إعدادات العرض
ಮುಫರ್‍ರಿದ್‌ಗಳು (ಅನನ್ಯರು) ಮುಂಚೂಣಿಯಲ್ಲಿದ್ದಾರೆ
ಮುಫರ್‍ರಿದ್‌ಗಳು (ಅನನ್ಯರು) ಮುಂಚೂಣಿಯಲ್ಲಿದ್ದಾರೆ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾದ ದಾರಿಯಲ್ಲಿ ಚಲಿಸುತ್ತಿದ್ದರು. ಅವರು ಜುಮ್ದಾನ್ ಎಂಬ ಹೆಸರಿನ ಪರ್ವತದ ಬಳಿಯಿಂದ ಸಾಗಿದಾಗ ಹೇಳಿದರು: "ಮುಂದುವರಿಯಿರಿ. ಇದು ಜುಮ್ದಾನ್. ಮುಫರ್‍ರಿದ್‌ಗಳು (ಅನನ್ಯರು) ಮುಂಚೂಣಿಯಲ್ಲಿದ್ದಾರೆ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಮುಫರ್‍ರಿದ್‌ಗಳು ಎಂದರೇನು?" ಅವರು ಉತ್ತರಿಸಿದರು: "ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವ ಪುರುಷರು ಮತ್ತು ಸ್ತ್ರೀಯರು."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी සිංහල ئۇيغۇرچە Hausa Kurdî Kiswahili Português دری অসমীয়া Tiếng Việt አማርኛ Svenska ไทย Yorùbá Кыргызча ગુજરાતી नेपाली Română മലയാളം Nederlands Oromoo తెలుగు پښتو Soomaali Kinyarwanda Malagasy Српски Moore ქართულიالشرح
ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವವರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ. ಅವರು ಯಾರೆಂದರೆ, ಅನನ್ಯರಾಗಿರುವವರು ಮತ್ತು ಸುಖ ಸಮೃದ್ಧವಾದ ಸ್ವರ್ಗಗಳಲ್ಲಿ ಅತ್ಯುನ್ನತ ಸ್ಥಾನಮಾನಗಳನ್ನು ಗಳಿಸುವುದರಲ್ಲಿ ಮುಂಚೂಣಿಯಲ್ಲಿರುವವರು. ಅವರನ್ನು ಜುಮ್ದಾನ್ ಪರ್ವತಕ್ಕೆ ಹೋಲಿಸಿದ್ದೇಕೆಂದರೆ, ಅದು ಇತರ ಪರ್ವತಗಳಿಗಿಂತ ಅನನ್ಯವಾಗಿದೆ.فوائد الحديث
ಅತಿಯಾಗಿ ದೇವಸ್ಮರಣೆ ಮಾಡುವುದು ಮತ್ತು ಅದರಲ್ಲಿ ತಲ್ಲೀನರಾಗುವುದು ಅಪೇಕ್ಷಣೀಯವಾಗಿದೆ. ಏಕೆಂದರೆ, ಪರಲೋಕದಲ್ಲಿ ಪ್ರಥಮ ಶ್ರೇಣಿ ಲಭ್ಯವಾಗುವುದು ಅತ್ಯಧಿಕ ಸತ್ಕರ್ಮಗಳಿಂದ ಮತ್ತು ಆರಾಧನೆಗಳಲ್ಲಿನ ನಿಷ್ಕಳಂಕತೆಯಿಂದ ಮಾತ್ರ.
ಕೇವಲ ನಾಲಗೆಯ ಮೂಲಕ, ಅಥವಾ ಕೇವಲ ಹೃದಯದ ಮೂಲಕ, ಅಥವಾ ನಾಲಗೆ ಮತ್ತು ಹೃದಯಗಳೆರಡರ ಮೂಲಕವೂ ಅಲ್ಲಾಹನನ್ನು ಸ್ಮರಿಸಬಹುದು. ಇದು (ಕೊನೆಯದ್ದು) ಅತ್ಯುನ್ನತ ಸ್ಥಾನಮಾನವನ್ನು ಹೊಂದಿದೆ.
ದಿನನಿತ್ಯ ಕೆಲವು ನಿರ್ದಿಷ್ಟ ಸಮಯಗಳಲ್ಲಿ ಪಠಿಸುವ ಶಾಸ್ತ್ರೋಕ್ತವಾದ ಸ್ಮರಣೆಗಳಿವೆ. ಉದಾಹರಣೆಗೆ, ಬೆಳಗ್ಗೆ ಮತ್ತು ಸಂಜೆ ಪಠಿಸುವ ಸ್ಮರಣೆಗಳು, ಕಡ್ಡಾಯ ನಮಾಝ್‌ಗಳ ನಂತರ ಪಠಿಸುವ ಸ್ಮರಣೆಗಳು ಇತ್ಯಾದಿ.
