ಯಹೂದಿಗಳಿಗೆ ಅಥವಾ ಕ್ರೈಸ್ತರಿಗೆ ನೀವು ಮುಂದಾಗಿ ಸಲಾಂ ಹೇಳಬೇಡಿ. ನೀವು ರಸ್ತೆಯಲ್ಲಿ ಅವರಲ್ಲೊಬ್ಬರನ್ನು ಎದುರುಗೊಂಡರೆ, ಅವರಿಗೆ…

ಯಹೂದಿಗಳಿಗೆ ಅಥವಾ ಕ್ರೈಸ್ತರಿಗೆ ನೀವು ಮುಂದಾಗಿ ಸಲಾಂ ಹೇಳಬೇಡಿ. ನೀವು ರಸ್ತೆಯಲ್ಲಿ ಅವರಲ್ಲೊಬ್ಬರನ್ನು ಎದುರುಗೊಂಡರೆ, ಅವರಿಗೆ ಅತ್ಯಂತ ಇಕ್ಕಟ್ಟಾಗುವುದರ ಕಡೆಗೆ ಅವರನ್ನು ನಿರ್ಬಂಧಿಸಿರಿ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಹೂದಿಗಳಿಗೆ ಅಥವಾ ಕ್ರೈಸ್ತರಿಗೆ ನೀವು ಮುಂದಾಗಿ ಸಲಾಂ ಹೇಳಬೇಡಿ. ನೀವು ರಸ್ತೆಯಲ್ಲಿ ಅವರಲ್ಲೊಬ್ಬರನ್ನು ಎದುರುಗೊಂಡರೆ, ಅವರಿಗೆ ಅತ್ಯಂತ ಇಕ್ಕಟ್ಟಾಗುವುದರ ಕಡೆಗೆ ಅವರನ್ನು ನಿರ್ಬಂಧಿಸಿರಿ."

[صحيح] [رواه مسلم]

الشرح

ಯಹೂದಿಗಳು ಮತ್ತು ಕ್ರೈಸ್ತರಿಗೆ ಮುಂದಾಗಿ ಸಲಾಂ ಹೇಳುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸುತ್ತಿದ್ದಾರೆ. ಇತರ ಸತ್ಯನಿಷೇಧಿಗಳಿಗೆ ವ್ಯತಿರಿಕ್ತವಾಗಿ ಅವರು ಮುಸ್ಲಿಂ ದೇಶದಲ್ಲಿ ವಾಸಿಸುವ ಪ್ರಜೆಗಳಾಗಿದ್ದರೂ ಸಹ. ಅದೇ ರೀತಿ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ನಾವು ರಸ್ತೆಯಲ್ಲಿ ಅವರಲ್ಲೊಬ್ಬರನ್ನು ಎದುರುಗೊಂಡರೆ, ಅವರನ್ನು ದಾರಿಯ ಅತ್ಯಂತ ಇಕ್ಕಟ್ಟಾದ ಬದಿಯಿಂದ ಚಲಿಸುವಂತೆ ನಿರ್ಬಂಧಿಸಬೇಕು. ಸತ್ಯವಿಶ್ವಾಸಿ ದಾರಿಯ ಮಧ್ಯಭಾಗದಲ್ಲಿ ನಡೆಯಬೇಕಾದವನಾಗಿದ್ದಾನೆ ಮತ್ತು ಸತ್ಯನಿಷೇಧಿಯು ದಾರಿ ಬಿಟ್ಟು ಕೊಡಬೇಕಾದವನಾಗಿದ್ದಾನೆ. ಮುಸಲ್ಮಾನನು ಯಾವುದೇ ಸ್ಥಿತಿಯಲ್ಲೂ ಅಲ್ಪನಾಗಬಾರದು.

فوائد الحديث

ಯಹೂದಿಗಳು, ಕ್ರೈಸ್ತರು ಅಥವಾ ಇತರ ಯಾವುದೇ ಸತ್ಯನಿಷೇಧಿಗಳಿಗೂ ಮುಸಲ್ಮಾನರು ಮುಂದಾಗಿ ಸಲಾಂ ಹೇಳಬಾರದು.

ಆದರೆ, ಅವರೇ ಮುಂದಾಗಿ ಸಲಾಂ ಹೇಳಿದರೆ, "ವಅಲೈಕುಂ" ಎನ್ನುತ್ತಾ ಅದಕ್ಕೆ ಉತ್ತರ ನೀಡಬಹುದು.

