ಅವನನ್ನು ಕೊಲ್ಲಬಾರದು. ನೀವೇನಾದರೂ ಅವನನ್ನು ಕೊಂದರೆ, ನೀವು ಅವನನ್ನು ಕೊಲ್ಲುವುದಕ್ಕೆ ಮೊದಲಿನ ನಿಮ್ಮ ಸ್ಥಾನದಲ್ಲಿ ಅವನು…

ಅವನನ್ನು ಕೊಲ್ಲಬಾರದು. ನೀವೇನಾದರೂ ಅವನನ್ನು ಕೊಂದರೆ, ನೀವು ಅವನನ್ನು ಕೊಲ್ಲುವುದಕ್ಕೆ ಮೊದಲಿನ ನಿಮ್ಮ ಸ್ಥಾನದಲ್ಲಿ ಅವನು ಇರುತ್ತಾನೆ ಮತ್ತು ಅವನು ಆ ಮಾತನ್ನು ಹೇಳುವುದಕ್ಕೆ ಮೊದಲಿನ ಅವನ ಸ್ಥಾನದಲ್ಲಿ ನೀವು ಇರುತ್ತೀರಿ

ಮಿಕ್ದಾದ್ ಬಿನ್ ಅಮ್ರ್ ಕಿಂದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಾನು ಸತ್ಯನಿಷೇಧಿಯನ್ನು ಎದುರುಗೊಂಡು ಅವನೊಂದಿಗೆ ಹೋರಾಡುವಾಗ ಅವನು ನನ್ನ ಒಂದು ಕೈಯನ್ನು ಖಡ್ಗದಿಂದ ಕಡಿದು ತುಂಡು ಮಾಡಿ, ನಂತರ ಒಂದು ಮರದಲ್ಲಿ ಆಶ್ರಯ ಪಡೆದು, "ನಾನು ಅಲ್ಲಾಹನಿಗೆ ಶರಣಾಗಿದ್ದೇನೆ" ಎಂದು ಹೇಳಿದರೆ ಅವನ ಬಗ್ಗೆ ನೀವೇನು ಹೇಳುತ್ತೀರಿ? ಓ ಅಲ್ಲಾಹನ ಸಂದೇಶವಾಹಕರೇ! ಅವನು ಆ ಮಾತನ್ನು ಹೇಳಿದ ಬಳಿಕ ನಾನು ಅವನನ್ನು ಕೊಲ್ಲಬಹುದೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅವನನ್ನು ಕೊಲ್ಲಬಾರದು." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅವನು ನನ್ನ ಒಂದು ಕೈಯನ್ನು ತುಂಡು ಮಾಡಿದ್ದಾನೆ. ತುಂಡು ಮಾಡಿದ ನಂತರ ಅವನು ಆ ಮಾತನ್ನು ಹೇಳಿದ್ದಾನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅವನನ್ನು ಕೊಲ್ಲಬಾರದು. ನೀವೇನಾದರೂ ಅವನನ್ನು ಕೊಂದರೆ, ನೀವು ಅವನನ್ನು ಕೊಲ್ಲುವುದಕ್ಕೆ ಮೊದಲಿನ ನಿಮ್ಮ ಸ್ಥಾನದಲ್ಲಿ ಅವನು ಇರುತ್ತಾನೆ ಮತ್ತು ಅವನು ಆ ಮಾತನ್ನು ಹೇಳುವುದಕ್ಕೆ ಮೊದಲಿನ ಅವನ ಸ್ಥಾನದಲ್ಲಿ ನೀವು ಇರುತ್ತೀರಿ."

[صحيح] [متفق عليه]