ನವವಿ ಹೇಳಿದರು: ತಿಳಿಯಿರಿ! ದೇವಸ್ಮರಣೆಯ ಶ್ರೇಷ್ಠತೆಯು ಕೇವಲ ತಸ್ಬೀಹ್, ತಹ್ಲೀಲ್, ತಹ್ಮೀದ್, ತಕ್ಬೀರ್ ಮುಂತಾದವುಗಳಿಗೆ ಸೀಮಿತವಲ್ಲ. ಬದಲಿಗೆ, ಅಲ್ಲಾಹನನ್ನು ಅನುಸರಿಸುತ್ತಾ ಕರ್ಮವೆಸಗುವವರೆಲ್ಲರೂ ಅಲ್ಲಾಹನನ್ನು ಸ್ಮರಿಸುವವರಾಗಿದ್ದಾರೆ.
ಅಲ್ಲಾಹನ ಸ್ಮರಣೆಯು ದೃಢತೆ ಸಿಗಲು ಅತಿದೊಡ್ಡ ಕಾರಣವಾಗಿದೆ. ಅಲ್ಲಾಹು ಹೇಳಿದನು: "ಓ ಸತ್ಯವಿಶ್ವಾಸಿಗಳೇ! ನೀವು ವೈರಿಗಳಿಗೆ ಮುಖಾಮುಖಿಯಾದರೆ ದೃಢವಾಗಿ ನಿಲ್ಲಿರಿ ಮತ್ತು ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸಿರಿ. ನೀವು ಯಶಸ್ವಿಯಾಗುವುದಕ್ಕಾಗಿ." [ಅಲ್-ಅನ್ಫಾಲ್:45]
ಅಲ್ಲಾಹನನ್ನು ಸ್ಮರಿಸುವವರ ಹಾಗೂ ಜುಮ್ದಾನ್ ಪರ್ವತದ ನಡುವೆ ಹೋಲಿಕೆ ಮಾಡಲು ಕಾರಣ ಅದರಲ್ಲಿರುವ ಅನನ್ಯತೆ ಮತ್ತು ಪ್ರತ್ಯೇಕತೆಯಾಗಿದೆ. ಜುಮ್ದಾನ್ ಪರ್ವತವು ಇತರ ಪರ್ವತಗಳಿಂದ ಅನನ್ಯವಾಗಿದೆ. ಅದೇ ರೀತಿ ಅಲ್ಲಾಹನನ್ನು ಸ್ಮರಿಸುವವರು ಕೂಡ. ಅನನ್ಯರು ಎಂದರೆ, ಜನರ ನಡುವೆಯಿದ್ದರೂ ಸಹ ತಮ್ಮ ಹೃದಯ ಮತ್ತು ನಾಲಗೆಯನ್ನು ಅಲ್ಲಾಹನ ಸ್ಮರಣೆಗಾಗಿ ಪ್ರತ್ಯೇಕಗೊಳಿಸುವವರು. ಅವರು ಏಕಾಂಗಿತನದಲ್ಲಿ ಆನಂದವನ್ನು ಪಡೆಯುತ್ತಾರೆ ಮತ್ತು ಜನರೊಡನೆ ಹೆಚ್ಚು ಹೆಚ್ಚಾಗಿ ಬೆರೆಯುವುದನ್ನು ದ್ವೇಷಿಸುತ್ತಾರೆ. ಭೂಮಿಯ ದೃಢತೆಗೆ ಪರ್ವತಗಳು ಕಾರಣವಾಗುವಂತೆ, ಧರ್ಮದಲ್ಲಿ ದೃಢವಾಗಿ ನಿಲ್ಲಲು ದೇವಸ್ಮರಣೆಯು ಕಾರಣವಾಗುತ್ತದೆ ಎಂಬುದು ಈ ಹೋಲಿಕೆಗೆ ಇನ್ನೊಂದು ಕಾರಣವಾಗಿರಬಹುದು. ಅಥವಾ ಈ ಹೋಲಿಕೆಯು ಇಹಲೋಕ ಮತ್ತು ಪರಲೋಕದಲ್ಲಿನ ಎಲ್ಲಾ ಒಳಿತುಗಳಲ್ಲೂ ಮುಂಚೂಣಿಯಲ್ಲಿರುವುದನ್ನು ಸೂಚಿಸುತ್ತಿರಬಹುದು. ಅದು ಹೇಗೆಂದರೆ, ಮದೀನದಿಂದ ಮಕ್ಕಾಗೆ ಪ್ರಯಾಣ ಮಾಡುವ ಒಬ್ಬ ಯಾತ್ರಿಕ ಜುಮ್ದಾನ್ ಪರ್ವತವನ್ನು ತಲುಪಿದರೆ, ಅದು ಆತ ಮಕ್ಕಾ ತಲುಪಿರುವುದರ ಸಂಕೇತವಾಗಿದೆ. ಯಾರು ಅದನ್ನು ಮೊದಲು ತಲುಪುತ್ತಾರೋ ಅವರು ಮುಂಚೂಣಿಯಲ್ಲಿದ್ದಾರೆ ಎಂದರ್ಥ. ಅದೇ ರೀತಿ ಅಲ್ಲಾಹನನ್ನು ಸ್ಮರಿಸುವವನು ಕೂಡ. ಆತ ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವ ಮೂಲಕ ಇತರರಿಗಿಂತ ಮುಂಚೂಣಿಯಲ್ಲಿದ್ದಾನೆ. ಹೆಚ್ಚು ಬಲ್ಲವನು ಅಲ್ಲಾಹು.
التصنيفات
Merits of Remembering Allah