒಳಿತನ್ನು ತರುವುದಿಲ್ಲ. ಅದರಿಂದ ಜಿಪುಣನಲ್ಲಿರುವ (ಹಣವನ್ನು) ಮಾತ್ರ ಹೊರತೆಗೆಯಲಾಗುತ್ತದೆ

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹರಕೆಯನ್ನು ನಿಷೇಧಿಸಿದರು ಮತ್ತು ಹೇಳಿದರು: "ಅದು ಯಾವುದೇ ಒಳಿತನ್ನು ತರುವುದಿಲ್ಲ. ಅದರಿಂದ ಜಿಪುಣನಲ್ಲಿರುವ (ಹಣವನ್ನು) ಮಾತ್ರ ಹೊರತೆಗೆಯಲಾಗುತ್ತದೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹರಕೆಯನ್ನು ನಿಷೇಧಿಸಿದರು. ಹರಕೆ ಎಂದರೆ, ಶಾಸನಕರ್ತನು (ಅಲ್ಲಾಹು) ಕಡ್ಡಾಯಗೊಳಿಸದ ಒಂದು ಕಾರ್ಯವನ್ನು ಮನುಷ್ಯನು ಸ್ವಯಂ ಕಡ್ಡಾಯಗೊಳಿಸುವುದಾಗಿದೆ. ಅವರು ಹೇಳುವುದೇನೆಂದರೆ, ಹರಕೆಯು ಏನನ್ನೂ ಮುಂದಕ್ಕೆ ತರುವುದಿಲ್ಲ ಮತ್ತು ಏನನ್ನೂ ಹಿಂದಕ್ಕೆ ತಳ್ಳುವುದಿಲ್ಲ. ಕಡ್ಡಾಯವಾಗಿ ಖರ್ಚು ಮಾಡಬೇಕಾದ ಕಾರ್ಯಕ್ಕೆ ಮಾತ್ರ ಖರ್ಚು ಮಾಡುವ ಜಿಪುಣನಿಂದ ಅವನ ಹಣವನ್ನು ಹೊರೆತೆಗೆಯುವ ಕೆಲಸವನ್ನಷ್ಟೇ ಅದು ಮಾಡುತ್ತದೆ. ಅಲ್ಲಾಹು ಅವನ ಪಾಲಿಗೆ ನಿರ್ಣಯಿಸದ ಏನನ್ನೂ ಹರಕೆ ಅವನಿಗೆ ತಂದುಕೊಡುವುದಿಲ್ಲ.

فوائد الحديث

ಹರಕೆ ಹೊರುವುದು ಧರ್ಮವಿಧಿತವಲ್ಲ. ಆದರೆ ಯಾರಾದರೂ ಹರಕೆ ಹೊತ್ತರೆ ಅದನ್ನು ಈಡೇರಿಸುವುದು ಕಡ್ಡಾಯವಾಗಿದೆ, ಅದು ಪಾಪಕಾರ್ಯವಾಗಿದ್ದರೆ ಈಡೇರಿಸಬಾರದು.

ಹರಕೆಯನ್ನು ನಿಷೇಧಿಸಲು ಕಾರಣವೇನೆಂದರೆ, "ಅದು ಯಾವುದೇ ಒಳಿತನ್ನು ತರುವುದಿಲ್ಲ." ಅದೇ ರೀತಿ, ಅಲ್ಲಾಹು ನಿರ್ಣಯಿಸಿದ ಏನನ್ನೂ ಅದು ರದ್ದು ಮಾಡುವುದಿಲ್ಲ. ಅದೇ ರೀತಿ, ಹರಕೆ ಹೊತ್ತವನು ತನ್ನ ಬೇಡಿಕೆ ಈಡೇರಿದ್ದನ್ನು ಕಾಣುವಾಗ, ಅದು ಹರಕೆಯ ಕಾರಣದಿಂದ ಎಂದು ಭಾವಿಸುವ ಸಾಧ್ಯತೆಯಿದೆ. ಏಕೆಂದರೆ, ಅವನ ಬೇಡಿಕೆಯನ್ನು ಈಡೇರಿಸಲು ಅಲ್ಲಾಹನಿಗೆ ಹರಕೆಯ ಅಗತ್ಯವಿಲ್ಲ.

ಕುರ್ತುಬಿ ಹೇಳಿದರು: ಇದನ್ನು ನಿಷೇಧಿಸಲು ಕಾರಣವೇನೆಂದರೆ, ಉದಾಹರಣೆಗೆ ಒಬ್ಬ ವ್ಯಕ್ತಿ ಹೇಳುತ್ತಾನೆ: ಅಲ್ಲಾಹು ನನ್ನ ರೋಗವನ್ನು ಗುಣಪಡಿಸಿದರೆ ನಾನು ಇಂತಿಂತಹದ್ದನ್ನು ಕಡ್ಡಾಯವಾಗಿ ದಾನ ಮಾಡುತ್ತೇನೆ. ಹೀಗೆ ಹೇಳುವುದು ಅಸಹ್ಯಕರವಾಗಿರುವುದು ಏಕೆಂದರೆ, ಅವನು ದಾನ ಮಾಡುತ್ತೇನೆಂಬ ಸತ್ಕರ್ಮವನ್ನು ನಿರ್ವಹಿಸಲು ಉದ್ದೇಶವು ನೆರವೇರುವುದನ್ನು ಅವಲಂಬಿಸುತ್ತಾನೆ. ಆದ್ದರಿಂದ ಅವನು ಹರಕೆ ಹೊತ್ತದ್ದು ಅಲ್ಲಾಹನ ಸಾಮೀಪ್ಯ ಗಳಿಸುವ ಉದ್ದೇಶದಿಂದಲ್ಲ, ಬದಲಿಗೆ ಅದಲಿ-ಬದಲಿಗಾಗಿದೆ ಎಂದು ಸ್ಪಷ್ಟವಾಗುತ್ತದೆ. ಇದನ್ನು ಇನ್ನಷ್ಟು ಸ್ಪಷ್ಟಗೊಳಿಸುವುದೇನೆಂದರೆ, ಅವನ ರೋಗವು ಗುಣವಾಗದಿದ್ದರೆ ಅವನು ದಾನ ಮಾಡುವುದಿಲ್ಲ. ಏಕೆಂದರೆ ಅವನ ದಾನವು ರೋಗ ಗುಣವಾಗುವುದನ್ನು ಅವಲಂಬಿಸಿಕೊಂಡಿದೆ. ಇದು ಜಿಪುಣರ ಸ್ಥಿತಿಯಾಗಿದೆ. ತಾನು ವ್ಯಯಿಸುವ ಹಣಕ್ಕೆ—ಬಹುತೇಕ ಸಂದರ್ಭಗಳಲ್ಲಿ ಅದಕ್ಕಿಂತ ಹೆಚ್ಚು—ಬದಲಿಯಾಗಿ ಶೀಘ್ರದಲ್ಲೇ ದೊರೆಯುವುದಾದರೆ ಮಾತ್ರ ಅವರು ಹಣವನ್ನು ಹೊರತೆಗೆಯುತ್ತಾರೆ.

التصنيفات

Oaths and Vows