إعدادات العرض
ನನಗಿಂತ ಮೊದಲಿನ ಸಮುದಾಯಗಳಲ್ಲಿ ಅಲ್ಲಾಹು ಕಳುಹಿಸಿದ ಯಾವುದೇ ಪ್ರವಾದಿಗೂ ಅವರ ಸಮುದಾಯದಲ್ಲಿ ಶಿಷ್ಯರು ಮತ್ತು ಸಂಗಡಿಗರು ಇಲ್ಲದೇ…
ನನಗಿಂತ ಮೊದಲಿನ ಸಮುದಾಯಗಳಲ್ಲಿ ಅಲ್ಲಾಹು ಕಳುಹಿಸಿದ ಯಾವುದೇ ಪ್ರವಾದಿಗೂ ಅವರ ಸಮುದಾಯದಲ್ಲಿ ಶಿಷ್ಯರು ಮತ್ತು ಸಂಗಡಿಗರು ಇಲ್ಲದೇ ಇರಲಿಲ್ಲ. ಅವರು ಆ ಪ್ರವಾದಿಯ ಚರ್ಯೆಗಳನ್ನು ಬಿಗಿಯಾಗಿ ಹಿಡಿದುಕೊಂಡು ಅವರ ಆಜ್ಞೆಯನ್ನು ಪಾಲಿಸುತ್ತಿದ್ದರು
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನಗಿಂತ ಮೊದಲಿನ ಸಮುದಾಯಗಳಲ್ಲಿ ಅಲ್ಲಾಹು ಕಳುಹಿಸಿದ ಯಾವುದೇ ಪ್ರವಾದಿಗೂ ಅವರ ಸಮುದಾಯದಲ್ಲಿ ಶಿಷ್ಯರು ಮತ್ತು ಸಂಗಡಿಗರು ಇಲ್ಲದೇ ಇರಲಿಲ್ಲ. ಅವರು ಆ ಪ್ರವಾದಿಯ ಚರ್ಯೆಗಳನ್ನು ಬಿಗಿಯಾಗಿ ಹಿಡಿದುಕೊಂಡು ಅವರ ಆಜ್ಞೆಯನ್ನು ಪಾಲಿಸುತ್ತಿದ್ದರು. ನಂತರ ಅವರ ತಲೆಮಾರುಗಳು ಕಳೆದುಹೋದಂತೆ, ಜನರು ತಾವು ಮಾಡದಿರುವುದನ್ನು ಹೇಳತೊಡಗಿದರು ಮತ್ತು ತಮಗೆ ಆಜ್ಞಾಪಿಸಿರದವುಗಳನ್ನು ಮಾಡತೊಡಗಿದರು. ಆಗ ಯಾರು ತನ್ನ ಕೈಯ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಯಾರು ತನ್ನ ನಾಲಗೆಯ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಯಾರು ತನ್ನ ಹೃದಯದ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಆದರಾಚೆಗೆ, ಸಾಸಿವೆ ಕಾಳಿನಷ್ಟು ಸತ್ಯವಿಶ್ವಾಸವೂ ಇಲ್ಲ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी ئۇيغۇرچە Hausa Kurdî Kiswahili Português සිංහල Nederlands Tiếng Việt অসমীয়া Oromoo پښتو ગુજરાતી മലയാളം Română नेपाली Deutsch Fulfulde Кыргызча తెలుగు ქართული Moore Magyar Svenska Українська Македонски Lietuvių Kinyarwanda Wolofالشرح
ಪ್ರವಾದಿಯವರು ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಅವರಿಗಿಂತ ಮೊದಲಿನ ಸಮುದಾಯಗಳಲ್ಲಿ ಕಳುಹಿಸಿದ ಯಾವುದೇ ಪ್ರವಾದಿಗೂ, ಅವರ ಸಮುದಾಯದಲ್ಲಿ ಅವರ ನಂತರ ಖಲೀಫತ್ವವನ್ನು ವಹಿಸಿಕೊಳ್ಳಲು ಯೋಗ್ಯರಾದ ಆಪ್ತಶಿಷ್ಯರು, ಸಂಗಡಿಗರು, ಹೋರಾಟಗಾರರು ಮತ್ತು ಪ್ರಾಮಾಣಿಕರು ಇಲ್ಲದೇ ಇರಲಿಲ್ಲ. ಅವರು ಆ ಪ್ರವಾದಿಯ ಚರ್ಯೆಗಳನ್ನು ಬಿಗಿಯಾಗಿ ಹಿಡಿದುಕೊಂಡು ಅವರ ಆಜ್ಞೆಯನ್ನು ಪಾಲಿಸುತ್ತಿದ್ದರು. ನಂತರ, ಆ ಸಜ್ಜನ ಪೂರ್ವಿಕರ ಕಾಲದ ಬಳಿಕ, ಅಯೋಗ್ಯ ಜನರು ಬರತೊಡಗಿದರು. ಅವರು ತಾವು ಮಾಡದಿರುವುದನ್ನು ಹೇಳತೊಡಗಿದರು ಮತ್ತು ತಮಗೆ ಆಜ್ಞಾಪಿಸಿರದವುಗಳನ್ನು ಮಾಡತೊಡಗಿದರು. ಆಗ ಯಾರು ತನ್ನ ಕೈಯ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಯಾರು ತನ್ನ ನಾಲಗೆಯ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಯಾರು ತನ್ನ ಹೃದಯದ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಆದರಾಚೆಗೆ, ಸಾಸಿವೆ ಕಾಳಿನಷ್ಟು ಸತ್ಯವಿಶ್ವಾಸವೂ ಇಲ್ಲ.فوائد الحديث
ಧರ್ಮಶಾಸ್ತ್ರವನ್ನು ವಿರೋಧಿಸುವವರೊಡನೆ ಮಾತು ಮತ್ತು ಕ್ರಿಯೆಯ ಮೂಲಕ ಹೋರಾಡಲು ಪ್ರೋತ್ಸಾಹಿಸಲಾಗಿದೆ.
