ಐದು ಕಾರ್ಯಗಳು ಫಿತ್ರ (ಸಹಜ ಮನೋಧರ್ಮ) ದ ಭಾಗವಾಗಿವೆ: ಸುನ್ನತಿ ಮಾಡುವುದು, ಗುಹ್ಯಭಾಗದ ರೋಮವನ್ನು ಬೋಳಿಸುವುದು, ಮೀಸೆ…

ಐದು ಕಾರ್ಯಗಳು ಫಿತ್ರ (ಸಹಜ ಮನೋಧರ್ಮ) ದ ಭಾಗವಾಗಿವೆ: ಸುನ್ನತಿ ಮಾಡುವುದು, ಗುಹ್ಯಭಾಗದ ರೋಮವನ್ನು ಬೋಳಿಸುವುದು, ಮೀಸೆ ಕಿರಿದಾಗಿಸುವುದು, ಉಗುರುಗಳನ್ನು ಕತ್ತರಿಸುವುದು ಮತ್ತು ಕಂಕುಳದ ರೋಮವನ್ನು ಕೀಳುವುದು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಐದು ಕಾರ್ಯಗಳು ಫಿತ್ರ (ಸಹಜ ಮನೋಧರ್ಮ) ದ ಭಾಗವಾಗಿವೆ: ಸುನ್ನತಿ ಮಾಡುವುದು, ಗುಹ್ಯಭಾಗದ ರೋಮವನ್ನು ಬೋಳಿಸುವುದು, ಮೀಸೆ ಕಿರಿದಾಗಿಸುವುದು, ಉಗುರುಗಳನ್ನು ಕತ್ತರಿಸುವುದು ಮತ್ತು ಕಂಕುಳದ ರೋಮವನ್ನು ಕೀಳುವುದು."

[صحيح] [متفق عليه]

الشرح

ಇಸ್ಲಾಂ ಧರ್ಮದಲ್ಲಿ ಮತ್ತು ಪ್ರವಾದಿಗಳ ಚರ್ಯೆಯಲ್ಲಿ ಸೇರಿದ ಐದು ಕಾರ್ಯಗಳನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ: ಮೊದಲನೆಯದು: ಸುನ್ನತಿ ಮಾಡುವುದು. ಅಂದರೆ ಪುರುಷ ಜನನಾಂಗದ ತುದಿಯಲ್ಲಿರುವ ಹೆಚ್ಚುವರಿ ಚರ್ಮವನ್ನು ಕತ್ತರಿಸುವುದು ಮತ್ತು ಸ್ತ್ರೀಯ ಜನನಾಂಗದ ಸಂಭೋಗ ಸ್ಥಳದಲ್ಲಿರುವ ಅಂಗದ ತುದಿಯಲ್ಲಿರುವ ಹೆಚ್ಚುವರಿ ಚರ್ಮವನ್ನು ಕತ್ತರಿಸುವುದು. ಎರಡನೆಯದು: ಗುಹ್ಯಭಾಗದ ರೋಮವನ್ನು ಬೋಳಿಸುವುದು. ಅಂದರೆ ಖಾಸಗಿ ಭಾಗಗಳ ಸುತ್ತಲಲ್ಲಿರುವ ರೋಮಗಳನ್ನು ಬೋಳಿಸುವುದು. ಮೂರನೆಯದು: ಮೀಸೆಯನ್ನು ಕಿರಿದಾಗಿಸುವುದು. ಅಂದರೆ ಪುರುಷನ ಮೇಲ್ದುದಿಯು ಗೋಚರವಾಗುವ ರೀತಿಯಲ್ಲಿ ಅದರಲ್ಲಿರುವ ರೋಮಗಳನ್ನು ಕತ್ತರಿಸುವುದು. ನಾಲ್ಕನೆಯದು: ಉಗುರುಗಳನ್ನು ಕತ್ತರಿಸುವುದು. ಐದನೆಯದು: ಕಂಕುಳದ ರೋಮವನ್ನು ಕೀಳುವುದು.

فوائد الحديث

ಅಲ್ಲಾಹು ಪ್ರೀತಿಸುವ, ಸಂಪ್ರೀತನಾಗುವ ಮತ್ತು ಆದೇಶಿಸುವ ಈ ಪ್ರವಾದಿಗಳ ಚರ್ಯೆಗಳು ಸಂಪೂರ್ಣತೆ, ಪರಿಶುದ್ಧತೆ, ಮತ್ತು ಸೌಂದರ್ಯವನ್ನು ಉತ್ತೇಜಿಸುತ್ತವೆ.

ಈ ಕಾರ್ಯಗಳನ್ನು ನಿಯಮಿತವಾಗಿ ನಿರ್ವಹಿಸಬೇಕು ಮತ್ತು ಅವುಗಳನ್ನು ನಿರ್ಲಕ್ಷಿಸಬಾರದು.

ಈ ಕಾರ್ಯಗಳಿಗೆ ಧಾರ್ಮಿಕ ಮತ್ತು ಭೌತಿಕ ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ: ರೂಪವನ್ನು ಉತ್ತಮಗೊಳಿಸುವುದು, ದೇಹವನ್ನು ಶುಚಿಯಾಗಿಡುವುದು, ಶುದ್ಧೀಕರಣದ ಬಗ್ಗೆ ಸೂಕ್ಷ್ಮತೆ ಪಾಲಿಸುವುದು, ಸತ್ಯನಿಷೇಧಿಗಳಿಗೆ ವಿರುದ್ಧವಾಗುವುದು ಮತ್ತು ಅಲ್ಲಾಹನ ಆಜ್ಞೆಗಳಿಗೆ ವಿಧೇಯತೆ ತೋರುವುದು.

ಇತರ ಹದೀಸ್‌ಗಳಲ್ಲಿ ಈ ಐದು ಕಾರ್ಯಗಳಿಗೆ ಹೊರತಾಗಿ ಇನ್ನೂ ಅನೇಕ ಕಾರ್ಯಗಳನ್ನು ಫಿತ್ರ (ಸಹಜ ಮನೋಧರ್ಮ) ದಲ್ಲಿ ಸೇರಿಸಲಾಗಿದೆ. ಉದಾಹರಣೆಗೆ, ದಾಡಿ ಬೆಳೆಸುವುದು, ಮಿಸ್ವಾಕ್ ಮಾಡುವುದು ಇತ್ಯಾದಿ.

التصنيفات

Natural Cleanliness Practices