إعدادات العرض
ಓ ನನ್ನ ಪರಿಪಾಲಕನೇ! ನನ್ನ ಪಾಪಗಳನ್ನು, ಅವಿವೇಕತನವನ್ನು, ನನ್ನ ಎಲ್ಲಾ ಕೆಲಸ-ಕಾರ್ಯಗಳಲ್ಲಿರುವ ಅಪರಿಮಿತಿಯನ್ನು ಮತ್ತು ನನ್ನ ಬಗ್ಗೆ…
ಓ ನನ್ನ ಪರಿಪಾಲಕನೇ! ನನ್ನ ಪಾಪಗಳನ್ನು, ಅವಿವೇಕತನವನ್ನು, ನನ್ನ ಎಲ್ಲಾ ಕೆಲಸ-ಕಾರ್ಯಗಳಲ್ಲಿರುವ ಅಪರಿಮಿತಿಯನ್ನು ಮತ್ತು ನನ್ನ ಬಗ್ಗೆ ನೀನು ನನಗಿಂತ ಹೆಚ್ಚು ತಿಳಿದಿರುವುದೆಲ್ಲವನ್ನೂ ಕ್ಷಮಿಸು. ಓ ಅಲ್ಲಾಹ್! ನನ್ನ ತಪ್ಪುಗಳನ್ನು, ಉದ್ದೇಶಪೂರ್ವಕವಾಗಿ ಮಾಡಿದ್ದನ್ನು, ಅವಿವೇಕತನದಿಂದ ಮಾಡಿದ್ದನ್ನು, ತಮಾಷೆಗಾಗಿ ಮಾಡಿದ್ದನ್ನು ಮತ್ತು ನನ್ನಲ್ಲಿರುವ ಎಲ್ಲಾ ಪಾಪಗಳನ್ನೂ ಕ್ಷಮಿಸು. ಓ ಅಲ್ಲಾಹ್! ನಾನು ಮುಂದಕ್ಕೆ ಕಳುಹಿಸಿರುವ, ಹಿಂದೆ ಬಿಟ್ಟಿರುವ, ಬಹಿರಂಗಪಡಿಸಿರುವ ಮತ್ತು ರಹಸ್ಯವಾಗಿ ಮಾಡಿರುವ ಪಾಪಗಳನ್ನು ಕ್ಷಮಿಸು. ನೀನೇ ಮುಂದಕ್ಕೆ ತರುವವನು ಮತ್ತು ಹಿಂದಕ್ಕೆ ತಳ್ಳುವವನು. ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಪ್ರಾರ್ಥನೆಯನ್ನು ಪಠಿಸುತ್ತಿದ್ದರು: "ಓ ನನ್ನ ಪರಿಪಾಲಕನೇ! ನನ್ನ ಪಾಪಗಳನ್ನು, ಅವಿವೇಕತನವನ್ನು, ನನ್ನ ಎಲ್ಲಾ ಕೆಲಸ-ಕಾರ್ಯಗಳಲ್ಲಿರುವ ಅಪರಿಮಿತಿಯನ್ನು ಮತ್ತು ನನ್ನ ಬಗ್ಗೆ ನೀನು ನನಗಿಂತ ಹೆಚ್ಚು ತಿಳಿದಿರುವುದೆಲ್ಲವನ್ನೂ ಕ್ಷಮಿಸು. ಓ ಅಲ್ಲಾಹ್! ನನ್ನ ತಪ್ಪುಗಳನ್ನು, ಉದ್ದೇಶಪೂರ್ವಕವಾಗಿ ಮಾಡಿದ್ದನ್ನು, ಅವಿವೇಕತನದಿಂದ ಮಾಡಿದ್ದನ್ನು, ತಮಾಷೆಗಾಗಿ ಮಾಡಿದ್ದನ್ನು ಮತ್ತು ನನ್ನಲ್ಲಿರುವ ಎಲ್ಲಾ ಪಾಪಗಳನ್ನೂ ಕ್ಷಮಿಸು. ಓ ಅಲ್ಲಾಹ್! ನಾನು ಮುಂದಕ್ಕೆ ಕಳುಹಿಸಿರುವ, ಹಿಂದೆ ಬಿಟ್ಟಿರುವ, ಬಹಿರಂಗಪಡಿಸಿರುವ ಮತ್ತು ರಹಸ್ಯವಾಗಿ ಮಾಡಿರುವ ಪಾಪಗಳನ್ನು ಕ್ಷಮಿಸು. ನೀನೇ ಮುಂದಕ್ಕೆ ತರುವವನು ಮತ್ತು ಹಿಂದಕ್ಕೆ ತಳ್ಳುವವನು. ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt සිංහල ئۇيغۇرچە Hausa Kurdî Português தமிழ் Nederlands অসমীয়া Oromoo Kiswahili ગુજરાતી پښتو አማርኛ ไทย Română മലയാളം Deutsch नेपाली Кыргызча ქართული Moore Magyar తెలుగు Svenskaالشرح
