ಒಬ್ಬ ಮುಸ್ಲಿಂ ವ್ಯಕ್ತಿಯ ರಕ್ತವು (ಅವನ ಪ್ರಾಣ ತೆಗೆಯುವುದು) ಮೂರು (ಕಾರಣಗಳಲ್ಲಿ) ಒಂದರಿಂದ ಹೊರತು ಹಲಾಲ್ ಆಗುವುದಿಲ್ಲ

ಒಬ್ಬ ಮುಸ್ಲಿಂ ವ್ಯಕ್ತಿಯ ರಕ್ತವು (ಅವನ ಪ್ರಾಣ ತೆಗೆಯುವುದು) ಮೂರು (ಕಾರಣಗಳಲ್ಲಿ) ಒಂದರಿಂದ ಹೊರತು ಹಲಾಲ್ ಆಗುವುದಿಲ್ಲ

ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಮುಸ್ಲಿಂ ವ್ಯಕ್ತಿಯ ರಕ್ತವು (ಅವನ ಪ್ರಾಣ ತೆಗೆಯುವುದು) ಮೂರು (ಕಾರಣಗಳಲ್ಲಿ) ಒಂದರಿಂದ ಹೊರತು ಹಲಾಲ್ ಆಗುವುದಿಲ್ಲ: ವಿವಾಹಿತ ವ್ಯಭಿಚಾರಿ, ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ (ಕೊಲೆಗೆ ಪ್ರತೀಕಾರ), ಮತ್ತು ತನ್ನ ಧರ್ಮವನ್ನು ತೊರೆದು ಜಮಾಅತ್ (ಮುಸ್ಲಿಂ ಸಮುದಾಯ) ದಿಂದ ಬೇರ್ಪಟ್ಟವನು".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಮುಸ್ಲಿಮನ ರಕ್ತವು (ಮುಸ್ಲಿಮನನ್ನು ಕೊಲೆ ಮಾಡುವುದು) ಹರಾಮ್ (ನಿಷಿದ್ಧ) ಆಗಿದೆ, ಅವನು ಮೂರು ವಿಷಯಗಳಲ್ಲಿ ಒಂದನ್ನು ಮಾಡಿದರೆ ಹೊರತು: ಮೊದಲನೆಯದು: ಸರಿಯಾದ ಕರಾರಿನ ಮೂಲಕ ವಿವಾಹಿತನಾಗಿದ್ದೂ ಸಹ ಯಾರು ವ್ಯಭಿಚಾರದ ಅಶ್ಲೀಲ ಕೃತ್ಯದಲ್ಲಿ ತೊಡಗುತ್ತಾನೋ, ಅವನನ್ನು ಕಲ್ಲೆಸೆದು ಕೊಲ್ಲುವುದು ಹಲಾಲ್ (ಧರ್ಮಸಮ್ಮತ) ಆಗುತ್ತದೆ. ಎರಡನೆಯದು: ಯಾರು ನಿರಪರಾಧಿ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ, ಕೊಲ್ಲಲು ಯಾವುದೇ ಹಕ್ಕಿಲ್ಲದೆ ಕೊಲ್ಲುತ್ತಾನೋ, ಅವನನ್ನು (ಪ್ರತೀಕಾರದ) ಶರತ್ತುಗಳೊಂದಿಗೆ ಕೊಲ್ಲಲಾಗುತ್ತದೆ. ಮೂರನೆಯದು: ಮುಸ್ಲಿಂ ಸಮುದಾಯದಿಂದ ಹೊರಹೋದವನು; ಒಂದೋ ಧರ್ಮಪರಿತ್ಯಾಗಿಯಾಗಿ ಇಸ್ಲಾಂ ಧರ್ಮವನ್ನೇ ಸಂಪೂರ್ಣವಾಗಿ ತ್ಯಜಿಸುವ ಮೂಲಕ ಹೊರಹೋದವನು, ಅಥವಾ ಧರ್ಮ ಪರಿತ್ಯಾಗ ಮಾಡದೆ, ಅದರ (ಧರ್ಮದ) ಕೆಲವು ಭಾಗಗಳನ್ನು ತ್ಯಜಿಸುವ ಮೂಲಕ (ಸಮುದಾಯದಿಂದ) ಬೇರ್ಪಡುವವನು, ಉದಾಹರಣೆಗೆ ದಂಗೆಕೋರರು, ದರೋಡೆಕೋರರು, ಮತ್ತು ಖವಾರಿಜ್‌ಗಳ ಪೈಕಿ ಯುದ್ಧ ಮಾಡುವವರು ಮುಂತಾದವರು.

