ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಅಲ್ಲಾಹು ಮರಣವನ್ನು…

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಅಲ್ಲಾಹು ಮರಣವನ್ನು ನೀಡುವವರೆಗೆ ಈತಿಕಾಫ್ (ಏಕಾಂತ ಆರಾಧನೆ) ಮಾಡುತ್ತಿದ್ದರು. ಅವರ ನಂತರ ಅವರ ಪತ್ನಿಯರು ಈತಿಕಾಫ್ ಕೂರುತ್ತಿದ್ದರು

ಸತ್ಯವಿಶ್ವಾಸಿಗಳ ಮಾತೆ ಮತ್ತು ಪ್ರವಾದಿಪತ್ನಿ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಅಲ್ಲಾಹು ಮರಣವನ್ನು ನೀಡುವವರೆಗೆ ಈತಿಕಾಫ್ (ಏಕಾಂತ ಆರಾಧನೆ) ಮಾಡುತ್ತಿದ್ದರು. ಅವರ ನಂತರ ಅವರ ಪತ್ನಿಯರು ಈತಿಕಾಫ್ ಕೂರುತ್ತಿದ್ದರು."

[صحيح] [متفق عليه]

الشرح

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಲೈಲತುಲ್ ಖದ್ರ್ (ನಿರ್ಣಯದ ರಾತ್ರಿ) ಅನ್ನು ಹುಡುಕುತ್ತಾ ರಮದಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಈತಿಕಾಫ್ ನಿರ್ವಹಿಸುತ್ತಿದ್ದರು. ಅವರು ತಮ್ಮ ಮರಣದವರೆಗೂ ಇದನ್ನು ಮುಂದುವರಿಸಿದ್ದರು. ಅವರ ನಂತರ ಅವರ ಪತ್ನಿಯರು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಕೂಡ ಈತಿಕಾಫ್ ನಿರ್ವಹಿಸುತ್ತಿದ್ದರು.

فوائد الحديث

ಮಸೀದಿಗಳಲ್ಲಿ ಈತಿಕಾಫ್ ನಿರ್ವಹಿಸುವುದು ಧಾರ್ಮಿಕ ನಿಯಮವಾಗಿದೆ. ಅದು ಮಹಿಳೆಯರಿಗೂ ಕೂಡ ಅನುಮತಿಸಲಾಗಿದೆ. ಆದರೆ ಅವರು ಇಸ್ಲಾಮಿಕ್ ಶಿಷ್ಟಾಚಾರಗಳನ್ನು ಪಾಲಿಸಬೇಕು ಮತ್ತು ಫಿತ್ನಗಳ ಭಯವಿರಬಾರದು.

ರಮದಾನ್ ತಿಂಗಳ ಕೊನೆಯ ಹತ್ತರಲ್ಲಿ ಈತಿಕಾಫ್ ನಿರ್ವಹಿಸುವುದು ಬಹಳ ಪ್ರಬಲವಾದ ಸುನ್ನತ್ ಆಗಿದೆ. ಏಕೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ನಿರಂತರವಾಗಿ ನಿರ್ವಹಿಸಿದ್ದರು.

ಈತಿಕಾಫ್ ಇಂದಿಗೂ ಉಳಿದುಕೊಂಡಿರುವ ಸುನ್ನತ್ ಆಗಿದೆ. ಅದು ರದ್ದಾಗಿಲ್ಲ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದ ನಂತರ ಅವರ ಪತ್ನಿಯರು ಈತಿಕಾಫ್ ನಿರ್ವಹಿಸಿದ್ದು ಇದಕ್ಕೆ ಪುರಾವೆಯಾಗಿದೆ.

التصنيفات

Seclusion for Worship in Ramadaan (I‘tikaaf)