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಗ್ರ ಪ್ರಾರ್ಥನೆಗಳಲ್ಲಿ ಒಂದು ಹೀಗಿತ್ತು: "ಓ ನನ್ನ ಪರಿಪಾಲಕನೇ! ನನ್ನ ಪಾಪಗಳನ್ನು ಕ್ಷಮಿಸು" ಅಂದರೆ ನಾನು ಮಾಡಿದ ಪಾಪಗಳನ್ನು, "ಅವಿವೇಕತನವನ್ನು" ಅಂದರೆ ಅಜ್ಞಾನ ನಿಮಿತ್ತ ನನ್ನಿಂದ ಸಂಭವಿಸಿದ್ದನ್ನು ಕ್ಷಮಿಸು. "ನನ್ನ ಎಲ್ಲಾ ಕೆಲಸ-ಕಾರ್ಯಗಳಲ್ಲಿರುವ ಅಪರಿಮಿತಿಯನ್ನು" ಅಂದರೆ ನನ್ನ ಕೆಲಸ-ಕಾರ್ಯಗಳಲ್ಲಿ ನಾನು ಮಾಡಿದ ಕೊರತೆಗಳನ್ನು ಮತ್ತು ಅವುಗಳಲ್ಲಿ ಹದ್ದು ಮೀರಿದ್ದನ್ನು ಕ್ಷಮಿಸು. "ನನ್ನ ಬಗ್ಗೆ ನೀನು ನನಗಿಂತ ಹೆಚ್ಚು ತಿಳಿದಿರುವುದೆಲ್ಲವನ್ನೂ" ಅಂದರೆ ಓ ಅಲ್ಲಾಹ್, ನೀನು ತಿಳಿದಿರುವ ಮತ್ತು ನಾನು ಮರೆತಿರುವ ಎಲ್ಲಾ ಪಾಪಗಳನ್ನೂ ಕ್ಷಮಿಸು. ಓ ಅಲ್ಲಾಹ್! ನನ್ನ ತಪ್ಪುಗಳನ್ನು, ಉದ್ದೇಶಪೂರ್ವಕ ಮಾಡಿದ್ದನ್ನು" ಅಂದರೆ ಪಾಪಗಳೆಂದು ತಿಳಿದಿದ್ದೂ ನನ್ನಿಂದ ಉದ್ದೇಶಪೂರ್ವಕ ಸಂಭವಿಸಿದ ಪಾಪಗಳನ್ನು ಕ್ಷಮಿಸು. "ಗಂಭೀರವಾಗಿ ಮಾಡಿದ್ದನ್ನು, ತಮಾಷೆಗಾಗಿ ಮಾಡಿದ್ದನ್ನು" ಅಂದರೆ, ತಮಾಷೆಗಾಗಿ ನನ್ನಿಂದ ಸಂಭವಿಸಿದ ಪಾಪಗಳನ್ನು ಮತ್ತು ಎರಡೂ ಸ್ಥಿತಿಗಳಲ್ಲಿ ನನ್ನಿಂದ ಸಂಭವಿಸಿದ ಪಾಪಗಳನ್ನು ಕ್ಷಮಿಸು. "ಮತ್ತು ನನ್ನಲ್ಲಿರುವ ಎಲ್ಲಾ ಪಾಪಗಳನ್ನೂ" ಅಂದರೆ ನಾನು ಮೇಲೆ ಹೇಳಿದ ಎಲ್ಲಾ ಪಾಪಗಳು ಮತ್ತು ನ್ಯೂನತೆಗಳನ್ನು ಕ್ಷಮಿಸು. ಓ ಅಲ್ಲಾಹ್! ನಾನು ಮುಂದಕ್ಕೆ ಕಳುಹಿಸಿರುವ ಪಾಪಗಳನ್ನು ಕ್ಷಮಿಸು" ಅಂದರೆ ಈಗಾಗಲೇ ಮಾಡಿರುವ ಪಾಪಗಳನ್ನು, "ಹಿಂದೆ ಬಿಟ್ಟಿರುವ" ಅಂದರೆ ಮುಂದೆ ಮಾಡಲಿರುವ ಪಾಪಗಳನ್ನು ಕ್ಷಮಿಸು. "ರಹಸ್ಯವಾಗಿ ಮಾಡಿರುವ" ಅಂದರೆ ಅಡಗಿಕೊಂಡು ಮಾಡಿರುವ ಪಾಪಗಳನ್ನು, "ಬಹಿರಂಗಪಡಿಸಿರುವ" ಅಂದರೆ ಬಹಿರಂಗವಾಗಿ ಮಾಡಿರುವ ಪಾಪಗಳನ್ನು ಕ್ಷಮಿಸು. "ನೀನೇ ಮುಂದಕ್ಕೆ ತರುವವನು ಮತ್ತು ಹಿಂದಕ್ಕೆ ತಳ್ಳುವವನು." ನಿನ್ನ ಸೃಷ್ಟಿಗಳಲ್ಲಿ ನೀನು ಇಚ್ಛಿಸುವವರನ್ನು ನೀನು ನಿನ್ನ ಕರುಣೆಯ ಕಡೆಗೆ ತರುವೆ ಮತ್ತು ನೀನು ಇಷ್ಟಪಡುವುದನ್ನು ಮಾಡುವ ಸೌಭಾಗ್ಯವನ್ನು ಕರುಣಿಸುವೆ. ನೀನು ಇಚ್ಛಿಸುವವರನ್ನು ಕೈ ಬಿಡುವ ಮೂಲಕ ಅವರನ್ನು ಇದರಿಂದ ದೂರಗೊಳಿಸುವೆ. ನೀನು ಹಿಂದಕ್ಕೆ ತಳ್ಳಿದವರನ್ನು ಮುಂದಕ್ಕೆ ತರಲು ಮತ್ತು ನೀನು ಮುಂದಕ್ಕೆ ತಂದವರನ್ನು ಹಿಂದಕ್ಕೆ ತಳ್ಳಲು ಯಾರಿಗೂ ಸಾಧ್ಯವಿಲ್ಲ. "ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು." ಅಂದರೆ, ನೀನು ಸಂಪೂರ್ಣ ಸಾಮರ್ಥ್ಯವುಳ್ಳವನು ಮತ್ತು ಪೂರ್ಣ ಇರಾದೆಯುಳ್ಳವನು. ನೀನು ಇಚ್ಛಿಸುವುದೆಲ್ಲವನ್ನೂ ಮಾಡುವವನು.فوائد الحديث
ಈ ಪ್ರಾರ್ಥನೆಯ ಶ್ರೇಷ್ಠತೆಯನ್ನು ತಿಳಿಸಲಾಗಿದೆ ಮತ್ತು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಕರಿಸಿ ಇದನ್ನು ಪ್ರಾರ್ಥಿಸಲು ಪ್ರೋತ್ಸಾಹಿಸಲಾಗಿದೆ.
ಹದ್ದು ಮೀರುವುದನ್ನು ತಡೆಯಲಾಗಿದೆ ಮತ್ತು ಹದ್ದು ಮೀರುವವರು ಶಿಕ್ಷೆಗೆ ಗುರಿಯಾಗುತ್ತಾರೆಂದು ತಿಳಿಸಲಾಗಿದೆ.
ಮನುಷ್ಯನ ಬಗ್ಗೆ ಅವನಿಗಿಂತಲೂ ಹೆಚ್ಚು ಅಲ್ಲಾಹು ತಿಳಿದಿದ್ದಾನೆ. ಆದ್ದರಿಂದ ಮನುಷ್ಯನು ತನ್ನ ಎಲ್ಲಾ ಕೆಲಸ-ಕಾರ್ಯಗಳನ್ನು ಅಲ್ಲಾಹನಿಗೆ ವಹಿಸಿಕೊಡಬೇಕು. ಏಕೆಂದರೆ, ಮನುಷ್ಯನು ಅರಿವಿಲ್ಲದೆ ತಪ್ಪು ಮಾಡುವ ಸಾಧ್ಯತೆಯಿದೆ.
ಮನುಷ್ಯನು ಗಂಭೀರವಾಗಿ ಮಾಡಿದ ತಪ್ಪುಗಳಿಗೆ ಶಿಕ್ಷೆ ಅನುಭವಿಸುವಂತೆ ತಮಾಷೆಗಾಗಿ ಮಾಡಿದ ತಪ್ಪುಗಳಿಗೂ ಶಿಕ್ಷೆ ಅನುಭವಿಸಬಹುದು. ಆದ್ದರಿಂದ ಮನುಷ್ಯನು ತಮಾಷೆಯ ವಿಷಯದಲ್ಲಿ ಜಾಗರೂಕನಾಗಿರುವುದು ಕಡ್ಡಾಯವಾಗಿದೆ.