فوائد الحديث

ಈ ಮೂರು ಕೆಲಸಗಳನ್ನು ಮಾಡುವುದು ನಿಷಿದ್ಧವೆಂದು ತಿಳಿಸಲಾಗಿದೆ. ಯಾರು ಅವುಗಳಲ್ಲಿ ಒಂದನ್ನು ಮಾಡುತ್ತಾನೋ ಅವನು ಮರಣದಂಡನೆಗೆ ಅರ್ಹನಾಗುತ್ತಾನೆ: ಅದು ಒಂದೋ 'ಕುಫ್ರ್' (ಸತ್ಯನಿಷೇಧ) ದಿಂದ ಆಗಿರುತ್ತದೆ. ಅಂದರೆ, ಇಸ್ಲಾಂನಿಂದ ಭ್ರಷ್ಟನಾದವನು, ಅಥವಾ ದಂಡನೆಯಿಂದ ಆಗಿರುತ್ತದೆ. ಅಂದರೆ, ವಿವಾಹಿತನಾಗಿದ್ದೂ ವ್ಯಭಿಚಾರ ಮಾಡುವವನು, ಮತ್ತು ಉದ್ದೇಶಪೂರ್ವಕವಾಗಿ ಕೊಲೆ ಮಾಡಿದವನು.

ಮಾನ-ಗೌರವಗಳನ್ನು ಮತ್ತು ಅವುಗಳ ಪಾವಿತ್ರ್ಯತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.

ಮುಸ್ಲಿಮನನ್ನು ಗೌರವಿಸುವುದು ಕಡ್ಡಾಯವಾಗಿದೆ, ಮತ್ತು ಅವನ ರಕ್ತವು ಸಂರಕ್ಷಿಸಲ್ಪಟ್ಟಿದೆ ಎಂದು ತಿಳಿಸಲಾಗಿದೆ.

ಮುಸ್ಲಿಂ ಸಮುದಾಯಕ್ಕೆ ಬದ್ಧರಾಗಿರಲು ಮತ್ತು ಅವರಿಂದ ಬೇರ್ಪಡದಿರಲು ಪ್ರೋತ್ಸಾಹಿಸಲಾಗಿದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮವಾದ ಬೋಧನಾ ಶೈಲಿಯನ್ನು ತಿಳಿಸಲಾಗಿದೆ. ಅದು ಹೇಗೆಂದರೆ, ಕೆಲವೊಮ್ಮೆ ಅವರು ವಿಷಯವನ್ನು ವಿಭಾಗಿಸಿ ಹೇಳುತ್ತಿದ್ದರು. ವಿಷಯವನ್ನು ವಿಭಾಗಿಸಿ ಹೇಳುವುದರಿಂದ ವಿಷಯವು ಕುಗ್ಗುತ್ತದೆ ಮತ್ತು ಸಮಗ್ರವಾಗುತ್ತದೆ. ಇದರಿಂದ ಅದನ್ನು ಕಂಠಪಾಠ ಮಾಡುವುದು ಹೆಚ್ಚು ವೇಗವಾಗಿರುತ್ತದೆ.

ಅಪರಾಧಿಗಳನ್ನು (ಅಪರಾಧದಿಂದ) ದೂರವಿಡಲು, ಮತ್ತು ಸಮಾಜವನ್ನು ಅಪರಾಧಗಳಿಂದ ರಕ್ಷಿಸಲು ಹಾಗೂ ತಡೆಗಟ್ಟಲು ಅಲ್ಲಾಹು 'ಹುದೂದ್' (ದಂಡನೆಗಳು) ಗಳನ್ನು ನಿಯಮಗೊಳಿಸಿದ್ದಾನೆ ಎಂದು ತಿಳಿಸಲಾಗಿದೆ.

ಈ 'ಹುದೂದ್' (ದಂಡನೆ) ಗಳನ್ನು ಜಾರಿಗೊಳಿಸುವುದು ಆಡಳಿತಗಾರರಿಗೆ ಮಾತ್ರ ವಿಶೇಷವಾಗಿರುವ ಅಧಿಕಾರವಾಗಿದೆ.

(ಶರೀಅತ್ ಪ್ರಕಾರ) ಮರಣದಂಡನೆಗೆ ಮೂರಕ್ಕಿಂತ ಹೆಚ್ಚು ಕಾರಣಗಳಿವೆ. ಆದರೆ ಅವು ಇಲ್ಲಿ ಉಲ್ಲೇಖಿಸಿದ ವಿಷಯಗಳಿಂದ ಹೊರತಾಗಿಲ್ಲ. ಇಬ್ನುಲ್-ಅರಬೀ ಅಲ್-ಮಾಲಿಕೀ ಹೇಳುತ್ತಾರೆ: "ಯಾವುದೇ ಕಾರಣಕ್ಕೂ ಅವು ಈ ಮೂರರಿಂದ ಹೊರತಾಗಿಲ್ಲ. ಏಕೆಂದರೆ, ಯಾರು ಮಾಟ ಮಾಡುತ್ತಾರೋ ಅಥವಾ ಅಲ್ಲಾಹನ ಪ್ರವಾದಿಯನ್ನು ನಿಂದಿಸುತ್ತಾರೋ ಅವರು ಸತ್ಯನಿಷೇಧಿಗಳಾಗುತ್ತಾರೆ. ಆದ್ದರಿಂದ ಅವರು 'ಧರ್ಮಪರಿತ್ಯಾಗಿ' ವರ್ಗದಲ್ಲಿ ಸೇರುತ್ತಾರೆ.

التصنيفات

Rulings of Prescribed Punishments