ಯಾರು ಅಲ್ಲಾಹನಿಗೋಸ್ಕರ ಒಂದು ಮಸೀದಿಯನ್ನು ನಿರ್ಮಿಸುತ್ತಾರೋ ಅವರಿಗೆ ಅಲ್ಲಾಹು ಸ್ವರ್ಗದಲ್ಲಿ ಅದಕ್ಕೆ ಸಮಾನವಾದುದನ್ನು…

ಯಾರು ಅಲ್ಲಾಹನಿಗೋಸ್ಕರ ಒಂದು ಮಸೀದಿಯನ್ನು ನಿರ್ಮಿಸುತ್ತಾರೋ ಅವರಿಗೆ ಅಲ್ಲಾಹು ಸ್ವರ್ಗದಲ್ಲಿ ಅದಕ್ಕೆ ಸಮಾನವಾದುದನ್ನು ನಿರ್ಮಿಸುತ್ತಾನೆ

ಮಹ್ಮೂದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಉಸ್ಮಾನ್ ಬಿನ್ ಅಫ್ಫಾನ್ ಮಸೀದಿಯನ್ನು ಪುನರ್ ನಿರ್ಮಿಸಲು ಬಯಸಿದರು. ಆದರೆ ಜನರಿಗೆ ಅದು ಇಷ್ಟವಿರಲಿಲ್ಲ. ಮಸೀದಿ ಹೇಗಿತ್ತೋ ಹಾಗೆಯೇ ಇರುವುದು ಅವರಿಗೆ ಇಷ್ಟವಾಗಿತ್ತು. ಆಗ ಉಸ್ಮಾನ್ ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಅಲ್ಲಾಹನಿಗೋಸ್ಕರ ಒಂದು ಮಸೀದಿಯನ್ನು ನಿರ್ಮಿಸುತ್ತಾರೋ ಅವರಿಗೆ ಅಲ್ಲಾಹು ಸ್ವರ್ಗದಲ್ಲಿ ಅದಕ್ಕೆ ಸಮಾನವಾದುದನ್ನು ನಿರ್ಮಿಸುತ್ತಾನೆ."

[صحيح] [متفق عليه]

الشرح

ಉಸ್ಮಾನ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಹಿಂದಿಗಿಂತಲೂ ಉತ್ತಮವಾದ ರೀತಿಯಲ್ಲಿ ಪುನರ್ ನಿರ್ಮಿಸಲು ಬಯಸಿದರು. ಆದರೆ ಜನರಿಗೆ ಅದು ಇಷ್ಟವಿರಲಿಲ್ಲ. ಏಕೆಂದರೆ ಅದರಿಂದ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿದ್ದ ಮಸೀದಿಯ ರೂಪವು ಬದಲಾಗುವ ಸಾಧ್ಯತೆಯಿತ್ತು. ಮಸೀದಿಯು ಆಗ ಇಟ್ಟಿಗೆಗಳಿಂದ ಮತ್ತು ಅದರ ಛಾವಣಿಯು ಖರ್ಜೂರದ ಗೆಲ್ಲುಗಳಿಂದ ನಿರ್ಮಿಸಲಾಗಿತ್ತು. ಆದರೆ ಉಸ್ಮಾನ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಅದನ್ನು ಕಲ್ಲುಗಳಿಂದ ಮತ್ತು ಗಾರೆಯಿಂದ ನಿರ್ಮಿಸಲು ಬಯಸಿದ್ದರು. ಆದ್ದರಿಂದ ಅವರು ಜನರೊಂದಿಗೆ, ಪ್ರವಾದಿಯವರು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ ಎಂದು ಹೇಳಿದರು: "ಯಾರು ಯಾವುದೇ ತೋರಿಕೆ ಅಥವಾ ಪ್ರಶಂಸೆಯಿಲ್ಲದೆ ಕೇವಲ ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ಬಯಸಿ, ಅವನಿಗೋಸ್ಕರ ಒಂದು ಮಸೀದಿಯನ್ನು ನಿರ್ಮಿಸುತ್ತಾರೋ, ಅವರಿಗೆ ಅವರ ಕರ್ಮಕ್ಕೆ ತಕ್ಕ ರೀತಿಯಲ್ಲಿ ಅತಿಶ್ರೇಷ್ಠ ಪ್ರತಿಫಲವನ್ನು ಅಲ್ಲಾಹು ನೀಡುವನು. ಆ ಪ್ರತಿಫಲವೇನೆಂದರೆ ಅಲ್ಲಾಹು ಸ್ವರ್ಗದಲ್ಲಿ ಅದಕ್ಕೆ ಸಮಾನವಾದದನ್ನು ನಿರ್ಮಿಸಿ ಕೊಡುವುದು."

فوائد الحديث

ಮಸೀದಿ ನಿರ್ಮಿಸುವುದನ್ನು ಪ್ರೋತ್ಸಾಹಿಸಲಾಗಿದೆ ಮತ್ತು ಅದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ.

ಮಸೀದಿಯನ್ನು ವಿಸ್ತಾರಗೊಳಿಸುವುದು ಮತ್ತು ನವೀಕರಿಸುವುದು ಕೂಡ ಮಸೀದಿ ನಿರ್ಮಾಣದ ಶ್ರೇಷ್ಠತೆಯಲ್ಲಿ ಒಳಪಡುತ್ತದೆ.

ಎಲ್ಲಾ ಕರ್ಮಗಳಲ್ಲೂ ಉದ್ದೇಶವನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕಗೊಳಿಸುವುದರ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.

التصنيفات

The rulings of mosques