الشرح

ಮಿಕ್ದಾದ್ ಬಿನ್ ಅಸ್ವದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳುವುದೇನೆಂದರೆ, ಯುದ್ಧದಲ್ಲಿ ಅವರು ಒಬ್ಬ ಸತ್ಯವಿಷೇಧಿಯೊಂದಿಗೆ ಮುಖಾಮುಖಿಯಾಗಿ, ಇಬ್ಬರೂ ಖಡ್ಗದಿಂದ ಹೋರಾಡಿ, ನಂತರ ಆ ಸತ್ಯನಿಷೇಧಿ ತನ್ನ ಖಡ್ಗದಿಂದ ಅವರ ಕೈಯನ್ನು ತುಂಡು ಮಾಡುತ್ತಾನೆ. ನಂತರ ಆ ಸತ್ಯನಿಷೇಧಿ ಅಲ್ಲಿಂದ ಓಡಿ ಒಂದು ಮರದಲ್ಲಿ ಆಶ್ರಯ ಪಡೆದು "ಲಾಇಲಾಹ ಇಲ್ಲಲ್ಲಾಹ್" ಎಂದು ಹೇಳಿದರೆ, ಅವನು ನನ್ನ ಕೈಯನ್ನು ತುಂಡು ಮಾಡಿದ ಬಳಿಕವೂ ಅವನನ್ನು ಕೊಲ್ಲುವುದು ನನಗೆ ಸಮ್ಮತಾರ್ಹವೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನನ್ನು ಕೊಲ್ಲಬಾರದು." ಆಗ ಅವರು ಪುನಃ ಕೇಳುತ್ತಾರೆ: "ಓ ಅಲ್ಲಾಹನ ಸಂದೇಶವಾಹಕರೇ! ، ಅವನು ನನ್ನ ಒಂದು ಕೈಯನ್ನು ತುಂಡು ಮಾಡಿದ್ದಾನೆ. ಹೀಗಿದ್ದರೂ ನಾನು ಅವನನ್ನು ಕೊಲ್ಲಬಾರದೇ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನನ್ನು ಕೊಲ್ಲಬಾರದು. ಏಕೆಂದರೆ, ಅವನ ರಕ್ತವು ಪವಿತ್ರವಾಗಿ ಬಿಟ್ಟಿದೆ. ಅವನು ಇಸ್ಲಾಂ ಸ್ವೀಕರಿಸಿದ ಬಳಿಕ ನೀವು ಅವನನ್ನು ಕೊಲ್ಲಬಾರದು. ಏಕೆಂದರೆ, ಅವನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ನಿಮ್ಮಂತೆ ಅವನ ರಕ್ತ ಕೂಡ ಪವಿತ್ರವಾಗಿದೆ. ಆದರೆ, ನೀವು ಅವನನ್ನು ಕೊಂದರೆ, ಅವನನ್ನು ಕೊಂದ ಕಾರಣ ಕಾನೂನಿಗೆ ಅನುಗುಣವಾಗಿ ಅಥವಾ ಪ್ರತೀಕಾರದ ನಿಯಮದ ಪ್ರಕಾರ ನೀವು ಕೊಲೆಗೆ ಅರ್ಹರಾಗುತ್ತೀರಿ.

فوائد الحديث

ಒಬ್ಬ ವ್ಯಕ್ತಿಯಿಂದ ಅವನು ಇಸ್ಲಾಂ ಸ್ವೀಕರಿಸಿದ್ದಾನೆಂದು ಸೂಚಿಸುವ ಮಾತು ಅಥವಾ ಕರ್ಮವು ಹೊರಹೊಮ್ಮಿದರೆ ಅವನನ್ನು ಕೊಲ್ಲುವುದು ನಿಷಿದ್ಧವಾಗಿದೆ.

ಯುದ್ಧದ ಮಧ್ಯೆ ಸತ್ಯನಿಷೇಧಿಗಳಲ್ಲಿ ಯಾರಾದರೂ ಇಸ್ಲಾಂ ಸ್ವೀಕರಿಸಿದರೆ, ಅವರ ರಕ್ತವು ಪವಿತ್ರವಾಗುತ್ತದೆ. ಅವರು ಸತ್ಯನಿಷೇಧಿಯೆಂದು ಸ್ಪಷ್ಟವಾಗುವ ತನಕ ಅವರ ಮೇಲೆ ಕೈಯೆತ್ತಬಾರದು.

ಮುಸಲ್ಮಾನನ ಇಚ್ಛೆಯು ಧರ್ಮ ನಿಯಮವನ್ನು ಅನುಸರಿಸಬೇಕೇ ಹೊರತು ಪಕ್ಷಪಾತ ಅಥವಾ ಸೇಡನ್ನಲ್ಲ.

ಇಬ್ನ್ ಹಜರ್ ಹೇಳಿದರು: "ಈ ಘಟನೆಯು ಸಂಭವಿಸಿಲ್ಲ ಎಂಬ ಪ್ರಬಲ ಅಭಿಪ್ರಾಯದ ಆಧಾರದಲ್ಲಿ, ಒಂದು ದುರಂತವು ಸಂಭವಿಸುವುದಕ್ಕೆ ಮೊದಲು ಅದರ ಬಗೆಗಿನ ಧಾರ್ಮಿಕ ನಿಯಮವನ್ನು ಕೇಳಿ ತಿಳಿಯಲು ಅನುಮತಿಯಿದೆ. ಇಂತಹ ಪ್ರಶ್ನೆಗಳನ್ನು ಕೇಳುವುದು ಪ್ರೋತ್ಸಾಹನೀಯವಲ್ಲ ಎಂಬ ಕೆಲವು ಪೂರ್ವಿಕರು ಹೇಳಿರುವುದು ಅಪರೂಪವಾಗಿ ಸಂಭವಿಸಬಹುದಾದ ಘಟನೆಗಳ ಬಗ್ಗೆಯಾಗಿದೆ. ಆದರೆ ಸಾಮಾನ್ಯವಾಗಿ ಸಂಭವಿಸಬಹುದಾದ ಘಟನೆಗಳ ಬಗ್ಗೆ ಪ್ರಶ್ನಿಸಿ ಅದರ ನಿಯಮವನ್ನು ತಿಳಿದುಕೊಳ್ಳುವುದಕ್ಕೆ ಧರ್ಮದಲ್ಲಿ ಅನುಮತಿಯಿದೆ.

التصنيفات

ಇಸ್ಲಾಮ್