ಅಗತ್ಯವಿಲ್ಲದಿದ್ದರೂ ಸತ್ಯನಿಷೇಧಿಯನ್ನು ರಸ್ತೆಯ ಅಂಚಿಗೆ ಉದ್ದೇಶಪೂರ್ವಕ ತಳ್ಳಿ ಅವನು ಅತ್ಯಂತ ಇಕ್ಕಟ್ಟಾದ ಸ್ಥಿತಿಯಲ್ಲಿ ನಡೆಯುವಂತೆ ಮಾಡುವ ಮೂಲಕ ಮುಸಲ್ಮಾನನು ಸತ್ಯನಿಷೇಧಿಗೆ ತೊಂದರೆ ಕೊಡಬಾರದು. ಬದಲಿಗೆ, ರಸ್ತೆಯು ಕಿರಿದಾಗಿದ್ದರೆ ಅಥವಾ ಜನರಿಂದ ತುಂಬಿದ್ದರೆ, ಅದನ್ನು ಉಪಯೋಗಿಸಲು ಹೆಚ್ಚು ಹಕ್ಕಿರುವುದು ಮುಸಲ್ಮಾನನಿಗೆ. ಸತ್ಯನಿಷೇಧಿ ದಾರಿ ಬಿಟ್ಟುಕೊಡಬೇಕಾದವನು.

ಮುಸಲ್ಮಾನರ ಘನತೆ ಮತ್ತು ಇತರರ ನಿಂದ್ಯತೆ ಪ್ರಕಟವಾಗುವಂತೆ ಮಾಡಬೇಕು. ಆದರೆ ಅದು ಯಾವುದೇ ಅನ್ಯಾಯ ಅಥವಾ ಅಸಭ್ಯ ಮಾತುಗಳ ಮೂಲಕವಾಗಿರಬಾರದು.

ಸತ್ಯನಿಷೇಧಿಗಳಿಗೆ ಇಕ್ಕಟ್ಟಾಗುವಂತೆ ವರ್ತಿಸಲು ಕಾರಣ ಅಲ್ಲಾಹನನ್ನು ಅವರು ನಿಷೇಧಿಸಿದ್ದರಿಂದಾಗಿದೆ. ಅವರು ಇದರ ಕಾರಣವನ್ನು ತಿಳಿಯಲು ಮುಂದಾದರೆ, ಇದು ಕೆಲವೊಮ್ಮೆ ಅವರು ಇಸ್ಲಾಂ ಸ್ವೀಕರಿಸಲು ಮತ್ತು ನರಕದಿಂದ ಪಾರಾಗಲು ಕಾರಣವಾಗಬಹುದು.

ಅಗತ್ಯ ಬರುವಾಗ ಒಬ್ಬ ಮುಸಲ್ಮಾನನು ಸತ್ಯನಿಷೇಧಿಯೊಡನೆ ನೀವು ಹೇಗಿದ್ದೀರಿ? ನಿಮ್ಮ ಬೆಳಗು ಹೇಗಿತ್ತು? ನಿಮ್ಮ ಸಂಜೆ ಹೇಗಿತ್ತು? ಎಂದು ಕುಶಲ ವಿಚಾರಿಸುವುದರಲ್ಲಿ ತೊಂದರೆಯಿಲ್ಲ. ಏಕೆಂದರೆ, ನಿಷೇಧಿಸಿರುವುದು ಸಲಾಂ ಹೇಳುವುದನ್ನು ಮಾತ್ರ.

ತೀಬಿ ಹೇಳಿದರು: "ಸರಿಯಾದ ಅಭಿಪ್ರಾಯವೇನೆಂದರೆ, ನೂತನವಾದಿಗೂ ಕೂಡ ಮುಂದಾಗಿ ಸಲಾಂ ಹೇಳಬಾರದು. ಆತ ಯಾರೆಂದು ತಿಳಿಯದೆ ಸಲಾಂ ಹೇಳಿ, ನಂತರ ಆತ ದಿಮ್ಮಿ ಅಥವಾ ನೂತನವಾದಿಯೆಂದು ತಿಳಿದು ಬಂದರೆ, ಅವನನ್ನು ಅಲ್ಪನಾಗಿಸಲು ಅವನೊಡನೆ, "ನಾನು ಹೇಳಿದ ಸಲಾಮನ್ನು ಹಿಂದಕ್ಕೆ ಪಡೆದಿದ್ದೇನೆ" ಎಂದು ಹೇಳಬೇಕು."

التصنيفات

Manners of Greeting and Seeking Permission