ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವ ಸತ್ಯವಿಶ್ವಾಸಿಗಳೇ ಪರಿಪೂರ್ಣ ವಿಶ್ವಾಸವನ್ನು ಹೊಂದಿದವರು. ನಿಮ್ಮಲ್ಲಿ ಯಾರು ತಮ್ಮ…

ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವ ಸತ್ಯವಿಶ್ವಾಸಿಗಳೇ ಪರಿಪೂರ್ಣ ವಿಶ್ವಾಸವನ್ನು ಹೊಂದಿದವರು. ನಿಮ್ಮಲ್ಲಿ ಯಾರು ತಮ್ಮ ಮಹಿಳೆಯರೊಡನೆ ಉತ್ತಮವಾಗಿ ವರ್ತಿಸುತ್ತಾರೋ ಅವರೇ ನಿಮ್ಮಲ್ಲಿ ಅತ್ಯುತ್ತಮ ಜನರು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವ ಸತ್ಯವಿಶ್ವಾಸಿಗಳೇ ಪರಿಪೂರ್ಣ ವಿಶ್ವಾಸವನ್ನು ಹೊಂದಿದವರು. ನಿಮ್ಮಲ್ಲಿ ಯಾರು ತಮ್ಮ ಮಹಿಳೆಯರೊಡನೆ ಉತ್ತಮವಾಗಿ ವರ್ತಿಸುತ್ತಾರೋ ಅವರೇ ನಿಮ್ಮಲ್ಲಿ ಅತ್ಯುತ್ತಮ ಜನರು."

[حسن] [رواه أبو داود والترمذي وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರ ನಡವಳಿಕೆಯು ಅತ್ಯುತ್ತಮವಾಗಿದೆಯೋ ಅವನು ಜನರಲ್ಲೇ ಪರಿಪೂರ್ಣ ವಿಶ್ವಾಸವನ್ನು ಹೊಂದಿರುವವನಾಗಿದ್ದಾನೆ. ಅತ್ಯುತ್ತಮ ನಡವಳಿಕೆ ಎಂದರೆ ಮಂದಹಾಸ ಬೀರುವುದು, ಜನರಿಗೆ ಒಳಿತು ಮಾಡುವುದು, ಒಳ್ಳೆಯ ಮಾತುಗಳನ್ನಾಡುವುದು ಮತ್ತು ಜನರಿಗೆ ತೊಂದರೆ ಕೊಡದಿರುವುದು. ಸತ್ಯವಿಶ್ವಾಸಿಗಳಲ್ಲಿ ಶ್ರೇಷ್ಠನು ತನ್ನ ಮಹಿಳೆಯರೊಂದಿಗೆ ಅತ್ಯುತ್ತಮವಾಗಿ ವರ್ತಿಸುವವನು. ಮಹಿಳೆಯರು ಎಂದರೆ ಅವನ ಪತ್ನಿಯರು, ಹೆಣ್ಣುಮಕ್ಕಳು, ಸಹೋದರಿಯರು ಮತ್ತು ಹತ್ತಿರದ ಸಂಬಂಧಿ ಸ್ತ್ರೀಯರು, ನಿಮ್ಮ ಅತ್ಯುತ್ತಮ ವರ್ತನೆಗೆ ಇತರೆಲ್ಲ ಜನರಿಗಿಂತಲೂ ಇವರು ಅತ್ಯಂತ ಹಕ್ಕುಳ್ಳವರಾಗಿದ್ದಾರೆ.

فوائد الحديث

ಈ ಹದೀಸ್ ಉತ್ತಮ ನಡವಳಿಕೆಯ ಶ್ರೇಷ್ಠತೆಯನ್ನು ಮತ್ತು ಅವು ಸತ್ಯವಿಶ್ವಾಸದ ಭಾಗವಾಗಿದೆ ಎಂದು ಸೂಚಿಸುತ್ತದೆ.

ಕರ್ಮಗಳು ಸತ್ಯವಿಶ್ವಾಸದ ಭಾಗವಾಗಿದೆ. ಸತ್ಯವಿಶ್ವಾಸವು ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ.

ಇಸ್ಲಾಂ ಮಹಿಳೆಯರನ್ನು ಗೌರವಿಸುತ್ತದೆ ಮತ್ತು ಅವರೊಡನೆ ಉತ್ತಮವಾಗಿ ವರ್ತಿಸಲು ಪ್ರೋತ್ಸಾಹಿಸುತ್ತದೆ.

التصنيفات

Praiseworthy Morals, Marital Relations