ಓ ಜನರೇ! ನಾನು ಹೀಗೆ ಮಾಡಿದ್ದು ನೀವು ನನ್ನನ್ನು ಅನುಸರಿಸುವುದಕ್ಕಾಗಿ ಮತ್ತು ನನ್ನ ನಮಾಝನ್ನು ಕಲಿಯುವುದಕ್ಕಾಗಿ

ಓ ಜನರೇ! ನಾನು ಹೀಗೆ ಮಾಡಿದ್ದು ನೀವು ನನ್ನನ್ನು ಅನುಸರಿಸುವುದಕ್ಕಾಗಿ ಮತ್ತು ನನ್ನ ನಮಾಝನ್ನು ಕಲಿಯುವುದಕ್ಕಾಗಿ

ಅಬೂ ಹಾಝಿಂ ಬಿನ್ ದೀನಾರ್ ರಿಂದ ವರದಿ: ಒಮ್ಮೆ ಕೆಲವು ಜನರು ಸಹಲ್ ಬಿನ್ ಸಅದ್ ಸಾಇದೀಯವರ ಬಳಿಗೆ ಬಂದರು. ಮಿಂಬರ್ (ಪ್ರವಚನ ಪೀಠ) ವನ್ನು ಯಾವುದರಿಂದ ನಿರ್ಮಿಸಲಾಗಿದೆಯೆಂಬ ಬಗ್ಗೆ ಅವರಿಗೆ ತರ್ಕವಿತ್ತು. ಅವರು ಅದರ ಬಗ್ಗೆ ಕೇಳಿದಾಗ, ಸಹಲ್ ಉತ್ತರಿಸಿದರು: "ಅಲ್ಲಾಹನಾಣೆ! ಅದನ್ನು ಯಾವುದರಿಂದ ತಯಾರಿಸಲಾಗಿದೆಯೆಂದು ನನಗೆ ತಿಳಿದಿದೆ. ಅದನ್ನು ಸ್ಥಾಪಿಸಲಾದ ಮೊದಲನೇ ದಿನದಿಂದಲೇ ನಾನು ಅದನ್ನು ನೋಡಿದ್ದೇನೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರಲ್ಲಿ ಕುಳಿತುಕೊಂಡ ಮೊದಲ ದಿನದಿಂದಲೇ ನಾನು ಅದನ್ನು ನೋಡಿದ್ದೇನೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನ್ಸಾರ್‌ಗಳಲ್ಲಿ ಸೇರಿದ ಒಬ್ಬ ಮಹಿಳೆಗೆ—ಸಹಲ್ ಆ ಮಹಿಳೆಯ ಹೆಸರನ್ನು ಹೇಳಿದ್ದರು—ಹೇಳಿ ಕಳುಹಿಸಿದರು: "ನನಗೆ ಕೆಲವು ಮೆಟ್ಟಲುಗಳಿರುವ ಪೀಠವನ್ನು ತಯಾರಿಸಿಕೊಡಲು ನಿನ್ನ ಬಡಗಿ ಗುಲಾಮನಿಗೆ ಹೇಳು. ನಾನು ಅದರಲ್ಲಿ ಕುಳಿತು ಜನರೊಂದಿಗೆ ಮಾತನಾಡುವುದಕ್ಕಾಗಿ." ಅವಳು ತನ್ನ ಗುಲಾಮನಿಗೆ ಆದೇಶಿಸಿದಾಗ ಆತ ಅದನ್ನು ಗಾಬದ (ಮದೀನದ ಬಳಿಯ ಒಂದು ಸ್ಥಳ) ಮರದಿಂದ ತಯಾರಿಸಿ ಆಕೆಯ ಕೈಗೆ ನೀಡಿದನು. ಅವಳು ಅದನ್ನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಳುಹಿಸಿಕೊಟ್ಟಳು. ಅವರು ಅದನ್ನು ಅದರ ಸ್ಥಳದಲ್ಲಿ ಸ್ಥಾಪಿಸುವಂತೆ ಹೇಳಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರ ಮೇಲೇರಿ ನಮಾಝ್ ನಿರ್ವಹಿಸುವುದನ್ನು ನಾನು ನೋಡಿದೆ. ಅವರು ಅದರ ಮೇಲಿಂದಲೇ ತಕ್ಬೀರ್ ಹೇಳಿದರು ಮತ್ತು ರುಕೂ ಮಾಡಿದರು. ನಂತರ ಹಿಂಭಾಗಕ್ಕೆ ಚಲಿಸುತ್ತಾ ಕೆಳಗಿಳಿದು ಪೀಠದ ಬುಡದಲ್ಲಿ ಸುಜೂದ್ ಮಾಡಿದರು. ನಂತರ ಪುನಃ ಅದರ ಮೇಲೇರಿದರು. ನಮಾಝ್ ಮುಗಿಸಿದ ನಂತರ ಅವರು ಜನರ ಕಡೆಗೆ ತಿರುಗಿ ಹೇಳಿದರು: "ಓ ಜನರೇ! ನಾನು ಹೀಗೆ ಮಾಡಿದ್ದು ನೀವು ನನ್ನನ್ನು ಅನುಸರಿಸುವುದಕ್ಕಾಗಿ ಮತ್ತು ನನ್ನ ನಮಾಝನ್ನು ಕಲಿಯುವುದಕ್ಕಾಗಿ."

