ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರುಕೂನಿಂದ ಬೆನ್ನನ್ನು ಎತ್ತುವಾಗ, ಹೀಗೆ ಹೇಳುತ್ತಿದ್ದರು:…

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರುಕೂನಿಂದ ಬೆನ್ನನ್ನು ಎತ್ತುವಾಗ, ಹೀಗೆ ಹೇಳುತ್ತಿದ್ದರು: "ಸಮಿಅಲ್ಲಾಹು ಲಿಮನ್ ಹಮಿದ

ಇಬ್ನ್ ಅಬೂ ಔಫಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರುಕೂನಿಂದ ಬೆನ್ನನ್ನು ಎತ್ತುವಾಗ, ಹೀಗೆ ಹೇಳುತ್ತಿದ್ದರು: "ಸಮಿಅಲ್ಲಾಹು ಲಿಮನ್ ಹಮಿದ, ಅಲ್ಲಾಹುಮ್ಮ ರಬ್ಬನಾ ಲಕಲ್ ಹಮ್ದ್, ಮಿಲ್‌ಅ ಸ್ಸಮಾವಾತಿ ವಮಿಲ್‌ಅಲ್ ಅರ್ದಿ, ವಮಿಲ್‌ಅ ಮಾ ಶಿಅ್‌ತ ಮಿನ್ ಶೈಇನ್ ಬಅ್‌ದ್."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝಿನಲ್ಲಿ ರುಕೂನಿಂದ ಬೆನ್ನನ್ನು ಎತ್ತುವಾಗ ಹೀಗೆ ಹೇಳುತ್ತಿದ್ದರು: "ಸಮಿಅಲ್ಲಾಹು ಲಿಮನ್ ಹಮಿದ", ಅಂದರೆ ಯಾರು ಅಲ್ಲಾಹನನ್ನು ಸ್ತುತಿಸುತ್ತಾರೋ ಅವರಿಗೆ ಅಲ್ಲಾಹು ಉತ್ತರ ನೀಡಲಿ. ಕೆಲವರು ಇದಕ್ಕೆ, ಅಲ್ಲಾಹು ಅವರನ್ನು ಪ್ರಶಂಸಿಸಲಿ ಮತ್ತು ಪ್ರತಿಫಲ ನೀಡಲಿ ಎಂಬ ಅರ್ಥವನ್ನು ಹೇಳಿದ್ದಾರೆ. ನಂತರ ಅವರು ಅಲ್ಲಾಹನನ್ನು ಸ್ತುತಿಸುತ್ತಾ ಹೀಗೆ ಹೇಳುತ್ತಿದ್ದರು: "ಅಲ್ಲಾಹುಮ್ಮ ರಬ್ಬನಾ ಲಕಲ್ ಹಮ್ದ್, ಮಿಲ್‌ಅ ಸ್ಸಮಾವಾತಿ ವಮಿಲ್‌ಅಲ್ ಅರ್ದಿ, ವಮಿಲ್‌ಅ ಮಾ ಶಿಅ್‌ತ ಮಿನ್ ಶೈಇನ್ ಬಅ್‌ದ್." ಇದು ಆಕಾಶಗಳು ಭೂಮಿಗಳು ಮತ್ತು ಅವುಗಳ ನಡುವೆಯಿರುವ, ಹಾಗೂ ಅಲ್ಲಾಹು ಬಯಸುವ ಎಲ್ಲವನ್ನೂ ತುಂಬಿಕೊಳ್ಳುವ ಸ್ತುತಿಯಾಗಿದೆ.

فوائد الحديث

ನಮಾಝ್ ಮಾಡುವವರು ರುಕೂನಿಂದ ಏಳುವಾಗ ಏನು ಹೇಳಬೇಕೆಂದು ವಿವರಿಸಲಾಗಿದೆ.

ರುಕೂನಿಂದ ಎದ್ದ ಬಳಿಕ ನೇರವಾಗಿ ಮತ್ತು ಶಾಂತವಾಗಿ ನಿಲ್ಲಬೇಕು. ನೇರವಾಗಿ ನಿಂತು ಶಾಂತವಾದ ನಂತರವೇ ಹೊರತು ಈ ಪ್ರಾರ್ಥನೆಯನ್ನು ಪಠಿಸಲಾಗುವುದಿಲ್ಲ.

ಈ ಪ್ರಾರ್ಥನೆಯನ್ನು ಎಲ್ಲಾ ಕಡ್ಡಾಯ ಮತ್ತು ಐಚ್ಛಿಕ ನಮಾಝ್‌ಗಳಲ್ಲೂ ಪಠಿಸಬೇಕಾಗಿದೆ.

التصنيفات

Obligatory Acts of Prayer, Method of Prayer, Dhikr (Invocation) during Prayer