ಶುಕ್ರವಾರ ಇಮಾಮರು ಪ್ರವಚನ ನಿರ್ವಹಿಸುತ್ತಿರುವಾಗ, ನೀನು ನಿನ್ನ ಬಳಿಯಿರುವವನಿಗೆ "ಮೌನವಾಗಿರು" ಎಂದು ಹೇಳಿದರೆ ನೀನು…

ಶುಕ್ರವಾರ ಇಮಾಮರು ಪ್ರವಚನ ನಿರ್ವಹಿಸುತ್ತಿರುವಾಗ, ನೀನು ನಿನ್ನ ಬಳಿಯಿರುವವನಿಗೆ "ಮೌನವಾಗಿರು" ಎಂದು ಹೇಳಿದರೆ ನೀನು ಅನಗತ್ಯವಾದುದನ್ನು ಮಾಡಿದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಶುಕ್ರವಾರ ಇಮಾಮರು ಪ್ರವಚನ ನಿರ್ವಹಿಸುತ್ತಿರುವಾಗ, ನೀನು ನಿನ್ನ ಬಳಿಯಿರುವವನಿಗೆ "ಮೌನವಾಗಿರು" ಎಂದು ಹೇಳಿದರೆ ನೀನು ಅನಗತ್ಯವಾದುದನ್ನು ಮಾಡಿದೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಇಮಾಮರು ಪ್ರವಚನ ನೀಡುತ್ತಿರುವಾಗ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮೌನವಾಗಿ ಕೂರುವುದು ಶುಕ್ರವಾರದ ಪ್ರವಚನಕ್ಕೆ ಹಾಜರಾಗುವವರು ಪಾಲಿಸಬೇಕಾದ ಶಿಷ್ಟಾಚಾರಗಳಲ್ಲಿ ಒಂದಾಗಿದೆ. ಇನ್ನು ಇಮಾಮರು ಪ್ರವಚನ ನೀಡುತ್ತಿರುವಾಗ ಯಾರಾದರೂ ಮಾತನಾಡಿದರೆ, ಅದು "ಮೌನವಾಗಿರು" ಅಥವಾ "ಕಿವಿಗೊಟ್ಟು ಕೇಳು" ಎಂಬಂತಹ ಒಂದೆರಡು ಶಬ್ದಗಳಾದರೂ ಸಹ, ಅವರಿಗೆ ಶುಕ್ರವಾರದ ನಮಾಝಿನ ಪುಣ್ಯವು ನಷ್ಟವಾಗುತ್ತದೆ.

فوائد الحديث

ಶುಕ್ರವಾರದ ಪ್ರವಚನ ಕೇಳುತ್ತಿರುವಾಗ ಮಾತನಾಡುವುದು ನಿಷಿದ್ಧವಾಗಿದೆ. ಅದು ಕೆಡುಕನ್ನು ವಿರೋಧಿಸಲು, ಸಲಾಂಗೆ ಉತ್ತರಿಸಲು ಅಥವಾ ಸೀನಿದವನಿಗೆ ಯರ್ಹಮುಕಲ್ಲಾಹ್ ಎಂದು ಪ್ರಾರ್ಥಿಸುವುದಕ್ಕಾದರೂ ಸಹ.

ಆದರೆ ಇಮಾಮರು ಸಭಿಕರೊಂದಿಗೆ ಮತ್ತು ಸಭಿಕರು ಇಮಾಮರೊಂದಿಗೆ ಮಾತನಾಡುವುದನ್ನು ಇದರಿಂದ ಹೊರತುಪಡಿಸಲಾಗಿದೆ.

ಅತ್ಯಗತ್ಯದ ಸಂದರ್ಭಗಳಲ್ಲಿ ಎರಡು ಪ್ರವಚನಗಳ ನಡುವೆ ಮಾತನಾಡಬಹುದು.

ಪ್ರವಚನದ ಮಧ್ಯೆ ಇಮಾಮರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಸರನ್ನು ಹೇಳಿದರೆ ಮೌನವಾಗಿ ಸಲಾತ್ ಹೇಳಬೇಕು. ಅದೇ ರೀತಿ, ಪ್ರಾರ್ಥನೆಗೆ ಮೌನವಾಗಿ ಆಮೀನ್ ಹೇಳಬೇಕು.

التصنيفات

Jumu‘ah (Friday) Prayer