[صحيح] [متفق عليه]

الشرح

ಒಮ್ಮೆ ಕೆಲವು ಜನರು ಒಬ್ಬ ಸಹಾಬಿಯ ಬಳಿಗೆ ಬಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉಪಯೋಗಿಸುತ್ತಿದ್ದ ಮಿಂಬರ್ (ಪ್ರವಚನ ಪೀಠ) ಯಾವುದರಿಂದ ತಯಾರಿಸಲಾಗಿದೆ ಎಂದು ಕೇಳಿದರು. ಅವರಿಗೆ ಅದರ ಬಗ್ಗೆ ತರ್ಕವಿತ್ತು. ಆಗ ಆ ಸಹಾಬಿ ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನ್ಸಾರ್‌ಗಳಲ್ಲಿ, ಸೇರಿದ ಒಬ್ಬ ಮಹಿಳೆಗೆ ಹೇಳಿ ಕಳುಹಿಸಿದರು. ಆ ಮಹಿಳೆಗೆ ಒಬ್ಬ ಬಡಗಿ ಗುಲಾಮನಿದ್ದನು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜನರೊಂದಿಗೆ ಮಾತನಾಡುವಾಗ ಕುಳಿತುಕೊಳ್ಳಲು ನನಗೊಂದು ಮಿಂಬರ್ (ಪ್ರವಚನ ಪೀಠ) ತಯಾರಿಸಿಕೊಡುವಂತೆ ನಿನ್ನ ಗುಲಾಮನಿಗೆ ಹೇಳು." ಅವಳು ತಾಮಾರಿಸ್ಕ್ ಮರದಿಂದ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಮಿಂಬರ್ ತಯಾರಿಸುವಂತೆ ಗುಲಾಮನಿಗೆ ಹೇಳಿದಳು. ಆತ ಅದನ್ನು ತಯಾರಿಸಿಕೊಟ್ಟಾಗ ಅವಳು ಅದನ್ನು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಳುಹಿಸಿಕೊಟ್ಟಳು. ಪ್ರವಾದಿಯವರು ಅದನ್ನು ಮಸೀದಿಯಲ್ಲಿ ಅದರ ಸ್ಥಾನದಲ್ಲಿಡಲು ಆಜ್ಞಾಪಿಸಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರ ಮೇಲೆ ನಮಾಝ್ ನಿರ್ವಹಿಸಿದರು. ಅದರ ಮೇಲೆ ನಿಂತು ತಕ್ಬೀರ್ ಹೇಳಿ ನಂತರ ರುಕೂ ಮಾಡಿದರು. ನಂತರ ತಮ್ಮ ಮುಖವನ್ನು ಹಿಂಭಾಗಕ್ಕೆ ತಿರುಗಿಸದೆ ಹಿಂಭಾಗಕ್ಕೆ ಚಲಿಸುತ್ತಾ ಕೆಳಗಿಳಿದರು. ನಂತರ ಮಿಂಬರಿನ ಬುಡದಲ್ಲಿ ಸುಜೂದ್ ಮಾಡಿದರು. ನಂತರ ಪುನಃ ಮಿಂಬರ್ ಏರಿದರು. ನಮಾಝ್ ಮುಗಿದ ಬಳಿಕ ಅವರು ಜನರ ಕಡೆಗೆ ತಿರುಗಿ ಹೇಳಿದರು: "ಓ ಜನರೇ! ನಾನು ಹೀಗೆ ಮಾಡಿದ್ದು ನೀವು ನನ್ನನ್ನು ಅನುಸರಿಸುವುದಕ್ಕಾಗಿ ಮತ್ತು ನನ್ನ ನಮಾಝನ್ನು ಕಲಿಯುವುದಕ್ಕಾಗಿ."

فوائد الحديث

ಮಿಂಬರನ್ನು ಉಪಯೋಗಿಸುವುದು ಮತ್ತು ಪ್ರವಚನಕಾರರು ಅದರ ಮೇಲೇರುವುದು ಅಪೇಕ್ಷಣೀಯವಾಗಿದೆ. ಇದರಲ್ಲಿ ಜನರಿಗೆ ಸಂದೇಶವನ್ನು ತಲುಪಿಸುವುದು ಮತ್ತು ಸಂದೇಶ ಕೇಳುವಂತೆ ಮಾಡುವುದು ಎಂಬ ಎರಡು ಪ್ರಯೋಜನಗಳಿವೆ.

ಕಲಿಸುವುದಕ್ಕೋಸ್ಕರ ಮಿಂಬರ್‌ನ ಮೇಲೆ ನಿಂತು ನಮಾಝ್ ನಿರ್ವಹಿಸಬಹುದು. ಅಗತ್ಯವಿದ್ದರೆ ಇಮಾಮರು ಹಿಂಬಾಲಕರಿಗಿಂತಲೂ ಎತ್ತರದ ಸ್ಥಳದಲ್ಲಿ ನಿಲ್ಲಬಹುದು.

ಮುಸ್ಲಿಮರಿಗೆ ಅಗತ್ಯವಿರುವ ವಸ್ತುಗಳನ್ನು ತಯಾರಿಸಿಕೊಡಲು ವೃತ್ತಿಪರರಿಂದ ಸಹಾಯ ಕೇಳಬಹುದು.

ಅಗತ್ಯ ಬಿದ್ದರೆ ನಮಾಝ್‌ನಲ್ಲಿ ಸ್ವಲ್ಪ ಅಲುಗಾಡಬಹುದು.

ನಮಾಝ್ ಮಾಡುವಾಗ ಹಿಂಬಾಲಕರು ಕಲಿಯುವ ಉದ್ದೇಶದಿಂದ ಇಮಾಮರನ್ನು ನೋಡಬಹುದು. ಇದು ನಮಾಝಿನಲ್ಲಿ ಭಯಭಕ್ತಿ ಪಾಲಿಸಬೇಕೆಂಬ ಆಜ್ಞೆಗೆ ವಿರುದ್ಧವಲ್ಲ.

التصنيفات

Method of Prayer