ಬಿಸ್ಮಿಲ್ಲಾಹಿ ರ‍್ರಹ್ಮಾನಿ ರ್‍ರಹೀಮ್ ಅವತೀರ್ಣವಾಗುವ ತನಕ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)…

ಬಿಸ್ಮಿಲ್ಲಾಹಿ ರ‍್ರಹ್ಮಾನಿ ರ್‍ರಹೀಮ್ ಅವತೀರ್ಣವಾಗುವ ತನಕ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೂರಗಳು (ಕುರ್‌ಆನಿನ ಅಧ್ಯಾಯಗಳು) ಎಲ್ಲಿ ಕೊನೆಯಾಗುತ್ತವೆಯೆಂದು ತಿಳಿಯುತ್ತಿರಲಿಲ್ಲ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಬಿಸ್ಮಿಲ್ಲಾಹಿ ರ‍್ರಹ್ಮಾನಿ ರ್‍ರಹೀಮ್ ಅವತೀರ್ಣವಾಗುವ ತನಕ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೂರಗಳು (ಕುರ್‌ಆನಿನ ಅಧ್ಯಾಯಗಳು) ಎಲ್ಲಿ ಕೊನೆಯಾಗುತ್ತವೆಯೆಂದು ತಿಳಿಯುತ್ತಿರಲಿಲ್ಲ."

[صحيح] [رواه أبو داود]

الشرح

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ವಿವರಿಸುವುದೇನೆಂದರೆ, ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರ್‌ಆನ್ ಸೂರಗಳು (ಅಧ್ಯಾಯಗಳು) ಅವತೀರ್ಣವಾಗುತ್ತಿದ್ದವು. ಆದರೆ, ಬಿಸ್ಮಿಲ್ಲಾಹಿ ರ‍್ರಹ್ಮಾನಿ ರ್‍ರಹೀಮ್ ಅವತೀರ್ಣವಾಗುವ ತನಕ ಸೂರಗಳು ಎಲ್ಲಿ ಕೊನೆಗೊಳ್ಳುತ್ತವೆಯೆಂದು ಅವರಿಗೆ ತಿಳಿಯುತ್ತಿರಲಿಲ್ಲ. ಅದು ಅವತೀರ್ಣವಾದಾಗ ಹಿಂದಿನ ಸೂರ ಇಲ್ಲಿ ಕೊನೆಯಾಗುತ್ತದೆ ಮತ್ತು ಇಲ್ಲಿಂದ ಹೊಸ ಸೂರ ಆರಂಭವಾಗುತ್ತದೆ ಎಂದು ಅವರು ತಿಳಿಯುತ್ತಿದ್ದರು.

فوائد الحديث

ಬಿಸ್ಮಿಲ್ಲಾಹಿ ರ‍್ರಹ್ಮಾನಿ ರ್‍ರಹೀಮ್ ಪ್ರತಿ ಎರಡು ಸೂರಗಳ ನಡುವಿನ ವಿಭಾಜಕವಾಗಿದೆ. ಸೂರ ಅನ್ಫಾಲ್ ಮತ್ತು ಸೂರ ತೌಬದ ಹೊರತು.

التصنيفات

Revelation and Collection of the Qur'an, Collecting the Qur'an, Stops and Starts