ನೀವು ಸತ್ಯವಿಶ್ವಾಸಿಗಳಾಗುವ ತನಕ ನೀವು ಸ್ವರ್ಗವನ್ನು ಪ್ರವೇಶಿಸುವುದಿಲ್ಲ, ಮತ್ತು ನೀವು ಪರಸ್ಪರ ಪ್ರೀತಿಸುವ ತನಕ ನೀವು…

ನೀವು ಸತ್ಯವಿಶ್ವಾಸಿಗಳಾಗುವ ತನಕ ನೀವು ಸ್ವರ್ಗವನ್ನು ಪ್ರವೇಶಿಸುವುದಿಲ್ಲ, ಮತ್ತು ನೀವು ಪರಸ್ಪರ ಪ್ರೀತಿಸುವ ತನಕ ನೀವು ಸತ್ಯವಿಶ್ವಾಸಿಗಳಾಗುವುದಿಲ್ಲ. ನೀವು ಪರಸ್ಪರ ಪ್ರೀತಿಸುವಂತೆ ಮಾಡುವ ಒಂದು ವಿಷಯವನ್ನು ನಾನು ನಿಮಗೆ ತಿಳಿಸಲೇ? ನಿಮ್ಮ ಮಧ್ಯೆ ಸಲಾಮ್ ಹೇಳುವುದನ್ನು ವ್ಯಾಪಕಗೊಳಿಸಿ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಸತ್ಯವಿಶ್ವಾಸಿಗಳಾಗುವ ತನಕ ನೀವು ಸ್ವರ್ಗವನ್ನು ಪ್ರವೇಶಿಸುವುದಿಲ್ಲ, ಮತ್ತು ನೀವು ಪರಸ್ಪರ ಪ್ರೀತಿಸುವ ತನಕ ನೀವು ಸತ್ಯವಿಶ್ವಾಸಿಗಳಾಗುವುದಿಲ್ಲ. ನೀವು ಪರಸ್ಪರ ಪ್ರೀತಿಸುವಂತೆ ಮಾಡುವ ಒಂದು ವಿಷಯವನ್ನು ನಾನು ನಿಮಗೆ ತಿಳಿಸಲೇ? ನಿಮ್ಮ ಮಧ್ಯೆ ಸಲಾಮ್ ಹೇಳುವುದನ್ನು ವ್ಯಾಪಕಗೊಳಿಸಿ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸತ್ಯವಿಶ್ವಾಸಿಗಳ ಹೊರತು ಬೇರಾರೂ ಸ್ವರ್ಗವನ್ನು ಪ್ರವೇಶಿಸುವುದಿಲ್ಲ, ಮುಸಲ್ಮಾನರು ಪರಸ್ಪರ ಪ್ರೀತಿಸುವ ತನಕ ಅವರ ವಿಶ್ವಾಸವು ಪೂರ್ಣವಾಗುವುದಿಲ್ಲ ಮತ್ತು ಮುಸ್ಲಿಂ ಸಮಾಜದ ಸ್ಥಿತಿಯು ಸುಧಾರಿಸುವುದಿಲ್ಲ. ನಂತರ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಯು ವ್ಯಾಪಕವಾಗುವ ಒಂದು ಶ್ರೇಷ್ಠ ಸಂಗತಿಯನ್ನು ಸೂಚಿಸಿದರು. ಅದೇನೆಂದರೆ, ಮುಸಲ್ಮಾನರ ನಡುವೆ ಸಲಾಂ ಹೇಳುವುದನ್ನು ವ್ಯಾಪಕಗೊಳಿಸುವುದು. ಸಲಾಂ ಅಲ್ಲಾಹು ಅವನ ದಾಸರಿಗೆ ನಿಶ್ಚಯಿಸಿದ ಶುಭಾಶಯವಾಗಿದೆ.

فوائد الحديث

ಸ್ವರ್ಗ ಪ್ರವೇಶವು ಸತ್ಯವಿಶ್ವಾಸದಿಂದಲ್ಲದೆ ಉಂಟಾಗುವುದಿಲ್ಲ.

ಮುಸಲ್ಮಾನನು ತನಗಾಗಿ ಪ್ರೀತಿಸುವುದನ್ನು ತನ್ನ ಸಹೋದರನಿಗಾಗಿಯೂ ಪ್ರೀತಿಸುವುದು ಸತ್ಯವಿಶ್ವಾಸದ ಪೂರ್ಣತೆಯಾಗಿದೆ.

ಮುಸಲ್ಮಾನರ ನಡುವೆ ಸಲಾಂ ಹೇಳುವುದನ್ನು ವ್ಯಾಪಕಗೊಳಿಸುವುದು ಅಪೇಕ್ಷಣೀಯವಾಗಿದೆ. ಏಕೆಂದರೆ, ಅದರಿಂದ ಜನರ ನಡುವೆ ಪ್ರೀತಿ-ವಿಶ್ವಾಸವು ಹರಡುತ್ತದೆ.

ಮುಸಲ್ಮಾನರಿಗೆ ಮಾತ್ರ ಸಲಾಂ ಹೇಳಬೇಕು. ಏಕೆಂದರೆ, ಪ್ರವಾದಿ(ಸ) ರವರು "ನಿಮ್ಮ ಮಧ್ಯೆ" ಎಂದು ಹೇಳಿದ್ದಾರೆ.

ಸಂಬಂಧ ಕಡಿಯುವುದು, ದೂರವಾಗುವುದು, ಅಸೂಯೆಪಡುವುದು ಮುಂತಾದವುಗಳು ಸಲಾಂ ಹೇಳುವುದರಿಂದ ನಿವಾರಣೆಯಾಗುತ್ತವೆ.

ಮುಸಲ್ಮಾನರ ನಡುವೆ ಪ್ರೀತಿಯ ಮಹತ್ವವನ್ನು ಮತ್ತು ಅದು ಸತ್ಯವಿಶ್ವಾಸದ ಸಂಪೂರ್ಣತೆಯಲ್ಲಿ ಸೇರಿದ್ದೆಂದು ತಿಳಿಸಲಾಗಿದೆ.

ಸಲಾಂ ಹೇಳಬೇಕಾದ ಪೂರ್ಣ ರೂಪ "ಅಸ್ಸಲಾಂ ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು" ಎಂದು ಬೇರೆ ಹದೀಸಿನಲ್ಲಿ ಬಂದಿದೆ. "ಅಸ್ಸಲಾಂ ಅಲೈಕುಂ" ಎಂದಷ್ಟೇ ಹೇಳಿದರೂ ಸಾಕು.

التصنيفات

Merits of Organs' Acts