ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಮರ್ಯಮರ ಪುತ್ರ (ಈಸಾ) ಶೀಘ್ರದಲ್ಲೇ ನಿಮ್ಮ ನಡುವೆ ನ್ಯಾಯಯುತ ಆಡಳಿತಗಾರನಾಗಿ ಇಳಿದು…

ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಮರ್ಯಮರ ಪುತ್ರ (ಈಸಾ) ಶೀಘ್ರದಲ್ಲೇ ನಿಮ್ಮ ನಡುವೆ ನ್ಯಾಯಯುತ ಆಡಳಿತಗಾರನಾಗಿ ಇಳಿದು ಬರುವರು. ಅವರು ಶಿಲುಬೆಯನ್ನು ಒಡೆಯುವರು, ಹಂದಿಯನ್ನು ಕೊಲ್ಲುವರು ಮತ್ತು ಜಿಝ್ಯವನ್ನು (ಮುಸ್ಲಿಮೇತರರ ಮೇಲಿನ ತೆರಿಗೆ) ರದ್ದುಗೊಳಿಸುವರು. ಆಗ ಸಂಪತ್ತು ಎಷ್ಟರ ಮಟ್ಟಿಗೆ ಹೇರಳವಾಗುತ್ತದೆಯೆಂದರೆ ಅದನ್ನು ಸ್ವೀಕರಿಸಲು ಯಾರೂ ಮುಂದೆ ಬರುವುದಿಲ್ಲ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಮರ್ಯಮರ ಪುತ್ರ (ಈಸಾ) ಶೀಘ್ರದಲ್ಲೇ ನಿಮ್ಮ ನಡುವೆ ನ್ಯಾಯಯುತ ಆಡಳಿತಗಾರನಾಗಿ ಇಳಿದು ಬರುವರು. ಅವರು ಶಿಲುಬೆಯನ್ನು ಒಡೆಯುವರು, ಹಂದಿಯನ್ನು ಕೊಲ್ಲುವರು ಮತ್ತು ಜಿಝ್ಯವನ್ನು (ಮುಸ್ಲಿಮೇತರರ ಮೇಲಿನ ತೆರಿಗೆ) ರದ್ದುಗೊಳಿಸುವರು. ಆಗ ಸಂಪತ್ತು ಎಷ್ಟರ ಮಟ್ಟಿಗೆ ಹೇರಳವಾಗುತ್ತದೆಯೆಂದರೆ ಅದನ್ನು ಸ್ವೀಕರಿಸಲು ಯಾರೂ ಮುಂದೆ ಬರುವುದಿಲ್ಲ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆಣೆ ಮಾಡಿ ಹೇಳುವುದೇನೆಂದರೆ, ಮರ್ಯಮರ ಪುತ್ರ ಈಸಾ (ಅವರ ಮೇಲೆ ಶಾಂತಿಯಿರಲಿ) ಇಳಿದು ಬರುವ ಸಮಯವು ಹತ್ತಿರದಲ್ಲಿದೆ ಮತ್ತು ಅವರು ಇಸ್ಲಾಮಿಕ್ ಕಾನೂನಿನ ಪ್ರಕಾರ ನ್ಯಾಯಯುತವಾಗಿ ಆಡಳಿತ ನಡೆಸುತ್ತಾರೆ. ಕ್ರೈಸ್ತರು ಗೌರವಿಸುವ ಶಿಲುಬೆಯನ್ನು ಅವರು ಒಡೆದು ಹಾಕುತ್ತಾರೆ. ಈಸಾ (ಅವರ ಮೇಲೆ ಶಾಂತಿಯಿರಲಿ) ಹಂದಿಯನ್ನು ಕೊಲ್ಲುತ್ತಾರೆ. ಅವರು ಜಿಝ್ಯವನ್ನು ರದ್ದುಗೊಳಿಸಿ ಮನುಷ್ಯರೆಲ್ಲರನ್ನೂ ಇಸ್ಲಾಂ ಧರ್ಮಕ್ಕೆ ಸೇರಿಸುತ್ತಾರೆ. ಸಂಪತ್ತು ಹರಿಯತೊಡಗಿ ಯಾರೂ ಅದನ್ನು ಸ್ವೀಕರಿಸುವುದಿಲ್ಲ. ಏಕೆಂದರೆ, ಅದು ಅಷ್ಟರಮಟ್ಟಿಗೆ ಹೇರಳವಾಗಿರುತ್ತದೆ. ಎಲ್ಲರಿಗೂ ಅವರ ಬಳಿಯಿರುವುದೇ ಸಾಕಾಗಿರುತ್ತದೆ. ಸಮೃದ್ಧಿಗಳು ಇಳಿಯುತ್ತವೆ ಮತ್ತು ಒಳಿತುಗಳು ಅನುಗಮಿಸಿ ಬರುತ್ತವೆ.

فوائد الحديث

ಅಂತ್ಯಸಮಯದಲ್ಲಿ ಈಸಾ (ಅವರ ಮೇಲೆ ಶಾಂತಿಯಿರಲಿ) ಇಳಿದು ಬರುವುದನ್ನು ಮತ್ತು ಅದು ಅಂತ್ಯಸಮಯದ ಚಿಹ್ನೆಗಳಲ್ಲಿ ಒಂದಾಗಿದೆಯೆಂದು ದೃಢೀಕರಿಸಲಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಂದ ಧರ್ಮಶಾಸ್ತ್ರವು ಹಾಗೆಯೇ ಉಳಿಯುತ್ತದೆ ಮತ್ತು ಅದು ಎಂದಿಗೂ ರದ್ದಾಗುವುದಿಲ್ಲವೆಂದು ತಿಳಿಸಲಾಗಿದೆ.

ಅಂತ್ಯಕಾಲದಲ್ಲಿ ಜನರಿಗೆ ಸಂಪತ್ತಿನ ಅಗತ್ಯವಿಲ್ಲದಿದ್ದರೂ ಅದು ಸಮೃದ್ಧವಾಗಿರುತ್ತದೆ.

ಇಸ್ಲಾಂ ಧರ್ಮವು ಶಾಶ್ವತವಾಗಿ ಉಳಿಯುತ್ತದೆಯೆಂಬ ಶುಭ ಸುದ್ದಿಯನ್ನು ತಿಳಿಸಲಾಗಿದೆ. ಏಕೆಂದರೆ ಈಸಾ (ಅವರ ಮೇಲೆ ಶಾಂತಿಯಿರಲಿ) ಇಸ್ಲಾಂ ಧರ್ಮದಂತೆ ಆಡಳಿತ ನಡೆಸುತ್ತಾರೆ.

التصنيفات

Pre-Islamic Prophets and Messengers, peace be upon them, Our Prophet Muhammad, may Allah's peace and blessings be upon him, The Barzakh Life (After death Period), Universality of Islam