ನಾನು ಇಸ್ಲಾಂ ಸ್ವೀಕರಿಸಲು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಅವರು ನನಗೆ ನೀರು ಮತ್ತು…

ನಾನು ಇಸ್ಲಾಂ ಸ್ವೀಕರಿಸಲು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಅವರು ನನಗೆ ನೀರು ಮತ್ತು ಸಿದ್ರ್ ಎಲೆಗಳಿಂದ ಸ್ನಾನ ಮಾಡಲು ಆದೇಶಿಸಿದರು

ಕೈಸ್ ಬಿನ್ ಆಸಿಂ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಾನು ಇಸ್ಲಾಂ ಸ್ವೀಕರಿಸಲು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಅವರು ನನಗೆ ನೀರು ಮತ್ತು ಸಿದ್ರ್ ಎಲೆಗಳಿಂದ ಸ್ನಾನ ಮಾಡಲು ಆದೇಶಿಸಿದರು."

[صحيح] [رواه أبو داود والترمذي والنسائي]

الشرح

ಕೈಸ್ ಬಿನ್ ಆಸಿಂ ಇಸ್ಲಾಂ ಸ್ವೀಕರಿಸುವ ಉದ್ದೇಶದಿಂದ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ನೀರು ಮತ್ತು ಸಿದ್ರ್ ಮರದ ಎಲೆಗಳಿಂದ ಸ್ನಾನ ಮಾಡಲು ಆದೇಶಿಸಿದರು. ಇದೇಕೆಂದರೆ, ಅವರು ದೇಹವನ್ನು ಸ್ವಚ್ಛಗೊಳಿಸಲು ಸಿದ್ರ್ ಎಲೆಗಳನ್ನು ಬಳಸುತ್ತಿದ್ದರು ಮತ್ತು ಅದಕ್ಕೆ ಉತ್ತಮ ಪರಿಮಳವೂ ಇತ್ತು.

فوائد الحديث

ಮುಸ್ಲಿಮೇತರರು ಇಸ್ಲಾಂ ಧರ್ಮವನ್ನು ಪ್ರವೇಶಿಸುವಾಗ ಸ್ನಾನ ಮಾಡಬೇಕು.

ಇಸ್ಲಾಂ ಧರ್ಮದ ಶ್ರೇಷ್ಠತೆಯನ್ನು ಮತ್ತು ಅದು ದೇಹ ಹಾಗೂ ಆತ್ಮ ಎರಡಕ್ಕೂ ಪ್ರಾಮುಖ್ಯತೆ ನೀಡುತ್ತದೆಯೆಂದು ತಿಳಿಸಲಾಗಿದೆ.

ನೀರು ಶುದ್ಧ ವಸ್ತುಗಳೊಂದಿಗೆ ಬೆರೆತರೆ ಅದರ ಶುದ್ಧಿಯು ನಿವಾರಣೆಯಾಗುವುದಿಲ್ಲ.

ಸ್ವಚ್ಛಗೊಳಿಸಲು ಸಿದ್ರ್ ಎಲೆಗಳ ಬದಲು ಸಾಬೂನು ಮುಂತಾದ ಆಧುನಿಕ ವಸ್ತುಗಳನ್ನು ಬಳಸಬಹುದು.

التصنيفات

Causes of Obligatory Ritual Bath