“ಸರ್ವಶಕ್ತನಾದ ಅಲ್ಲಾಹನ ದೃಷ್ಟಿಯಲ್ಲಿ ಪ್ರಾರ್ಥನೆಗಿಂತಲೂ ಹೆಚ್ಚು ಗೌರವಾರ್ಹವಾದ ಬೇರೆ ವಿಷಯವಿಲ್ಲ.”

“ಸರ್ವಶಕ್ತನಾದ ಅಲ್ಲಾಹನ ದೃಷ್ಟಿಯಲ್ಲಿ ಪ್ರಾರ್ಥನೆಗಿಂತಲೂ ಹೆಚ್ಚು ಗೌರವಾರ್ಹವಾದ ಬೇರೆ ವಿಷಯವಿಲ್ಲ.”

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸರ್ವಶಕ್ತನಾದ ಅಲ್ಲಾಹನ ದೃಷ್ಟಿಯಲ್ಲಿ ಪ್ರಾರ್ಥನೆಗಿಂತಲೂ ಹೆಚ್ಚು ಗೌರವಾರ್ಹವಾದ ಬೇರೆ ವಿಷಯವಿಲ್ಲ.”

[Hasan/Sound.] [Ibn Maajah]

الشرح

ಪ್ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಆರಾಧನೆಗಳ ಪೈಕಿ ಅಲ್ಲಾಹನ ದೃಷ್ಟಿಯಲ್ಲಿ ಪ್ರಾರ್ಥನೆಗಿಂತಲೂ ಶ್ರೇಷ್ಠವಾದ ಬೇರೆ ವಿಷಯವಿಲ್ಲ. ಏಕೆಂದರೆ, ಪ್ರಾರ್ಥಿಸುವಾಗ ಮನುಷ್ಯನು ಅಲ್ಲಾಹನ ನಿರಪೇಕ್ಷತೆಯನ್ನು ಒಪ್ಪಿಕೊಳ್ಳುತ್ತಾನೆ ಮತ್ತು ತನ್ನ ಅಸಹಾಯಕತೆಯನ್ನು ಹಾಗೂ ತಾನು ಅಲ್ಲಾಹನ ಮೇಲೆ ಅವಲಂಬಿತನಾಗಿದ್ದೇನೆಂಬುದನ್ನು ಒಪ್ಪಿಕೊಳ್ಳುತ್ತಾನೆ.

فوائد الحديث

ಈ ಹದೀಸ್ ಪ್ರಾರ್ಥನೆಯ ಶ್ರೇಷ್ಠತೆಯನ್ನು ಮತ್ತು ಅಲ್ಲಾಹನನ್ನು ಕರೆದು ಪ್ರಾರ್ಥಿಸುವವರು ಅವನ ಮಹಿಮೆಯನ್ನು ಹೊಗಳುತ್ತಾರೆ ಮತ್ತು ಅವನನ್ನು ಶ್ರೀಮಂತನೆಂದು—ಏಕೆಂದರೆ ಬಡವನಲ್ಲಿ ಯಾರೂ ಕರೆಯುವುದಿಲ್ಲ; ಅವನು ಎಲ್ಲವನ್ನೂ ಕೇಳುತ್ತಾನೆಂದು—ಏಕೆಂದರೆ ಕಿವುಡನನ್ನು ಯಾರೂ ಕರೆಯುವುದಿಲ್ಲ; ಅವನು ಉದಾರಿಯೆಂದು—ಏಕೆಂದರೆ ಜಿಪುಣನಲ್ಲಿ ಯಾರೂ ಕೇಳುವುದಿಲ್ಲ; ಅವನು ದಯಾಳುವೆಂದು—ಏಕೆಂದರೆ ಒರಟನಲ್ಲಿ ಯಾರೂ ಕೇಳುವುದಿಲ್ಲ; ಅವನು ಸಾಮರ್ಥ್ಯವುಳ್ಳವನೆಂದು—ಏಕೆಂದರೆ ಅಶಕ್ತನಲ್ಲಿ ಯಾರೂ ಕೇಳುವುದಿಲ್ಲ; ಅವನು ಹತ್ತಿರದಲ್ಲಿರುವವನೆಂದು—ಏಕೆಂದರೆ ಕೇಳದಷ್ಟು ದೂರವಿರುವವನ್ನು ಯಾರೂ ಕರೆಯುವುದಿಲ್ಲ ಹಾಗೂ ಇಂತಹ ಅನೇಕ ಉತ್ಕೃಷ್ಟ ಮತ್ತು ಸುಂದರವಾದ ಗುಣಲಕ್ಷಣಗಳನ್ನು ಅಲ್ಲಾಹು ಹೊಂದಿದ್ದಾನೆಂದು ಒಪ್ಪಿಕೊಳ್ಳುತ್ತಾರೆ.