ಹೃದಯದಲ್ಲೂ ಕೂಡ ಕೆಡುಕನ್ನು ವಿರೋಧಿಸದಿರುವುದು ಸತ್ಯವಿಶ್ವಾಸದ ದೌರ್ಬಲ್ಯವನ್ನು ಅಥವಾ ಶೂನ್ಯತೆಯನ್ನು ಸೂಚಿಸುತ್ತದೆ.
ಪ್ರವಾದಿಗಳ ನಂತರ ಅವರ ಸಂದೇಶವನ್ನು ತಲುಪಿಸಿಕೊಡಲು ಅಲ್ಲಾಹು ಕೆಲವರನ್ನು ವ್ಯವಸ್ಥೆಗೊಳಿಸಿದ್ದಾನೆ.
ಮೋಕ್ಷವನ್ನು ಬಯಸುವವರು ಪ್ರವಾದಿಗಳ ಮಾರ್ಗವನ್ನು ಹಿಂಬಾಲಿಸಬೇಕಾದುದು ಕಡ್ಡಾಯವಾಗಿದೆ. ಏಕೆಂದರೆ, ಅವರ ಮಾರ್ಗದ ಹೊರತಾಗಿರುವ ಇತರ ಮಾರ್ಗಗಳೆಲ್ಲವೂ ವಿನಾಶ ಮತ್ತು ದುರ್ಮಾರ್ಗಗಳಾಗಿವೆ.
ಜನರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಸಂಗಡಿಗರಿಂದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ದೂರವಾಗುವಾಗಲೆಲ್ಲಾ ಅವರ ಚರ್ಯೆಗಳನ್ನು ಕೈಬಿಟ್ಟು ಸ್ವೇಚ್ಛೆಗಳನ್ನು ಹಿಂಬಾಲಿಸುತ್ತಾರೆ ಮತ್ತು ನೂತನಾಚಾರಗಳನ್ನು ಆವಿಷ್ಕರಿಸುತ್ತಾರೆ.
ಜಿಹಾದ್‌ನ ಹಂತಗಳನ್ನು ವಿವರಿಸಲಾಗಿದೆ. ಬದಲಾವಣೆ ತರುವ ಸಾಮರ್ಥ್ಯವಿರುವವರು ಕೈಯಿಂದ ಜಿಹಾದ್ ಮಾಡಬೇಕು. ಉದಾಹರಣೆಗೆ, ಅಧಿಕಾರಿಗಳು, ಆಡಳಿತಗಾರರು ಮತ್ತು ಮುಖಂಡರು. ಮಾತಿನ ಮೂಲಕ ಸತ್ಯವನ್ನು ವಿವರಿಸಿಕೊಡಬಹುದು ಮತ್ತು ಜನರನ್ನು ಅದಕ್ಕೆ ಆಮಂತ್ರಿಸಬಹುದು. ಹೃದಯದ ಮೂಲಕ ಕೆಡುಕನ್ನು ನಿರಾಕರಿಸಬಹುದು ಮತ್ತು ಅದರ ಬಗ್ಗೆ ಅನಿಷ್ಟ ಮತ್ತು ಅತೃಪ್ತಿಯನ್ನು ಸೂಚಿಸಬಹುದು.
ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ತಡೆಯುವುದು ಕಡ್ಡಾಯವಾಗಿದೆ.