ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ…

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು

ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಲ್ಲುಜ್ಜುವ ಕಡ್ಡಿಯಿಂದ (ಮಿಸ್ವಾಕ್) ಪದೇ ಪದೇ ಬಾಯಿ ಸ್ವಚ್ಛಗೊಳಿಸುತ್ತಿದ್ದರು ಮತ್ತು ಅದನ್ನು ಆದೇಶಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಬಾಯಿಯನ್ನು ಸ್ವಚ್ಛ ಮಾಡುವುದಕ್ಕೆ ಒತ್ತು ನೀಡಲಾಗಿದೆ. ಅವುಗಳಲ್ಲೊಂದು, ರಾತ್ರಿ ನಿದ್ರೆಯಿಂದ ಎದ್ದಾಗ ಹಲ್ಲು ಕಡ್ಡಿಯಿಂದ ಬಾಯಿ ಸ್ವಚ್ಛಗೊಳಿಸುವುದು. ಏಕೆಂದರೆ, ಆಗ ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಲ್ಲು ಕಡ್ಡಿಯಿಂದ ಹಲ್ಲುಗಳನ್ನು ಉಜ್ಜಿ ಬಾಯಿಯನ್ನು ಸ್ವಚ್ಛ ಮಾಡುತ್ತಿದ್ದರು.

فوائد الحديث

ರಾತ್ರಿ ನಿದ್ರೆಯಿಂದ ಎದ್ದಾಗ ಹಲ್ಲು ಕಡ್ಡಿಯಿಂದ ಬಾಯಿ ಸ್ವಚ್ಛ ಮಾಡಬೇಕೆಂಬ ಧಾರ್ಮಿಕ ನಿಯಮಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಏಕೆಂದರೆ, ನಿದ್ರೆಯಿಂದ ಬಾಯಿ ದುರ್ವಾಸನೆ ಬೀರುತ್ತದೆ ಮತ್ತು ಹಲ್ಲು ಕಡ್ಡಿಯು (ಮಿಸ್ವಾಕ್) ಅದನ್ನು ಸ್ವಚ್ಛಗೊಳಿಸುವ ಸಾಧನವಾಗಿದೆ.

ಬಾಯಿ ದುರ್ವಾಸನೆ ಬೀರುವಾಗಲೆಲ್ಲಾ ಅದನ್ನು ಹಲ್ಲು ಕಡ್ಡಿಯಿಂದ ಸ್ವಚ್ಛ ಮಾಡುವ ಧಾರ್ಮಿಕ ನಿಯಮವನ್ನು ಈ ಹದೀಸಿನ ಆಧಾರದಲ್ಲಿ ಇನ್ನಷ್ಟು ಪ್ರಬಲಗೊಳಿಸಲಾಗಿದೆ.

ಸ್ವಚ್ಛತೆಯು ಸಾಮಾನ್ಯವಾಗಿರುವ ಒಂದು ಧಾರ್ಮಿಕ ನಿಯಮವಾಗಿದೆ. ಅದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯಲ್ಲಿದೆ ಮತ್ತು ಉದಾತ್ತ ಶಿಷ್ಟಾಚಾರಗಳಲ್ಲಿ ಒಂದಾಗಿದೆ.

ಬಾಯಿಯನ್ನು ಸ್ವಚ್ಛಗೊಳಿಸುವುದರಲ್ಲಿ ಹಲ್ಲು, ಒಸಡು ಮತ್ತು ನಾಲಗೆಯನ್ನು ಸ್ವಚ್ಛಗೊಳಿಸುವುದು ಕೂಡ ಒಳಪಡುತ್ತದೆ.

ಹಲ್ಲು ಕಡ್ಡಿ (ಮಿಸ್ವಾಕ್) ಎಂದರೆ ಅರಾಕ್ ಮುಂತಾದ ಮರಗಳಿಂದ ತಯಾರಿಸುವ ಕಡ್ಡಿ. ಬಾಯಿ ಮತ್ತು ಹಲ್ಲುಗಳನ್ನು ಸ್ವಚ್ಛ ಮಾಡಲು ಇದನ್ನು ಬಳಸಲಾಗುತ್ತದೆ. ಅದು ಬಾಯಿಗೆ ಸುವಾಸನೆಯನ್ನು ನೀಡುತ್ತದೆ ಮತ್ತು ದುರ್ವಾಸನೆಯನ್ನು ನಿವಾರಿಸುತ್ತದೆ.

التصنيفات

Natural Cleanliness Practices, Prophet's Guidance on Purification