ಇಹಲೋಕದಲ್ಲಿ ರೇಷ್ಮೆ ಧರಿಸಿದವನು ಪರಲೋಕದಲ್ಲಿ ಅದನ್ನು ಧರಿಸುವುದಿಲ್ಲ

ಇಹಲೋಕದಲ್ಲಿ ರೇಷ್ಮೆ ಧರಿಸಿದವನು ಪರಲೋಕದಲ್ಲಿ ಅದನ್ನು ಧರಿಸುವುದಿಲ್ಲ

ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಹಲೋಕದಲ್ಲಿ ರೇಷ್ಮೆ ಧರಿಸಿದವನು ಪರಲೋಕದಲ್ಲಿ ಅದನ್ನು ಧರಿಸುವುದಿಲ್ಲ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಇಹಲೋಕದಲ್ಲಿ ರೇಷ್ಮೆ ಧರಿಸುವ ಪುರುಷರು ಅದಕ್ಕಾಗಿ ಪಶ್ಚಾತ್ತಾಪಪಡದಿದ್ದರೆ, ಅವರು ಪರಲೋಕದಲ್ಲಿ ಅದನ್ನು ಧರಿಸುವುದಿಲ್ಲ. ಇದು ಅವರಿಗಿರುವ ಶಿಕ್ಷೆಯಾಗಿದೆ.

فوائد الحديث

ಇಲ್ಲಿ ರೇಷ್ಮೆ ಎಂಬುದರ ಉದ್ದೇಶವು ಶುದ್ಧ ನೈಸರ್ಗಿಕ ರೇಷ್ಮೆಯಾಗಿದೆ. ಕೃತಕ ರೇಷ್ಮೆಯು ಈ ಹದೀಸಿನಲ್ಲಿ ಒಳಪಡುವುದಿಲ್ಲ.

ಪುರುಷರು ರೇಷ್ಮೆ ಧರಿಸುವುದು ನಿಷಿದ್ಧವಾಗಿದೆ.

ರೇಷ್ಮೆ ಧರಿಸಬಾರದು ಎಂಬ ನಿಷೇಧವು ರೇಷ್ಮೆ ವಸ್ತ್ರಗಳನ್ನು ಧರಿಸುವುದನ್ನು ಮತ್ತು ಅದನ್ನು ಚಾದರ ಹಾಗೂ ಜಮಾಖಾನೆಯಾಗಿ ಬಳಸುವುದನ್ನು ಕೂಡ ಒಳಗೊಳ್ಳುತ್ತದೆ.

ಬಟ್ಟೆಯಲ್ಲಿ ವಿನ್ಯಾಸ ಅಥವಾ ಅಂಚಿನ ಪಟ್ಟಿಯಾಗಿ ನೇಯಲಾಗುವ, ಎರಡು ಬೆರಳಿನಿಂದ ನಾಲ್ಕು ಬೆರಳುಗಳ ಅಗಲದ ತನಕವಿರುವ ಸ್ವಲ್ಪ ರೇಷ್ಮೆಯನ್ನು ಪುರುಷರಿಗೆ ಅನುಮತಿಸಲಾಗಿದೆ.

التصنيفات

Manners of Dressing