ಪೋಷಕನಿಲ್ಲದಿದ್ದರೆ ವಿವಾಹವಿಲ್ಲ

ಪೋಷಕನಿಲ್ಲದಿದ್ದರೆ ವಿವಾಹವಿಲ್ಲ

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪೋಷಕನಿಲ್ಲದಿದ್ದರೆ ವಿವಾಹವಿಲ್ಲ."

[صحيح] [رواه أبو داود والترمذي وابن ماجه وأحمد]

الشرح

ವಿವಾಹ ಕರಾರನ್ನು ನಡೆಸಿಕೊಡುವ ಪೋಷಕರ ಅನುಪಸ್ಥಿತಿಯಲ್ಲಿ ಒಬ್ಬ ಮಹಿಳೆ ವಿವಾಹವಾದರೆ ಆ ವಿವಾಹ ಸಿಂಧುವಲ್ಲವೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ.

فوائد الحديث

ವಿವಾಹ ಸಿಂಧುವಾಗಲು ಪೋಷಕರ ಉಪಸ್ಥಿತಿಯು ಷರತ್ತಾಗಿದೆ. ಪೋಷಕನ ಅನುಪಸ್ಥಿತಿಯಲ್ಲಿ ವಿವಾಹ ನಡೆದರೆ, ಅಥವಾ ಮಹಿಳೆಯೊಬ್ಬಳು ಸ್ವಯಂ ವಿವಾಹವಾದರೆ, ಆ ವಿವಾಹ ಸಿಂಧುವಲ್ಲ.

ಪೋಷಕರು ಎಂದರೆ ಮಹಿಳೆಗೆ ಅತೀ ಹತ್ತಿರದ ಪುರುಷ ಸಂಬಂಧಿ. ಹತ್ತಿರದ ಸಂಬಂಧಿಗಳಿರುವಾಗ ದೂರದ ಸಂಬಂಧಿಗಳು ಪೋಷಕರ ಸ್ಥಾನ ವಹಿಸಿ ವಿವಾಹ ನಡೆಸಿಕೊಡಬಾರದು.

ಪೋಷಕರಿಗೆ ಸಂಬಂಧಿಸಿದ ಷರತ್ತುಗಳು: ಧಾರ್ಮಿಕ ನಿಯಮಗಳನ್ನು ಪಾಲಿಸಲು ಬದ್ಧನಾಗಿರುವುದು, ಪುರುಷನಾಗಿರುವುದು, ವಿವಾಹದ ಸಾಧಕ-ಬಾಧಕಗಳ ಬಗ್ಗೆ ತಿಳುವಳಿಕೆಯಿರುವುದು, ವಧು ಮತ್ತು ಪೋಷಕರು ಒಂದೇ ಧರ್ಮದವರಾಗಿರುವುದು. ಯಾರಿಗೆ ಈ ಗುಣಗಳ ಕೊರತೆಯಿದೆಯೋ ಅವರು ವಿವಾಹ ನಡೆಸಿಕೊಡುವ ಪೋಷಕ ಸ್ಥಾನ ವಹಿಸಲು ಅರ್ಹರಲ್ಲ.

التصنيفات

Marriage