ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುಗಂಧ ದ್ರವ್ಯದ ಉಡುಗೊರೆಯನ್ನು ನಿರಾಕರಿಸುತ್ತಿರಲಿಲ್ಲ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುಗಂಧ ದ್ರವ್ಯದ ಉಡುಗೊರೆಯನ್ನು ನಿರಾಕರಿಸುತ್ತಿರಲಿಲ್ಲ

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುಗಂಧ ದ್ರವ್ಯದ ಉಡುಗೊರೆಯನ್ನು ನಿರಾಕರಿಸುತ್ತಿರಲಿಲ್ಲ."

[Sahih/Authentic.] [Al-Bukhari]

الشرح

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ನಡವಳಿಕೆ ಏನೆಂದರೆ, ಅವರು ಸುಗಂಧ ದ್ರವ್ಯದ ಉಡುಗೊರೆಯನ್ನು ನಿರಾಕರಿಸುತ್ತಿರಲಿಲ್ಲ. ಅವರು ಅದನ್ನು ಸ್ವೀಕರಿಸುತ್ತಿದ್ದರು. ಏಕೆಂದರೆ ಅದು ಹಗುರವಾಗಿದ್ದು ಸುಲಭವಾಗಿ ಒಯ್ಯಬಹುದಾಗಿದೆ ಮತ್ತು ಅದು ಉತ್ತಮ ಪರಿಮಳವನ್ನು ಹೊಂದಿರುತ್ತದೆ.

فوائد الحديث

ಸುಗಂಧದ್ರವ್ಯದ ಉಡುಗೊರೆಯನ್ನು ಸ್ವೀಕರಿಸುವುದು ಅಪೇಕ್ಷಣೀಯ ಎಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದನ್ನು ಒಯ್ಯಲು ಕಷ್ಟವಿಲ್ಲ ಮತ್ತು ಅದನ್ನು ನೀಡುವವರು ನೀಡಿದ್ದನ್ನು ಎತ್ತಿ ಹೇಳುವುದಿಲ್ಲ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುಗಂಧದ್ರವ್ಯದ ಉಡುಗೊರೆಯನ್ನು ನಿರಾಕರಿಸದೇ ಇರುವುದು ಮತ್ತು ಅವರಿಗೆ ನೀಡಲಾಗುವ ಉಡುಗೊರೆಗಳನ್ನು ಅವರು ಸ್ವೀಕರಿಸುವುದು ಅವರ ಪರಿಪೂರ್ಣ ಮತ್ತು ಉತ್ತಮ ನಡವಳಿಕೆಯನ್ನು ಸೂಚಿಸುತ್ತದೆ.

ಈ ಹದೀಸ್ ಸುಗಂಧ ಹಚ್ಚುವುದನ್ನು ಪ್ರೋತ್ಸಾಹಿಸುತ್ತದೆ.