ಯಾವುದೇ ಇಬ್ಬರು ಮುಸ್ಲಿಮರು ಭೇಟಿಯಾಗಿ ಹಸ್ತಲಾಘವ ಮಾಡಿದರೆ, ಅವರು ಬೇರ್ಪಡುವ ಮೊದಲು ಅವರ ಪಾಪಗಳು ಕ್ಷಮಿಸಲ್ಪಡುತ್ತವೆ

ಯಾವುದೇ ಇಬ್ಬರು ಮುಸ್ಲಿಮರು ಭೇಟಿಯಾಗಿ ಹಸ್ತಲಾಘವ ಮಾಡಿದರೆ, ಅವರು ಬೇರ್ಪಡುವ ಮೊದಲು ಅವರ ಪಾಪಗಳು ಕ್ಷಮಿಸಲ್ಪಡುತ್ತವೆ

ಬರಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವುದೇ ಇಬ್ಬರು ಮುಸ್ಲಿಮರು ಭೇಟಿಯಾಗಿ ಹಸ್ತಲಾಘವ ಮಾಡಿದರೆ, ಅವರು ಬೇರ್ಪಡುವ ಮೊದಲು ಅವರ ಪಾಪಗಳು ಕ್ಷಮಿಸಲ್ಪಡುತ್ತವೆ."

[صحيح بمجموع طرقه] [رواه أبو داود والترمذي وابن ماجه وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾವುದೇ ಇಬ್ಬರು ಮುಸ್ಲಿಮರು ದಾರಿಯಲ್ಲಿ ಅಥವಾ ಅಂತಹುದೇ ಸ್ಥಳದಲ್ಲಿ ಭೇಟಿಯಾಗಿ ಒಬ್ಬರಿಗೊಬ್ಬರು ಹಸ್ತಲಾಘವ ಮಾಡಿದರೆ, ಅವರ ದೇಹಗಳು ಪರಸ್ಪರ ಬೇರ್ಪಡುವ ಮೊದಲು ಅಥವಾ ಅವರು ಹಸ್ತಲಾಘವವನ್ನು ಮುಗಿಸುವ ಮೊದಲು ಅವರ ಪಾಪಗಳು ಕ್ಷಮಿಸಲ್ಪಡುತ್ತವೆ.

فوائد الحديث

ಭೇಟಿಯಾದಾಗ ಹಸ್ತಲಾಘವ ಮಾಡುವುದು ಅಪೇಕ್ಷಣೀಯವಾಗಿದೆ ಮತ್ತು ಅದನ್ನು ಪ್ರೋತ್ಸಾಹಿಸಲಾಗಿದೆ.

ಮನಾವಿ ಹೇಳುತ್ತಾರೆ: "ಬಲಗೈಯನ್ನು ಬಲಗೈಯಲ್ಲಿ ಇರಿಸಿದಾಗ ಮಾತ್ರ ಸುನ್ನತ್ ನೆರವೇರುತ್ತದೆ. (ಹಾಗೆ ಇರಿಸಲು ಸಾಧ್ಯವಾಗದಂತಹ) ಕಾರಣಗಳಿರುವ ಹೊರತು."

ಸಲಾಮ್ ಹೇಳುವುದನ್ನು ಹಬ್ಬಿಸಲು ಪ್ರೋತ್ಸಾಹಿಸಲಾಗಿದೆ ಮತ್ತು ಒಬ್ಬ ಮುಸ್ಲಿಂ ತನ್ನ ಸಹೋದರ ಮುಸ್ಲಿಮನೊಂದಿಗೆ ಹಸ್ತಲಾಘವ ಮಾಡುವುದರ ಮಹಾ ಪ್ರತಿಫಲವನ್ನು ವಿವರಿಸಲಾಗಿದೆ.

ನಿಷಿದ್ಧ ಹಸ್ತಲಾಘವಗಳು ಈ ಹದೀಸ್‌ನಿಂದ ಹೊರತಾಗಿವೆ. ಉದಾಹರಣೆಗೆ, ಮಹಿಳೆ ಪರಪುರುಷನೊಂದಿಗೆ ಹಸ್ತಲಾಘವ ಮಾಡುವುದು.

التصنيفات

Merits of Good Deeds, Manners of Greeting and Seeking Permission