ಕಡ್ಡಾಯ ನಮಾಝ್‌ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ…

ಕಡ್ಡಾಯ ನಮಾಝ್‌ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ ನಿರಾಶನಾಗುವುದಿಲ್ಲ. ಮೂವತ್ತಮೂರು ತಸ್ಬೀಹ್‌ಗಳು, ಮೂವತ್ತಮೂರು ತಹ್ಮೀದ್‌ಗಳು ಮತ್ತು ಮೂವತ್ತನಾಲ್ಕು ತಕ್ಬೀರ್‌ಗಳು

ಕಅಬ್ ಬಿನ್ ಉಜ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಡ್ಡಾಯ ನಮಾಝ್‌ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ ನಿರಾಶನಾಗುವುದಿಲ್ಲ. ಮೂವತ್ತಮೂರು ತಸ್ಬೀಹ್‌ಗಳು, ಮೂವತ್ತಮೂರು ತಹ್ಮೀದ್‌ಗಳು ಮತ್ತು ಮೂವತ್ತನಾಲ್ಕು ತಕ್ಬೀರ್‌ಗಳು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಸ್ಮರಣೆಗಳ ಬಗ್ಗೆ ತಿಳಿಸಿದ್ದಾರೆ. ಅವುಗಳನ್ನು ಪಠಿಸುವವನಿಗೆ ನಷ್ಟವಾಗುವುದೂ ಇಲ್ಲ ಮತ್ತು ಅವನು ನಿರಾಶನಾಗುವುದೂ ಇಲ್ಲ. ಬದಲಿಗೆ, ಅವನಿಗೆ ಈ ಪದಗಳನ್ನು ಪಠಿಸಿದ್ದಕ್ಕೆ ಪ್ರತಿಫಲವಿದೆ. ಅವುಗಳಲ್ಲಿ ಒಂದನ್ನು ಇನ್ನೊಂದರ ನಂತರ ಹೇಳಬೇಕಾಗಿದೆ. ಅವುಗಳನ್ನು ಕಡ್ಡಾಯ ನಮಾಝ್‌ಗಳ ನಂತರ ಹೇಳಬೇಕಾಗಿದೆ. ಅವು: "ಸು‌ಬ್‌ಹಾನಲ್ಲಾಹ್" (ಮೂವತ್ತ ಮೂರು ಬಾರಿ) ಇದು ಅಲ್ಲಾಹನನ್ನು ಎಲ್ಲಾ ರೀತಿಯ ನ್ಯೂನತೆಗಳಿಂದ ಪರಿಶುದ್ಧಗೊಳಿಸುವುದಾಗಿದೆ. "ಅಲ್-ಹಮ್ದುಲಿಲ್ಲಾಹ್" (ಮೂವತ್ತ ಮೂರು ಬಾರಿ) ಇದು ಅಲ್ಲಾಹನನ್ನು ಪ್ರೀತಿಸುವುದು ಮತ್ತು ಮಹಿಮೆಪಡಿಸುವುದರ ಜೊತೆಗೆ ಅವನನ್ನು ಸರ್ವಸಂಪೂರ್ಣನೆಂದು ಬಣ್ಣಿಸುವುದಾಗಿದೆ. "ಅಲ್ಲಾಹು ಅಕ್ಬರ್" (ಮೂವತ್ತ ನಾಲ್ಕು ಬಾರಿ) ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ದೊಡ್ಡವನು ಮತ್ತು ಮಹಾಮಹಿಮನು ಎಂದು ಘೋಷಿಸುವುದಾಗಿದೆ.

فوائد الحديث

ತಸ್ಬೀಹ್, ತಹ್ಮೀದ್ ಮತ್ತು ತಕ್ಬೀರ್‌ಗಳ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಅವು ಅವಶೇಷಿಸುವ ಸತ್ಕರ್ಮಗಳಾಗಿವೆ.

التصنيفات

Dhikr (Invocation) during Prayer, Benefits of Remembering Allah