ಯಾವುದೇ ಒಬ್ಬ ವ್ಯಕ್ತಿ ಒಂದು ತಪ್ಪು ಮಾಡಿ, ನಂತರ ಎದ್ದು ವುದೂ ನಿರ್ವಹಿಸಿ, ನಮಾಝ್ ಮಾಡಿ, ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸಿದರೆ,…

ಯಾವುದೇ ಒಬ್ಬ ವ್ಯಕ್ತಿ ಒಂದು ತಪ್ಪು ಮಾಡಿ, ನಂತರ ಎದ್ದು ವುದೂ ನಿರ್ವಹಿಸಿ, ನಮಾಝ್ ಮಾಡಿ, ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸಿದರೆ, ಅಲ್ಲಾಹು ಅವನಿಗೆ ಕ್ಷಮಿಸದೇ ಇರಲಾರ

ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಾನು ಎಂತಹ ವ್ಯಕ್ತಿಯಾಗಿದ್ದೇನೆಂದರೆ, ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾನು ಒಂದು ಹದೀಸನ್ನು ಕೇಳಿದಾಗಲೆಲ್ಲಾ, ಅಲ್ಲಾಹು ಅದರಿಂದ ಅವನು ಇಚ್ಛಿಸಿದ್ದನ್ನು ನನಗೆ ಪ್ರಯೋಜನವಾಗುವಂತೆ ಮಾಡುತ್ತಿದ್ದನು. ಅವರ ಸಹಚರರಲ್ಲಿ (ಸಹಾಬಿಗಳಲ್ಲಿ) ಯಾರಾದರೂ ನನಗೆ ಹದೀಸ್ ತಿಳಿಸಿದರೆ, ನಾನು ಅವರೊಡನೆ ಆಣೆ ಮಾಡಲು ಹೇಳುತ್ತಿದ್ದೆ. ಅವರು ಆಣೆ ಮಾಡಿದರೆ ನಾನು ಅವರು ಹೇಳಿದ್ದನ್ನು ನಂಬುತ್ತಿದ್ದೆ. ಒಮ್ಮೆ ಅಬೂಬಕರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನನಗೆ ಹದೀಸ್ ತಿಳಿಸಿದರು. ಅಬೂಬಕರ್ ಸತ್ಯ ಹೇಳುವವರಾಗಿದ್ದರು. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾವುದೇ ಒಬ್ಬ ವ್ಯಕ್ತಿ ಒಂದು ತಪ್ಪು ಮಾಡಿ, ನಂತರ ಎದ್ದು ವುದೂ ನಿರ್ವಹಿಸಿ, ನಮಾಝ್ ಮಾಡಿ, ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸಿದರೆ, ಅಲ್ಲಾಹು ಅವನಿಗೆ ಕ್ಷಮಿಸದೇ ಇರಲಾರ." ನಂತರ ಅವರು ಈ ವಚನವನ್ನು ಪಠಿಸಿದರು: "ಅವರು ಏನಾದರೂ ನೀಚಕಾರ್ಯ ಮಾಡಿದರೆ ಅಥವಾ ಸ್ವಯಂ ಅಕ್ರಮವೆಸಗಿದರೆ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆಯಾಚಿಸುತ್ತಾರೆ." [ಆಲು ಇಮ್ರಾನ್:135] "

[صحيح] [رواه أبو داود والترمذي والنسائي في الكبرى وابن ماجه وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾವುದೇ ಒಬ್ಬ ವ್ಯಕ್ತಿ ಒಂದು ಪಾಪವನ್ನು ಮಾಡಿ, ನಂತರ ಅತ್ಯುತ್ತಮ ರೂಪದಲ್ಲಿ ವುದೂ ನಿರ್ವಹಿಸಿ, ನಂತರ ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಎರಡು ರಕಅತ್ ನಮಾಝ್ ನಿರ್ವಹಿಸಿ, ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸಿದರೆ, ಅಲ್ಲಾಹು ಅವನನ್ನು ಖಂಡಿತ ಕ್ಷಮಿಸುತ್ತಾನೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಈ ವಚನವನ್ನು ಪಠಿಸಿದರು: "ಅವರು ಏನಾದರೂ ನೀಚಕಾರ್ಯ ಮಾಡಿದರೆ ಅಥವಾ ಸ್ವಯಂ ಅಕ್ರಮವೆಸಗಿದರೆ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆಯಾಚಿಸುತ್ತಾರೆ. ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು? ಅವರು ತಿಳಿದೂ ಸಹ (ಕೆಟ್ಟ) ಕಾರ್ಯಗಳಲ್ಲಿ ಹಟ ಹಿಡಿದು ಮುಂದುವರಿಯುವುದಿಲ್ಲ." [ಆಲು ಇಮ್ರಾನ್:135]

فوائد الحديث

ತಪ್ಪು ಮಾಡಿದ ನಂತರ ನಮಾಝ್ ಮತ್ತು ಕ್ಷಮೆಯಾಚನೆ ಮಾಡುವುದನ್ನು ಪ್ರೋತ್ಸಾಹಿಸಲಾಗಿದೆ.

ಸರ್ವಶಕ್ತನಾದ ಅಲ್ಲಾಹನ ವಿಶಾಲ ಕ್ಷಮೆಯನ್ನು ಮತ್ತು ಅವನು ಪಶ್ಚಾತ್ತಾಪ ಹಾಗೂ ಕ್ಷಮೆಯಾಚನೆಯನ್ನು ಸ್ವೀಕರಿಸುತ್ತಾನೆಂಬುದನ್ನು ತಿಳಿಸಲಾಗಿದೆ.

التصنيفات

Repentance