ಇಬ್ನ್ ಹಜರ್ ಅಸ್ಕಲಾನಿ ಹೇಳಿದರು: "ಈ ಹದೀಸಿನ ಯಾವುದೇ ವರದಿಗಳಲ್ಲೂ ಈ ಪ್ರಾರ್ಥನೆಯನ್ನು ಪ್ರಾರ್ಥಿಸಬೇಕಾದ ಸ್ಥಳವು ಹೆಚ್ಚಾಗಿ ಅದರ ಕೊನೆಯಲ್ಲಿ ಸಂಭವಿಸುವುದನ್ನು ನಾನು ಕಂಡಿಲ್ಲ... ಅವರು ಇದನ್ನು ರಾತ್ರಿ ನಮಾಝ್‌ನಲ್ಲಿ ಪ್ರಾರ್ಥಿಸುತ್ತಿದ್ದರು, ಅವರು ಇದನ್ನು ನಮಾಝಿನ ಕೊನೆಯಲ್ಲಿ ಪ್ರಾರ್ಥಿಸುತ್ತಿದ್ದರೆಂದೂ ವರದಿಯಾಗಿದೆ. ಆದರೆ ಅವರು ಸಲಾಂ ಹೇಳುವುದಕ್ಕೆ ಮೊದಲು ಪ್ರಾರ್ಥಿಸುತ್ತಿದ್ದರೋ ಅಥವಾ ನಂತರವೋ ಎಂಬ ಬಗ್ಗೆ ವಿಭಿನ್ನ ವರದಿಗಳಿವೆ. ಈ ಪ್ರಾರ್ಥನೆಯು ಇದೇ ಶಬ್ದಗಳಲ್ಲಿ ವರದಿಯಾಗಿದೆ."
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕ್ಷಮೆಯಾಚನೆ ಮಾಡಲು ಅವರು ತಪ್ಪು ಮಾಡುತ್ತಿದ್ದರೇ? ಅವರು ವಿನಯಕ್ಕಾಗಿ ಮತ್ತು ಆತ್ಮನಿಗ್ರಹಕ್ಕಾಗಿ, ಅಥವಾ ಸಂಪೂರ್ಣತೆಯನ್ನು ಪಡೆಯಲು ವಿಫಲವಾದುದಕ್ಕಾಗಿ, ಅಥವಾ ಪ್ರಮುಖವಾದುದನ್ನು ತಪ್ಪೆಂದು ಮಾಡದಿರುವುದಕ್ಕಾಗಿ, ಅಥವಾ ಮರೆವಿನಿಂದ ಮಾಡಿದ ತಪ್ಪಿಗಾಗಿ ಅಥವಾ ಪ್ರವಾದಿಯಾಗುವುದಕ್ಕೆ ಮೊದಲು ಮಾಡಿದ ತಪ್ಪುಗಳಿಗಾಗಿ ಹೀಗೆ ಪ್ರಾರ್ಥಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಹೀಗೂ ಹೇಳಲಾಗುತ್ತದೆ: ಕ್ಷಮೆಯಾಚನೆಯು ಆರಾಧನೆಯಾಗಿದ್ದು ಅದನ್ನು ನಿರ್ವಹಿಸುವುದು ಕಡ್ಡಾಯವಾಗಿದೆ. ಅದು ಕ್ಷಮೆಯನ್ನು ಬೇಡುವುದಕ್ಕಾಗಿ ಅಲ್ಲ, ಬದಲಿಗೆ ಆರಾಧನೆಯಾಗಿ ನಿರ್ವಹಿಸುವುದಾಗಿದೆ. ಹೀಗೂ ಹೇಳಲಾಗುತ್ತದೆ: ಅದು ಅವರ ಸಮುದಾಯಕ್ಕೆ, ಅವರು ತಪ್ಪುಗಳ ಬಗ್ಗೆ ನಿರ್ಭಯರಾಗಿ ಕ್ಷಮೆಯಾಚನೆ ಮಾಡುವುದನ್ನು ಬಿಟ್ಟುಬಿಡದಿರುವುದಕ್ಕಾಗಿ, ಅವರಿಗೆ ಎಚ್ಚರಿಕೆ ಮತ್ತು ಶಿಕ್ಷಣ ನೀಡುವುದಕ್ಕಾಗಿದೆ.
التصنيفات
Reported Supplications