ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ನಿರ್ವಹಿಸುವಾಗ ತಮ್ಮ ಎರಡು ಕೈಗಳನ್ನು, ತಮ್ಮ ಕಂಕುಳದ ಬಿಳುಪು…

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ನಿರ್ವಹಿಸುವಾಗ ತಮ್ಮ ಎರಡು ಕೈಗಳನ್ನು, ತಮ್ಮ ಕಂಕುಳದ ಬಿಳುಪು ಗೋಚರವಾಗುವ ತನಕ ಅಗಲಿಸುತ್ತಿದ್ದರು

ಅಬ್ದುಲ್ಲಾ ಬಿನ್ ಮಾಲಿಕ್ ಬಿನ್ ಬುಹೈನ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ನಿರ್ವಹಿಸುವಾಗ ತಮ್ಮ ಎರಡು ಕೈಗಳನ್ನು, ತಮ್ಮ ಕಂಕುಳದ ಬಿಳುಪು ಗೋಚರವಾಗುವ ತನಕ ಅಗಲಿಸುತ್ತಿದ್ದರು.

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುಜೂದ್ ಮಾಡುವಾಗ, ಸುಜೂದ್‌ನಲ್ಲಿ ತಮ್ಮ ಎರಡು ಕೈಗಳನ್ನು ಅಗಲಿಸುತ್ತಿದ್ದರು. ಅಂದರೆ, ಎರಡು ರೆಕ್ಕೆಗಳಂತೆ ಪ್ರತಿ ಕೈಯನ್ನು ಅದರ ಸಮೀಪದ ಪಾರ್ಶ್ವದಿಂದ ದೂರವಿಡುತ್ತಿದ್ದರು. ಅವರ ಕಂಕುಳದ ಚರ್ಮದ ಬಣ್ಣವು ಗೋಚರವಾಗುವ ತನಕ. ಇದು ತೋಳುಗಳನ್ನುದೂರಗೊಳಿಸುವ ಮತ್ತು ದೇಹದ ಪಾರ್ಶ್ವದಿಂದ ದೂರವಿರಿಸುವ ಆತ್ಯಂತಿಕ ರೂಪವಾಗಿದೆ.

فوائد الحديث

ಈ ರೂಪದಲ್ಲಿ ಸಾಷ್ಟಾಂಗ ಮಾಡುವುದು ಅಪೇಕ್ಷಣೀಯವಾಗಿದೆ. ಅಂದರೆ, ಎರಡು ತೋಳುಗಳನ್ನು ಎರಡು ಪಾರ್ಶ್ವಗಳಿಂದ ದೂರ ಸರಿಸುವುದು.

ಇಮಾಮರ ಹಿಂದೆ ನಮಾಝ್ ಮಾಡುವವನು ಕೈಗಳನ್ನು ಅಗಲಿಸಿದರೆ ಹತ್ತಿರದಲ್ಲಿರುವವನಿಗೆ ತೊಂದರೆಯಾಗುವುದಾದರೆ ಅಗಲಿಸಬಾರದು.

ಸುಜೂದ್‌ನಲ್ಲಿ ಹೀಗೆ ಕೈಗಳನ್ನು ಅಗಲಿಸುವುದರಲ್ಲಿ ಅನೇಕ ಯುಕ್ತಿಗಳು ಮತ್ತು ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವು: ನಮಾಝ್‌ನಲ್ಲಿ ಹುರುಪು ಮತ್ತು ಉತ್ಸಾಹವನ್ನು ಪ್ರಕಟಿಸುವುದು. ಸುಜೂದ್‌ನ ಎಲ್ಲಾ ಅಂಗಗಳ ಮೇಲೆ ಭಾರ ಹಾಕಿದರೆ, ಪ್ರತಿಯೊಂದು ಅಂಗವೂ ಆರಾಧನೆಯಲ್ಲಿ ಅದರ ಪಾಲನ್ನು ಪಡೆಯುತ್ತದೆ. ಹೀಗೆ ಹೇಳಲಾಗುತ್ತದೆ: ಇದರಲ್ಲಿರುವ ಯುಕ್ತಿ ಏನೆಂದರೆ, ಅದು ವಿನಮ್ರತೆಯನ್ನು ಅತಿಯಾಗಿ ಹೋಲುತ್ತದೆ ಮತ್ತು ಅದು ಹಣೆ ಹಾಗೂ ಮೂಗನ್ನು ನೆಲಕ್ಕೆ ಒತ್ತುವುದರ ಆತ್ಯಂತಿಕ ರೂಪವಾಗಿದೆ. ಅಷ್ಟೇ ಅಲ್ಲದೆ, ಅದರಿಂದ ಪ್ರತಿಯೊಂದು ಅಂಗವೂ ತನ್ನನ್ನು ಇತರ ಅಂಗಗಳಿಂದ ಪ್ರತ್ಯೇಕಿಸುತ್ತದೆ.

التصنيفات

Prophet's Guidance on Prayer