ಯಾವ ದಾಸನ ಪಾದಗಳು ಅಲ್ಲಾಹನ ಮಾರ್ಗದಲ್ಲಿ ಧೂಳಿನಿಂದ ಮುಚ್ಚಿಹೋಗುತ್ತವೆಯೋ, ಆ ಪಾದಗಳನ್ನು ನರಕದ ಬೆಂಕಿ ಸ್ಪರ್ಶಿಸುವುದಿಲ್ಲ

ಯಾವ ದಾಸನ ಪಾದಗಳು ಅಲ್ಲಾಹನ ಮಾರ್ಗದಲ್ಲಿ ಧೂಳಿನಿಂದ ಮುಚ್ಚಿಹೋಗುತ್ತವೆಯೋ, ಆ ಪಾದಗಳನ್ನು ನರಕದ ಬೆಂಕಿ ಸ್ಪರ್ಶಿಸುವುದಿಲ್ಲ

ಅಬೂ ಅಬ್ಸ್ ಅಬ್ದುರ್‍ರಹ್ಮಾನ್ ಬಿನ್ ಜಬ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವ ದಾಸನ ಪಾದಗಳು ಅಲ್ಲಾಹನ ಮಾರ್ಗದಲ್ಲಿ ಧೂಳಿನಿಂದ ಮುಚ್ಚಿಹೋಗುತ್ತವೆಯೋ, ಆ ಪಾದಗಳನ್ನು ನರಕದ ಬೆಂಕಿ ಸ್ಪರ್ಶಿಸುವುದಿಲ್ಲ."

[صحيح] [رواه البخاري]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ನೀಡುತ್ತಿರುವ ಶುಭಸುದ್ದಿಯೇನೆಂದರೆ, ಯಾರ ಪಾದಗಳು ಅಲ್ಲಾಹನ ಮಾರ್ಗದಲ್ಲಿ ಹೋರಾಡುವಾಗ ಧೂಳಿನಿಂದ ಮುಚ್ಚಲ್ಪಡುತ್ತವೆಯೋ, ಅವರನ್ನು ನರಕದ ಬೆಂಕಿ ಸ್ಪರ್ಶಿಸುವುದಿಲ್ಲ.

فوائد الحديث

ಅಲ್ಲಾಹನ ಮಾರ್ಗದಲ್ಲಿ ಹೋರಾಡುವ ಧರ್ಮಯೋಧರಿಗೆ ನರಕದಿಂದ ಮುಕ್ತಿ ದೊರೆಯುವ ಶುಭಸುದ್ದಿಯನ್ನು ತಿಳಿಸಲಾಗಿದೆ.

ಧೂಳು ಇಡೀ ದೇಹವನ್ನು ಮುಚ್ಚಿಕೊಳ್ಳುತ್ತದೆಯಾದರೂ ಇಲ್ಲಿ ಪಾದಗಳನ್ನು ಮಾತ್ರ ಪ್ರಸ್ತಾಪಿಸಿದ್ದೇಕೆಂದರೆ, ಆ ಕಾಲದಲ್ಲಿ ಹೆಚ್ಚಿನ ಧರ್ಮಯೋಧರು ಪಾದಚಾರಿಗಳಾಗಿದ್ದರು ಮತ್ತು ಪಾದಗಳು ಯಾವಾಗಲೂ ಧೂಳಿನಿಂದ ಮುಚ್ಚಲ್ಪಡುತ್ತಿದ್ದವು.

ಇಬ್ನ್ ಹಜರ್ ಹೇಳಿದರು: "ಪಾದಕ್ಕೆ ಕೇವಲ ಧೂಳು ಸ್ಪರ್ಶಿಸುವುದರಿಂದ ನರಕವು ಅವರಿಗೆ ನಿಷಿದ್ಧವಾಗುವುದಾದರೆ, ಶ್ರಮವಹಿಸಿ, ಪ್ರಯತ್ನ ಪಟ್ಟು, ತನ್ನ ಸಾಮರ್ಥ್ಯವನ್ನೆಲ್ಲಾ ಬಳಸುವವರ ಸ್ಥಿತಿ ಹೇಗಿರಬಹುದು?"

التصنيفات

Excellence of Jihad